DC vs CSK: ಡೆಲ್ಲಿ ಕ್ಯಾಪಿಟಲ್ಸ್ ಗೆ ಅಗ್ನಿಪರೀಕ್ಷೆ; ಬಲಿಷ್ಠ ಚೆನ್ನೆ „ಎದುರಾಳಿ
Team Udayavani, Mar 31, 2024, 7:45 AM IST
ವಿಶಾಖಪಟ್ಟಣ: ಇನ್ನಷ್ಟು ಬಲಿಷ್ಠವಾಗಿ ಗೋಚರಿಸುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ ಡೆಲ್ಲಿಗೆ ರವಿವಾರ ವಿಶಾಖಪಟ್ಟಣದಲ್ಲಿ ಬಲವಾದ ಅಗ್ನಿಪರೀಕ್ಷೆ ಎದುರಾಗಲಿದೆ.
ಅಂದಹಾಗೆ, ಇದೊಂದು ರೀತಿಯಲ್ಲಿ ತಟಸ್ಥ ತಾಣದಲ್ಲಿ ನಡೆಯುವ ಪಂದ್ಯ. ಆದರೆ ಇದು ಡೆಲ್ಲಿಗೆ 2ನೇ “ಹೋಮ್ ಗ್ರೌಂಡ್’. ರಿಷಭ್ ಪಂತ್ ಬಳಗವಿಲ್ಲಿ 2 ಪಂದ್ಯಗಳನ್ನು ಆಡಲಿದೆ. ಕೆಲವು ದಿನಗಳ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಎರಡೂ ತಂಡಗಳಿಗೆ ಇದು 3ನೇ ಪಂದ್ಯ. ಆದರೆ ಸಾಧನೆಯ ಲೆಕ್ಕಾ ಚಾರದಲ್ಲಿ ಇತ್ತಂಡಗಳದ್ದೂ ತದ್ವಿ ರುದ್ಧ ಸಾಧನೆ. ಚೆನ್ನೈ ಎರಡೂ ಪಂದ್ಯ ಗಳನ್ನು ಗೆದ್ದು ತನ್ನ ಪ್ರಭುತ್ವ ಸಾಧಿಸಿದರೆ, ಡೆಲ್ಲಿ ಎರಡರಲ್ಲೂ ಸೋತ ಸಂಕಟ ದಲ್ಲಿದೆ. ಅಷ್ಟೇ ಅಲ್ಲ, 2021ರಿಂದ ಮೊದಲ್ಗೊಂಡು ಚೆನ್ನೈ ವಿರುದ್ಧ ಸತತ 4 ಪಂದ್ಯಗಳನ್ನು ಕಳೆದುಕೊಂಡ ಆಘಾ ತವೂ ಇಲ್ಲಿ ಜತೆಗೂಡಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿ ಪಂತ್ ಪಡೆಯೇ ನಾದರೂ ಜಯಿಸಿದರೆ ಅದು 2024ರ ಐಪಿಎಲ್‌ನ ಮೊದಲ “ಬಿಗ್ ಅಪ್‌ಸೆಟ್’ ಫಲಿತಾಂಶವಾಗಲಿದೆ!
ಡೆಲ್ಲಿಗೆ ಹಿನ್ನಡೆ :
ಪಂಜಾಬ್ ವಿರುದ್ಧ 4 ವಿಕೆಟ್‌ಗಳಿಂದ ಸೋತ ಡೆಲ್ಲಿಗೆ ರಾಜಸ್ಥಾನ್ ವಿರುದ್ಧ ಕಮ್‌ಬ್ಯಾಕ್ ಮಾಡುವ ಎಲ್ಲ ಅವಕಾಶವಿತ್ತು. ಆದರೆ ಆವೇಶ್ ಖಾನ್ ಅವರ ಅಂತಿಮ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಸಿಡಿದು ನಿಲ್ಲಲಾಗಲಿಲ್ಲ. ಜತೆಗೆ ರಣಜಿ ಪಂದ್ಯಾವಳಿಯ ಟಾಪ್ ಸ್ಕೋರರ್ ರಿಕ್ಕಿ ಭುಯಿ (902 ರನ್) ಟಿ20 ಮಾದರಿಗೆ ಹೊಂದಿಕೊಳ್ಳದಿದ್ದುದೂ ಹಿನ್ನಡೆಯಾಗಿ ಪರಿಣಮಿಸಿತು. ವನ್‌ಡೌನ್‌ನಲ್ಲಿ ಬಂದ ಭುಯಿ ಖಾತೆ ತೆರೆಯದೆ ಹೋಗಿದ್ದರು. ಇವರ ಸ್ಥಾನಕ್ಕೆ ಪೃಥ್ವಿ ಶಾ ಬರುವ ಸಾಧ್ಯತೆ ಇದೆ. ಆಗ ವಾರ್ನರ್-ಶಾ ಜೋಡಿ ಇನ್ನಿಂಗ್ಸ್ ಆರಂಭಿಸಿಸಲಿದ್ದು, ಮಿಚೆಲ್ ಮಾರ್ಷ್ ಅವರನ್ನು 3ನೇ ಕ್ರಮಾಂಕದಲ್ಲಿ ಆಡಿಸುವುದು ಡೆಲ್ಲಿ ಯೋಜನೆ.
ನಾಯಕ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡಿದ್ದಾರೆ. ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್ ಕೆಳ ಸರದಿಯನ್ನು ಆಧರಿಸಿ ನಿಲ್ಲುವ ಭರವಸೆಯನ್ನೇನೋ ಮೂಡಿಸಿದ್ದಾರೆ. ಆದರೆ ಚೆನ್ನೈನ ಘಾತಕ ಹಾಗೂ ವೈವಿಧ್ಯಮಯ ಬೌಲಿಂಗ್ ಆಕ್ರಮಣ ವನ್ನು ತಡೆದು ನಿಲ್ಲುವುದು ಸುಲಭವಲ್ಲ.
ಭಾರತೀಯರನ್ನೇ ನಂಬಿರುವ ಡೆಲ್ಲಿಯ ಬೌಲಿಂಗ್ ಘಾತಕವೇನಲ್ಲ. ಸ್ಪಿನ್ನರ್‌ಗಳಾದ ಕುಲದೀಪ್ ಮತ್ತು ಅಕ್ಷರ್ ಇನ್ನಷ್ಟು ಹರಿತಗೊಳ್ಳಬೇಕಿದೆ. ದಕ್ಷಿಣ ಆಫ್ರಿಕಾದ ಆ್ಯನ್ರಿಚ್ ನೋರ್ಜೆ ಇನ್ನೂ ದಂಡಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ!
ಚೆನ್ನೈ ಪರಿಪೂರ್ಣ ಪ್ಯಾಕೇಜ್:
ಚೆನ್ನೈ ಪರಿಪೂರ್ಣ ಟಿ20 ಪ್ಯಾಕೇಜ್ ಹೊಂದಿರುವ ತಂಡ. ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮುಸ್ತಫಿಜುರ್, ಪತಿರಣ… ಹೀಗೆ ಆರಂಭದಿಂದ ಅಂತ್ಯದ ತನಕವೂ ಬಲಿಷ್ಠ ಹಾಗೂ ಅಪಾಯಕಾರಿಯಾಗಿ ಗೋಚರಿಸುತ್ತದೆ. ಜತೆಗೆ ಗಾಯಕ್ವಾಡ್, ರಹಾನೆ, ಜಡೇಜ, ದುಬೆ, ಧೋನಿ, ರಿಝ್ವಿ ಮೊದಲಾದ ತವರಿನ ಹೀರೋಗಳಿದ್ದಾರೆ. ಅವಕಾಶ ಕ್ಕಾಗಿ ಕ್ಯೂ ನಿಂತ ಇನ್ನಷ್ಟು ಮಂದಿ ಸ್ಟಾರ್ ಕ್ರಿಕೆಟಿಗರಿದ್ದಾರೆ. ಶಾರ್ದೂಲ್ ಠಾಕೂರ್, ಮೊಯಿನ್ ಅಲಿ, ಸ್ಯಾಂಟ್ನರ್… ಮೊದಲಾದವರು. ಸದ್ಯ ಚೆನ್ನೈ ತಂಡದ ದೊಡ್ಡ ಸಮಸ್ಯೆಯೆಂದರೆ ಹನ್ನೊಂದರ ಬಳಗವನ್ನು ಆರಿಸುವುದು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.