ಹಗಲು-ರಾತ್ರಿ ಟೆಸ್ಟ್: ಇಂಗ್ಲೆಂಡ್ ಇನ್ನಿಂಗ್ಸ್ ಜಯಭೇರಿ
Team Udayavani, Aug 21, 2017, 2:13 PM IST
ಬರ್ಮಿಂಗಂ: ಇಂಗ್ಲೆಂಡ್ ತನ್ನ ನೆಲದ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಭರ್ಜರಿ ಜಯದೊಂದಿಗೆ ಮುಗಿಸಿದೆ. ಎಜ್‌ಬಾಸ್ಟನ್ ಅಂಗಳದಲ್ಲಿ ಪ್ರವಾಸಿ ವೆಸ್ಟ್ ಇಂಡೀಸನ್ನು ಇನ್ನಿಂಗ್ಸ್ ಹಾಗೂ 209 ರನ್ನುಗಳ ಸೋಲಿನ ಖೆಡ್ಡಕ್ಕೆ ಬೀಳಿಸಿದೆ.
346 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿ ಫಾಲೋಆನ್‌ಗೆ ತುತ್ತಾದ ವೆಸ್ಟ್ ಇಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇಂಗ್ಲೆಂಡ್ ದಾಳಿಗೆ ಸಿಲುಕಿ ಕೇವಲ 137 ರನ್ನಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 8ಕ್ಕೆ 514 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು. ಒಂದಕ್ಕೆ 44 ರನ್ ಮಾಡಿದಲ್ಲಿಂದ ತೃತೀಯ ದಿನದ ಆಟ ಆರಂಭಿಸಿದ ವಿಂಡೀಸಿಗೆ ಆಂಗ್ಲರ ಬೌಲಿಂಗನ್ನು ತಡೆದು ನಿಲ್ಲಲು ಸಾಧ್ಯವಾಗಲಿಲ್ಲ. ಕೇವಲ 168 ರನ್ನಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಫಾಲೋಆನ್ ಬಳಿಕವೂ ಕೆರಿಬಿಯನ್ನರ ಬ್ಯಾಟಿಂಗ್ ಬರಗಾಲ ಮುಂದು ವರಿಯಿತು. ಈ 19 ವಿಕೆಟ್‌ಗಳು ಒಂದೇ ದಿನ ಉರುಳಿದ್ದು ಕೆರಿಬಿಯನ್ನರ ಕ್ರಿಕೆಟ್ ಅವಸ್ಥೆಗೆ ಸಾಕ್ಷಿ. ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಸರದಿಯಲ್ಲಿ ದಾಖಲಾದದ್ದು ಒಂದು ಅರ್ಧ ಶತಕ ಮಾತ್ರ. ಇದನ್ನು ಬ್ಲ್ಯಾಕ್‌ವುಡ್ ಮೊದಲ ಸರದಿಯಲ್ಲಿ ಹೊಡೆದಿದ್ದರು (79). 243 ರನ್ ಬಾರಿಸಿದ ಇಂಗ್ಲೆಂಡ್ ಆರಂಭಕಾರ ಅಲಸ್ಟೇರ್ ಕುಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-8 ವಿಕೆಟಿಗೆ 514 ಡಿಕ್ಲೇರ್. ವೆಸ್ಟ್ ಇಂಡೀಸ್-168 ಮತ್ತು 137 (ಬ್ರಾತ್‌ವೇಟ್ 40, ಚೇಸ್ 24, ಬ್ರಾಡ್ 34ಕ್ಕೆ 3, ಆ್ಯಂಡರ್ಸನ್ 12ಕ್ಕೆ 2, ರೋಲ್ಯಾಂಡ್ ಜೋನ್ಸ್ 18ಕ್ಕೆ 2). ಪಂದ್ಯಶ್ರೇಷ್ಠ: ಅಲಸ್ಟೇರ್ ಕುಕ್.
ಬದಲಾಗದ ಇಂಗ್ಲೆಂಡ್ ತಂಡ
ವೆಸ್ಟ್ ಇಂಡೀಸ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ವಿಜೇತ ಬಳಗವನ್ನೇ ಉಳಿಸಿಕೊಂಡಿದೆ. ಈ ಪಂದ್ಯ ಆ. 25ರಿಂದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ.
ಇಂಗ್ಲೆಂಡ್ ತಂಡ: ಅಲಸ್ಟೇರ್ ಕುಕ್, ಮಾರ್ಕ್ ಸ್ಟೋನ್‌ಮ್ಯಾನ್, ಟಾಮ್ ವೆಸ್ಲಿ, ಜೋ ರೂಟ್ (ನಾಯಕ), ಡೇವಿಡ್ ಮಾಲನ್, ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೊ, ಮೊಯಿನ್ ಅಲಿ, ಟಾಬಿ ರೋಲ್ಯಾಂಡ್ ಜೋನ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಮಾಸನ್ ಕ್ರೇನ್, ಕ್ರಿಸ್ ವೋಕ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.