ಚೆಂಡು ಬಡಿದ ಟೆನಿಸ್ ಅಂಪಾಯರ್ ಕಣ್ಣಿಗೆ ಶಸ್ತ್ರಚಿಕಿತ್ಸೆ
Team Udayavani, Feb 13, 2017, 3:45 AM IST
ಒಟ್ಟಾವ: ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಡೇವಿಸ್ ಕಪ್ ಪಂದ್ಯದ ವೇಳೆ ಕೆನಡದ ಡೆನಿಸ್ ಶಪೋವಾಲೋವ್ ಸಿಟ್ಟಿನಿಂದ ಎಸೆದ ಚೆಂಡು ಬಡಿದು ಕಣ್ಣಿಗೆ ಗಾಯವಾಗಿದ್ದ ಫ್ರಾನ್ಸ್ನ ಟೆನಿಸ್ ಅಂಪಾಯರ್ ಅರ್ನಾಡ್ ಗಾಬಾಸ್ ಅವರೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಎಎಫ್ಪಿ ಮೂಲಗಳ ಪ್ರಕಾರ 35ರ ಹರೆಯದ ಗಾಬಾಸ್ ಅವರ ರೆಟಿನಾ ಮತ್ತು ಕಾರ್ನಿಯಾಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ ಕಣ್ಣಿನ ಕುಳಿಗೆ ಗಾಯವಾಗಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದೆ. ಡೇವಿಸ್ ಕಪ್ನ ನಿರ್ಣಾಯಕ ಪಂದ್ಯದಲ್ಲಿ ಕೈಲ್ ಎಡ್ಮಂಡ್ ವಿರುದ್ಧ ಆಡುತ್ತಿರುವ ವೇಳೆ ಶಪೋವಾಲೋವ್ ಅಂಕ ಕಳೆದುಕೊಂಡ ಸಿಟ್ಟಿನಿಂದ ಚೆಂಡನ್ನು ಅಂಪಾಯರ್ ಕಡೆ ಎಸೆದಿದ್ದರು. ಚೆಂಡು ನೇರ ಅಂಪಾಯರ್ ಗಾಬಾಸ್ ಅವರ ಕಣ್ಣಿಗೆ ಬಡಿದಿತ್ತು. ಅನುಚಿತ ವರ್ತನೆಗಾಗಿ ಆ ಪಂದ್ಯವನ್ನು ಅನರ್ಹಗೊಳಿಸಿ ಎಡ್ಮಂಡ್ ವಿಜಯಿಯೆಂದು ಘೋಷಿಸಲಾಗಿತ್ತು.
ವಿಂಬಲ್ಡನ್ ಜೂನಿಯರ್ ಚಾಂಪಿಯನ್ ಆಗಿರುವ ಇಸ್ರೇಲ್ ಮೂಲದ ಶಪೋವಾಲೋವ್ ತನ್ನ ವರ್ತನೆಗೆ ಆಬಳಿಕ ಕ್ಷಮೆಯಾಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.