Davis Cup: ಸರ್ಬಿಯಾ ಸೆಮಿಫೈನಲಿಗೆ
Team Udayavani, Nov 24, 2023, 11:16 PM IST
ಮಲಗ (ಸ್ಪೇನ್): ನೋವಾಕ್ ಜೊಕೋವಿಕ್ ಅವರ ಅಮೋಘ ಆಟದಿಂದಾಗಿ ಸರ್ಬಿಯಾ ತಂಡವು ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸಿ ಡೇವಿಸ್ ಕಪ್ ಕೂಟದಲ್ಲಿ ಸೆಮಿಫೈನಲ್ ಹಂತಕ್ಕೇರಿತು.
ಅಗ್ರ ಕ್ರಮಾಂಕದ ಜೊಕೋವಿಕ್ ಅವರು ಕ್ಯಾಮರಾನ್ ನೂರಿ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಸರ್ಬಿಯಾ ತಂಡವು ಗ್ರೇಟ್ ಬ್ರಿಟನ್ ವಿರುದ್ಧ 2-0 ಅಂತರದ ಜಯ ಸಾಧಿಸಿ ಸೆಮಿಫೈನಲ್ ತಲುಪಿತು. ಸೆಮಿಫೈನಲ್‌ನಲ್ಲಿ ಸರ್ಬಿಯಾ ತಂಡವು ಜಾನ್ನಿಕ್ ಸಿನ್ನರ್ ಅವರ ಇಟಲಿ ತಂಡವನ್ನು ಎದುರಿಸಲಿದೆ. ಇಟಲಿ ಇನ್ನೊಂದು ಹೋರಾಟದಲ್ಲಿ ನೆದರ್ಲೆಂಡ್ಸ್ ತಂಡವನ್ನು ಕೆಡಹಿತ್ತು. ಇನ್ನೊಂದು ಸೆಮಿಫೈನಲ್ ಹೋರಾಟವು ಆಸ್ಟ್ರೇಲಿಯ ಮತ್ತು ಫಿನ್ಲಂಡ್ ನಡುವೆ ನಡೆಯಲಿದೆ.
ಗೆಲುವಿನ ಮೂಲಕ ಜೊಕೋವಿಕ್ ಅವರು ಡೇವಿಸ್‌ನಲ್ಲಿ ತನ್ನ ದೇಶದ ಪರ ಅತ್ಯಂತ ಯಶಸ್ವಿ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಸಿಂಗಲ್ಸ್‌ನಲ್ಲಿ ಸತತ 21ನೇ ಜಯವನ್ನು ಜೊಕೋವಿಕ್ ಒಲಿಸಿಕೊಂಡಿದ್ದಾರೆ. ಒಟ್ಟಾರೆ ದಾಖಲೆ 44ನೇ ಜಯ ಪಡೆದ ಜೊಕೋವಿಕ್ ಅವರು ಸಿಂಗಲ್ಸ್‌ನಲ್ಲಿ 40 ಪಂದ್ಯ ಗೆದ್ದು ಗಮನಾರ್ಹ ನಿರ್ವಹಣೆ ನೀಡಿದ್ದಾರೆ.
ದೇಶಕ್ಕಾಗಿ ಆಡುವುದು ಯಾವಾ ಗಲೂ ದೊಡ್ಡ ಒತ್ತಡ ಮತ್ತು ಪ್ರೇರಣೆ ಎಂದು ಜೊಕೊವಿಕ್ ಹೇಳಿದರು. ದೀರ್ಘ ಋತುವಿನ ಬಳಿಕ ನಾವು ಇಟಲಿ ವಿರುದ್ಧ ಆಡಲಿದ್ದೇವೆ. ಇಟಲಿ ಬಹಳ ಪ್ರಬಲ ರಾಷ್ಟ್ರ. ಆದರೆ ನಾವು ಹೋರಾಡಲು ಹೋಗುತ್ತೇವೆ ಮತ್ತು ಅಂಗಣದಲ್ಲಿಯೇ ಎಲ್ಲವೂ ನಿರ್ಧಾರವಾಗುವಂತೆ ಮಾಡಲಿದ್ದೇವೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.