Davis Cup Tennis; ಭಾರತ ವಿರುದ್ಧ ಉತ್ತಮ ನಿರ್ವಹಣೆ: ತಾಹಿರಿ
Team Udayavani, Sep 14, 2023, 11:23 PM IST
ಲಕ್ನೋ: ಡೇವಿಸ್ ಕಪ್ ವಿಶ್ವ ಬಣ ಎರಡರ ಹೋರಾಟದಲ್ಲಿ ನಮ್ಮ ತಂಡವು ಬಲಿಷ್ಠ ಭಾರತ ತಂಡದೆದುರು ಉತ್ತಮ ನಿರ್ವಹಣೆ ನೀಡುವ ದೃಢವಿಶ್ವಾಸಯಿದೆ ಎಂದು ಮೊರೊಕ್ಕೋ ತಂಡದ ನಾಯಕ ಮೆಹದಿ ತಾಹಿರಿ ಹೇಳಿದ್ದಾರೆ.
ತವರಿನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂಧ ನಮ್ಮ ಆಟಗಾರರು ತೀವ್ರ ಆಘಾತಗೊಂಡಿದ್ದಾರೆ. ಭೂಕಂಪ ಸಂಭವಿಸಿದ ದಿನವೇ ನಾವು ಭಾರತಕ್ಕೆ ಪ್ರಯಾಣಿಸಿತ್ತು. ನಮ್ಮ ಹೃದಯ ಮತ್ತು ಆತ್ಮ ತವರಿನ ಜನರ ಹತ್ತಿರವಿದೆ. ಇಂತಹ ಕಠಿನ ಪರಿಸ್ಥಿತಿಯಲ್ಲಿ ನಾವು ಅವರಿಂದ ದೂರ ಇರಲು ಬಹಳ ಕಷ್ಟ ಆಗುತ್ತಿದೆ. ಬಹಳಷ್ಟು ಜನರು ಭೂಕಂಪದಿಂದ ಮೃತಪಟ್ಟಿದ್ದಾರೆ. ನಾವು ಅವರಿಗೆ ಸಹಾಯ ಮಾಡಲು ಬಯಸಿದ್ದೆವು. ದುರದೃಷ್ಟವಶಾತ್ ನಾವು ಇಲ್ಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ. ಶುಕ್ರವಾರ ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದ ಸುಮಾರು ಮೂರು ಸಾವಿರದಷ್ಟು ಜನರು ಮೃತಪಟ್ಟಿದ್ದರೆ 5 ಸಾವಿರ ಜನರು ಗಾಯಗೊಂಡಿದ್ದರು.
ಭಾರತ ತಂಡದಲ್ಲಿ ಹಲವು ಉತ್ತಮ ಸಿಂಗಲ್ಸ್ ಆಟಗಾರರು ಇದ್ದಾರೆ. ಆದರೂ ನಾವು ಉತ್ತಮ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ. ಡೇವಿಸ್ ಕಪ್ ಹೋರಾಟವು ಸೆ. 16 ಮತ್ತು 17ರಂದು ನಡೆಯಲಿದೆ.
ಭಾರತ ಪರ ಸುಮಿತ್ ನಗಲ್ ಮತ್ತು ಶಶಿ ಮುಕುಂದ್ ಸಿಂಗಲ್ಸ್‌ನಲ್ಲಿ ಆಡಲಿದ್ದಾರೆ. ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಡಬಲ್ಸ್‌ನಲ್ಲಿ ಆಡಲಿದ್ದರೆ ದಿಗ್ವಿಜಯ್ ಪ್ರತಾಪ್ ಸಿಂಗ್ ತಂಡದ ಐದನೇ ಸದಸ್ಯರಾಗಿ ಇರಲಿದ್ದಾರೆ.
ಡೇವಿಸ್‌ನಲ್ಲಿ ಹೋರಾಡಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ದುರ್ಬಲ ತಂಡ ವಾಗಿರಬಹುದು. ಆದರೆ ಪಂದ್ಯ ಗಳು ರ್‍ಯಾಂಕಿಂಗ್ ಆಧಾರದಲ್ಲಿ ನಡೆ ಯುವುದಿಲ್ಲ. ಅಂಗಣದಲ್ಲಿ ಉತ್ತಮ ನಿರ್ವಹಣೆ ನೀಡುವವರನ್ನು ಪಂದ್ಯದ ಫಲಿ ತಾಂಶ ಅವಲಂಭಿಸಿದೆ. ನಾವು ಗೆಲ್ಲಲು ಹೋರಾಡ ಲಿದ್ದೇವೆ ಎಂದು ತಾಹಿರಿ ಹೇಳಿದ್ದಾರೆ.
ನಾವು ಮೊರೊಕ್ಕೋವನ್ನು ಹಗುರವಾಗಿ ಕಾಣುವುದಿಲ್ಲ. ಅದರ ಜತೆ ಇಲ್ಲಿನ ಭಾರೀ ಸೆಕೆ ನಮಗೆ ದೊಡ್ಡ ಸವಾಲು ಆಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಆಡಿ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ಭಾರತ ತಂಡದ ನಾಯಕ ರೋಹಿತ್ ರಾಜ್‌ಪಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.