ಡೇವಿಸ್: ತಟಸ್ಥ ತಾಣಕ್ಕೆ ಭಾರತ-ಪಾಕ್ ಪಂದ್ಯ
Team Udayavani, Nov 5, 2019, 11:37 PM IST
ಹೊಸದಿಲ್ಲಿ: ಪಾಕಿಸ್ಥಾನದ ಆತಿಥ್ಯದಲ್ಲಿ ನ. 29ರಿಂದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಭಾರತ-ಪಾಕಿಸ್ಥಾನ ನಡುವಿನ ಡೇವಿಸ್ ಕಪ್ ಏಶ್ಯ ಒಶಿಯಾನಿಯ ಕೂಟದ ತಾಣವನ್ನು ಹಠಾತ್ ಬೆಳವಣಿಗೆಯಲ್ಲಿ ತಟಸ್ಥ ತಾಣಕ್ಕೆ ವರ್ಗಾಯಿಸಲಾಗಿದೆ.
ಸೋಮವಾರದ ತನಕ ಇಸ್ಲಾಮಾ ಬಾದ್‌ನಲ್ಲೇ ಕೂಟ ಆಯೋಜಿಸಲು ನಿರ್ಣಯಿಸಲಾಗಿತ್ತು. ಆದರೆ ಭದ್ರತೆ ಕಾರಣದಿಂದ ಮಹೇಶ್ ಭೂಪತಿ ಸೇರಿದಂತೆ ಭಾರತೀಯ ಆಟಗಾರರು ಅಲ್ಲಿಗೆ ತೆರಳಲು ನಿರಾಕರಿಸಿದ್ದರು, ತಟಸ್ಥ ತಾಣದಲ್ಲಿ ಕೂಟವನ್ನು ಆಯೋಜಿಸುವಂತೆ ಅಖೀಲ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ)ಅನ್ನು ಒತ್ತಾಯಿಸಿತ್ತು. ಆಟಗಾರರ ಆತಂಕವನ್ನು ಎಐಟಿಎ ತನ್ನ ಮೇಲಿನ ಸಂಸ್ಥೆಯಾದ ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ (ಐಟಿಎಫ್)ಕ್ಕೆ ತಿಳಿಸಿತ್ತು. ಪರಿಸ್ಥಿತಿಯ ಚಿತ್ರಣವನ್ನು ಮನವರಿಕೆ ಮಾಡಿಕೊಟ್ಟಿತ್ತು.
ಐಟಿಎಫ್ ಹಾಗೂ ಡೇವಿಸ್ ಕಪ್ ಸಂಘಟಕರು ಈ ವಿಷಯವಾಗಿ ಚರ್ಚಿಸಿ ಕೊನೆಗೆ ಆಟಗಾರರ ಹಿತಾ ಸಕ್ತಿಗೆ ಮೊದಲ ಆದ್ಯತೆ ಎಂದು ಹೇಳುವ ಮೂಲಕ ತಟಸ್ಥ ತಾಣಕ್ಕೆ ಕೂಟವನ್ನು ವರ್ಗಾಯಿಸಲು ತೀರ್ಮಾನಿಸಿದರು. ಕೂಟ ನಡೆಯಲಿರುವ ತಟಸ್ಥ ತಾಣವನ್ನು ಪಾಕಿಸ್ಥಾನ ಟೆನಿಸ್ ಸಂಸ್ಥೆ (ಪಿಟಿಎಫ್) ಆಯ್ಕೆ ಮಾಡಲಿದೆ. ಅದು ತನ್ನ ತಟಸ್ಥ ತಾಣದ ಹೆಸರನ್ನು ಶೀಘ್ರವಾಗಿ ಪ್ರಕಟಿಸಲಿದೆ ಎಂದು ಐಟಿಎಫ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.