ರಾಜಸ್ಥಾನ್‌ಗೆ ವರುಣನ ನೆರವು
Team Udayavani, Apr 13, 2018, 6:10 AM IST
ಜೈಪುರ: ಬಹಳ ಸಮಯದ ಬಳಿಕ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 10 ರನ್ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ರಾಜಸ್ಥಾನ್ ಗೆಲುವಿನ ಖಾತೆ ತೆರೆದರೆ, ಡೆಲ್ಲಿ ಸತತ 2 ಪಂದ್ಯದಲ್ಲಿ ಸೋಲುಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ 17.5 ಓವರ್‌ಗೆ 5 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿತ್ತು. ಆದರೆ ಈ ಹಂತದಲ್ಲಿ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಗಿತ್ತು. ನಂತರ ರಾತ್ರಿ 12 ಗಂಟೆಗೆ ಪಂದ್ಯವನ್ನು ಆರಂಭಿಸಲಾಯಿತು.
ಡೆಲ್ಲಿ ತಂಡದ ಗೆಲುವಿಗೆ 6 ಓವರ್‌ಗೆ 71 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಮೊತ್ತವನ್ನು ಬೆನ್ನುಹತ್ತುವಲ್ಲಿ ಡೆಲ್ಲಿ ತಂಡ ಎಡವಿತು. ಆರಂಭಿಕರಾಗಿ ಬಂದ ಮ್ಯಾಕ್ಸ್‌ವೆಲ್(17),ಮಧ್ಯಮ ಕ್ರಮಾಂಕದ ರಿಷಭ್ ಪಂತ್ (20 ರನ್) ಹೋರಾಟ ನಡೆಸಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ರಾಜಸ್ಥಾನ್ ಪರ ಬಿಗು ದಾಳಿ ನಡೆಸಿದ ಜಯದೇವ್ 1 ವಿಕೆಟ್ ಪಡೆದರೆ,ಲಾμÉನ್ 2 ವಿಕೆಟ್ ಪಡೆದರು.
ರಹಾನೆ ಆಸರೆ: ಹೈದರಾಬಾದ್ ವಿರುದಟಛಿದ ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಹೀನಾಯ ಸೋಲಿಗೆ ತುತ್ತಾಗಿದ್ದ ರಾಜಸ್ಥಾನ್ ಬುಧವಾರದ ಮುಖಾಮುಖೀಯಲ್ಲಿ ಸುಧಾರಿತ ಆಟವಾಡಿತು.
ಆರಂಭಕಾರ ಡಿ’ಆರ್ಸಿ ಶಾರ್ಟ್ ಮತ್ತು ವನ್ ಡೌನ್ ಆಟಗಾರ ಬೆನ್ ಸ್ಟೋಕ್ಸ್ ವಿಫಲರಾದರೂ ನಾಯಕ ಅಜಿಂಕ್ಯ ರಹಾನೆ
ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ನದೀಮ್ ಎಸೆತದಲ್ಲಿ ಮಾರಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಒಟ್ಟು 40 ಎಸೆತ ಎದುರಿಸಿದ ರಹಾನೆ 45 ರನ್ ಬಾರಿಸಿದರು. ಅವರ ಆಟದಲ್ಲಿ 5 ಬೌಂಡರಿ ಸೇರಿತ್ತು. ಇದು ತಂಡದ ನೆರವಿಗೆ ನಿಂತರು.
ರಹಾನೆಗೆ ಉತ್ತಮ ಸಾಥ್ ನೀಡಿದ ಸಂಜು ಸ್ಯಾಮ್ಸನ್ 22 ಎಸೆತಗಳಿಂದ 37 ರನ್ ಸಿಡಿಸಿದರು. ಅವರ ಆಟದಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿತ್ತು.ರಹಾನೆ-ಸ್ಯಾಮ್ಸನ್ ಜೋಡಿಯಿಂದ 3ನೇ ವಿಕೆಟಿಗೆ 62 ರನ್ ಹರಿದು ಬಂತು. ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ನಡೆಸಿರುವುದು ಸ್ಕೋರ್ ಏರಲು ಕಾರಣವಾಯಿತು.
ನಂತರ ಬಂದ ಜೋಸ್ ಬಟ್ಲರ್ 18 ಎಸೆತಗಳಿಂದ 2 ಬೌಂಡರಿ, 2 ಸಿಕ್ಸರ್ ಒಳಗೊಂಡಂತೆ ಅಜೇಯ 29 ಬಾರಿಸಿದರೆ, ರಾಹುಲ್ ತ್ರಿಪಾಠಿ ಅಜೇಯ 15 ರನ್ ಮಾಡಿದ್ದರು. ಈ ಸಂದರ್ಭದಲ್ಲಿ ಆರಂಭವಾದ ಮಳೆ ನಿಂತಿರಲಿಲ್ಲ.ಡೆಲ್ಲಿ ಪರ ಶಾಬಾಜ್ ನದೀಂ 2 ವಿಕೆಟ್ ಉರುಳಿಸಿದರು. ಬೌಲ್ಟ್ ಮತ್ತು ಶಮಿಗೆ ಒಂದೊಂದು ವಿಕೆಟ್ ಲಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.