ಕಾಂಗರೂ ನಾಡಿನಲ್ಲಿ ಭಾರತಕ್ಕೆ ಡೇ-ನೈಟ್ ಪರೀಕ್ಷೆ
ವಿದೇಶದಲ್ಲಿ ಮೊದಲ ಹಗಲು-ರಾತ್ರಿ ಟೆಸ್ಟ್ ಆಡಲಿರುವ ಭಾರತ
Team Udayavani, Dec 16, 2020, 6:15 AM IST
ಅಡಿಲೇಡ್: ಸೀಮಿತ ಓವರ್ ಕ್ರಿಕೆಟ್ ಪಂದ್ಯ ಗಳ ಅಬ್ಬರದಿಂದಾಗಿ ಐದು ದಿನಗಳ ಸಾಂಪ್ರದಾಯಿಕ ಟೆಸ್ಟ್ ಪಂದ್ಯ ನಶಿಸಿ ಹೋಗುವ ಭೀತಿಯಲ್ಲಿದೆ. ಇದರ ಉಳಿವಿಗೆ ಹಾಗೂ ಜನಪ್ರಿಯತೆಗಾಗಿ ರೂಪಿಸಲಾದ ವಿಶೇಷ ಪ್ರಯತ್ನಗಳಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವೂ ಒಂದು. ಇದಕ್ಕೀಗ ಕೇವಲ ಐದರ ಹರೆಯ. ತನ್ನ ಬೆಡಗು, ಬಿನ್ನಾಣದಿಂದ ನಿಧಾನವಾಗಿ ಕ್ರಿಕೆಟ್ ಅಭಿಮಾನಿಗಳನ್ನು, ವೀಕ್ಷಕರನ್ನು ಸೆಳೆಯಲಾರಾಂಭಿಸಿದ ಅಹರ್ನಿಶಿ ಟೆಸ್ಟ್ ಪಂದ್ಯವೀಗ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಲಾರಂಭಿಸಿದೆ.
ಆಸ್ಟ್ರೇಲಿಯವೇ ರೂವಾರಿ
ಕ್ರಿಕೆಟ್ ಎನ್ನುವುದು ಇಂಗ್ಲೆಂಡಿನ ಕೊಡುಗೆಯಾದರೆ, ಕಾಲ ಕಾಲಕ್ಕೆ ಈ ಕ್ರೀಡೆಗೆ ನೂತನ ಸ್ಪರ್ಶ ನೀಡುತ್ತ, ಇದನ್ನು ಇನ್ನಷ್ಟು ಆಕರ್ಷಕ ಹಾಗೂ ರೋಚಕವಾಗಿ ಇರುವಂತೆ ಮಾಡಿದ ಹೆಗ್ಗಳಿಕೆ ಆಸ್ಟ್ರೇಲಿಯಕ್ಕೆ ಸಲ್ಲುತ್ತದೆ. ಆಸ್ಟ್ರೇಲಿಯದ ಮಾಧ್ಯಮ ದೈತ್ಯ ಕೆರ್ರಿ ಪ್ಯಾಕರ್ 70ರ ದಶಕದಲ್ಲಿ “ಬಂಡಾಯ ಕ್ರಿಕೆಟ್’ ಪ್ರಾರಂಭಿಸಿದಾಗ ಇದಕ್ಕೆ ಹೊಸ ರಂಗು ನೀಡುವ ಪ್ರಯತ್ನ ಮಾಡಿದ್ದರು. ಬಳಿಕ 1992ರ ಏಕದಿನ ವಿಶ್ವಕಪ್ ಆತಿಥ್ಯ ವಹಿಸಿದ ಆಸ್ಟ್ರೇಲಿಯ ಇದನ್ನು ವರ್ಣಮಯಗೊಳಿಸಿತು. ಬಣ್ಣದ ಉಡುಗೆ, ಹಗಲು-ರಾತ್ರಿ ಪಂದ್ಯಗಳ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿತು. ಇದೀಗ ಟೆಸ್ಟ್ ಪಂದ್ಯದ ಸರದಿ.
ಆಸೀಸ್ ಯಶಸ್ವೀ ತಂಡ
2015ರಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ “ಅಡಿಲೇಡ್ ಓವಲ್’ನಲ್ಲಿ ಟೆಸ್ಟ್ ಇತಿಹಾಸದ ಪ್ರಪ್ರಥಮ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಇದನ್ನು ಆಸ್ಟ್ರೇಲಿಯ 3 ವಿಕೆಟ್‌ಗಳಿಂದ ಗೆದ್ದಿತ್ತು. ಈ ವರೆಗೆ 14 ಡೇ-ನೈಟ್ ಟೆಸ್ಟ್ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳೂ ಸ್ಪಷ್ಟ ಫಲಿತಾಂಶ ದಾಖಲಿಸಿದ್ದು ವಿಶೇಷ. ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ನೂರು ಪ್ರತಿಶತ ಗೆಲುವಿನ ದಾಖಲೆ ಹೊಂದಿರುವ ಅತ್ಯಂತ ಯಶಸ್ವೀ ತಂಡ. ಅದು ಆಡಿದ ಏಳೂ ಟೆಸ್ಟ್‌ಗಳಲ್ಲಿ ಜಯ ಸಾಧಿಸಿದೆ. ಇದರಲ್ಲಿ 4 ಗೆಲುವು ಅಡಿಲೇಡ್‌ನಲ್ಲಿ ಒಲಿದಿದೆ. ಹೀಗಾಗಿ ಆಸೀಸ್ ಅಡಿಲೇಡ್‌ನ ಅಜೇಯ ತಂಡ.
ಭಾರತ ಒಂದೇ ಟೆಸ್ಟ್
ಅಫ್ಘಾನಿಸ್ಥಾನ, ಅಯರ್‌ಲ್ಯಾಂಡ್ ಹೊರತುಪಡಿಸಿ ಟೆಸ್ಟ್ ಮಾನ್ಯತೆ ಪಡೆದ ಎಲ್ಲ ತಂಡಗಳು ಅಹರ್ನಿಶಿ ಟೆಸ್ಟ್ ಆಡಿವೆ. ಈ ವರೆಗೆ ಭಾರತ ಆಡಿದ್ದು ಒಂದೇ ಡೇ-ನೈಟ್ ಟೆಸ್ಟ್. ಇದನ್ನು ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದಲ್ಲಿ ಆಡಿತ್ತು. ಭಾರತ ಇನ್ನಿಂಗ್ಸ್ ಮತ್ತು 46 ರನ್ನುಗಳ ಜಯ ಸಾಧಿಸಿತ್ತು. ಇದೀಗ ವಿದೇಶದಲ್ಲಿ ಮೊದಲ ಸಲ ಪಿಂಕ್ ಬಾಲ್ ಟೆಸ್ಟ್ ಆಡಲಿಳಿಯಲಿದೆ.
ಪಿಂಕ್ ಬಾಲ್ ಟೆಸ್ಟ್
5 ದಿನಗಳ ಕಾಲ ನಡೆಯುವ, ತಲಾ ಎರಡು ಇನ್ನಿಂಗ್ಸ್‌ಗಳ ಟೆಸ್ಟ್ ಪಂದ್ಯ ಕ್ರಮೇಣ ಬೋರ್ ಆಗತೊಡಗಿದಾಗ ಆಸ್ಟ್ರೇಲಿಯ ಇಲ್ಲಿಯೂ ಹೊಸತನ ಮೂಡಿಸುವ ಪ್ರಯತ್ನಕ್ಕೆ ಮುಂದಾಯಿತು. ಆಗ ಅವತರಿಸಿದ್ದೇ ಹಗಲು-ರಾತ್ರಿ ಟೆಸ್ಟ್ ಪಂದ್ಯ. ಆಟಗಾರರ ಜೆರ್ಸಿ ಬಿಳಿಯದೇ ಆದರೂ ಚೆಂಡಿನ ಬಣ್ಣ ಮಾತ್ರ ಕೆಂಪಲ್ಲ, ಪಿಂಕ್. ಹೊನಲು ಬೆಳಕಿನಲ್ಲಿ ಇದು ಸ್ಪಷ್ಟವಾಗಿ ಗೋಚರಿಸುವುದರಿಂದ ಹಾಗೂ ಇದರ ಹೊಳಪು ಬಹಳ ಸಮಯದ ವರೆಗೆ ಇರುವುದರಿಂದ ಗುಲಾಲಿ ಬಣ್ಣದ ಚೆಂಡನ್ನು ಬಳಸಲಾಗುತ್ತಿದೆ. ಆದ್ದರಿಂದಲೇ ಇದು “ಪಿಂಕ್ ಬಾಲ್ ಟೆಸ್ಟ್’.
ಎರಡು ತ್ರಿಶತಕ
ಸೀಮಿತ ಸಂಖ್ಯೆಯ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಈಗಾಗಲೇ ಎರಡು ತ್ರಿಶತಕ ದಾಖಲಾಗಿರುವುದೊಂದು ವಿಸ್ಮಯ. ಮೊದಲ ಸಾಧಕ ಪಾಕಿಸ್ಥಾನದ ಅಜರ್ ಅಲಿ. ಅವರು ವೆಸ್ಟ್ ಇಂಡೀಸ್ ಎದುರಿನ ದುಬಾೖ ಪಂದ್ಯದಲ್ಲಿ ಅಜೇಯ 302 ರನ್ ಬಾರಿಸಿದ್ದರು. ಬಳಿಕ ಪಾಕಿಸ್ಥಾನ ವಿರುದ್ಧದ ಕಳೆದ ವರ್ಷದ ಅಡಿಲೇಡ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ 335 ರನ್ ಬಾರಿಸಿ ಮೆರೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.