ಡೇವಿಸ್ ಕಪ್: ಪೇಸ್ ವಿಶ್ವದಾಖಲೆ
Team Udayavani, Apr 8, 2018, 6:25 AM IST
ತಿಯಾಂಜಿನ್: ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ವಿಶ್ವ ದಾಖಲೆಯೊಂದಿಗೆ ಚೀನ ವಿರುದ್ಧದ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತ 3-2 ಅಂತರದಿಂದ ಜಯ ಸಾಧಿಸಿದೆ. ಒಟ್ಟಾರೆ 43 ಡೇವಿಸ್ ಕಪ್ ಡಬಲ್ಸ್ ಪಂದ್ಯ ಗೆದ್ದಿರುವ ಪೇಸ್, ಡೇವಿಸ್ ಕೂಟದ ಇತಿಹಾಸದಲ್ಲಿ ಅತೀ ಹೆಚ್ಚು ಡಬಲ್ಸ್ ಪಂದ್ಯ ಗೆದ್ದ ಆಟಗಾರನೆಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ತಂಡದ ಗೆಲುವಿನೊಂದಿಗೆ ಭಾರತ ವಿಶ್ವ ಗುಂಪು ಪ್ಲೇ ಆಫ್ಗೆ ಅರ್ಹತೆ ಪಡೆದಿದೆ.
ಮೊದಲ ದಿನದ ಸ್ಪರ್ಧೆಯಲ್ಲಿ ಚೀನ ವಿರುದ್ಧದ 2 ಸಿಂಗಲ್ಸ್ ಪಂದ್ಯಗಳನ್ನು ಭಾರತ ಸೋತಿತ್ತು. ಆದರೆ ಶನಿವಾರ ಭಾರತ ಆಟಗಾರರು ಪಟ್ಟು ಸಡಿಸಲಿಲ್ಲ. ಹಿನ್ನಡೆಯಿದ್ದರೂ ಮುನ್ನಡೆಯುವ ಛಲದೊಂದಿಗೆ ಡಬಲ್ಸ್ ಆಟಗಾರರಾದ ಲಿಯಾಂಡರ್ ಪೇಸ್-ರೋಹನ್ ಬೋಪಣ್ಣ ಕಣಕ್ಕೆ ಇಳಿದರು. ಮಾ ಕ್ಸಿನ್-ಝಾಂಗ್ ವಿರುದ್ಧ 7-5, 6-7, 6-7 ಅಂತರದಿಂದ ಗೆಲುವು ಸಾಧಿಸಿದರು. ಭಾರತದ ಹಿನ್ನಡೆ ಅಂತರವನ್ನು 1-2ಕ್ಕೆ ತಗ್ಗಿಸಿದರು.
ಮೊದಲ ಸಿಂಗಲ್ಸ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿದ ರಾಮ್‌ಕುಮಾರ್ ರಾಮನಾಥನ್ ಮತ್ತೂಂದು ಸಿಂಗಲ್ಸ್‌ನಲ್ಲಿ ಡಿ ವು ಅವರನ್ನು 7-6 (4), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಹೀಗಾಗಿ ಹೋರಾಟ 2-2ರಿಂದ ಸಮಬಲಗೊಂಡಿತು. ಕೊನೆಯ ಸಿಂಗಲ್ಸ್‌ನಲ್ಲಿ ಸುಮಿತ್ ನಗಲ್ ಉಪಸ್ಥಿತಿಯ ಹೊರತಾಗಿಯೂ ಪ್ರಜ್ಞೆàಶ್ ಗುಣೇಶ್ವರನ್ ಅವರನ್ನು ಕಣಕ್ಕಿಳಿಸಲಾಯಿತು. ಅವರು ಯಿಬ್ಲಿಂಗ್ ವಿರುದ್ಧ 6-4, 6-2 ಅಂತರದಿಂದ ಗೆದ್ದು ಭಾರತದ ಸಂಭ್ರಮಕ್ಕೆ ಕಾರಣರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.