ಚಿನ್ನದ ಸುತ್ತಿಗೇರಿದ ದೀಪಕ್ ಪೂನಿಯಾ
86 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶ ಟೋಕಿಯೊ ಟಿಕೆಟ್ ಪಡೆದ 4ನೇ ಕುಸ್ತಿಪಟು
Team Udayavani, Sep 22, 2019, 4:06 AM IST
ನುರ್ ಸುಲ್ತಾನ್ (ಕಜಾಕ್‌ಸ್ಥಾನ್): ಜೂನಿಯರ್ ವಿಶ್ವ ಚಾಂಪಿಯನ್ ಖ್ಯಾತಿಯ ದೀಪಕ್ ಪೂನಿಯಾ ಈಗ ಸೀನಿಯರ್ ಮಟ್ಟದಲ್ಲೂ ದೊಡ್ಡ ಸಾಧನೆಗೈಯುವತ್ತ ದಾಪುಗಾಲಿಕ್ಕಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಸ್ಪರ್ಧೆಯ 86 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಚಿನ್ನದ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಸೆಮಿಫೈನಲ್ ತಲುಪಿದೊಡನೆ ದೀಪಕ್ ಪೂನಿಯಾ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದರು. ರವಿವಾರದ ಫೈನಲ್‌ನಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್, ಇರಾನಿನ ಹಸನ್ ವಿರುದ್ಧ ಸೆಣಸಲಿದ್ದಾರೆ.
ಒಂದೇ ದಿನ ಎರಡು ಜಯ
ಇದೇ ಮೊದಲ ಸಲ ಸೀನಿಯರ್ ವಿಶ್ವ ಕುಸ್ತಿ ಸ್ಪರ್ಧೆಯ ಅಖಾಡಕ್ಕಿಳಿದ ದೀಪಕ್ ಪೂನಿಯಾ, ಶನಿವಾರ ನಡೆದ ತೀವ್ರ ಪೈಪೋಟಿಯ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಕೊಲಂಬಿ ಯಾದ ಅರ್ಟುರೊ ಮೆಂಡೆಝ್ ವಿರುದ್ಧ 7-6 ಅಂತರದ ಮೇಲುಗೈ ಸಾಧಿಸಿದರು. ಬಳಿಕ ಸೆಮಿಫೈನಲ್‌ನಲ್ಲಿ ಸ್ವಿಜರ್‌ಲ್ಯಾಂಡಿನ ಸ್ಟೀಫನ್ ರಿಶ್ಮತ್ ಅವರನ್ನು 8-2 ಅಂಕಗಳಿಂದ ಪರಾಭವಗೊಳಿಸಿದರು.
2016ರಲ್ಲಿ ವಿಶ್ವ ಕೆಡೆಟ್ ಕಿರೀಟ ಏರಿಸಿಕೊಂಡಿದ್ದ 20ರ ಹರೆಯದ ದೀಪಕ್ ಪೂನಿಯಾ, ಕಳೆದ ತಿಂಗಳಷ್ಟೇ ಎಸ್ತೋನಿಯಾದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದರು. ಈ ಸಂಭ್ರಮ ಜಾರಿಯಲ್ಲಿರುವಾಗಲೇ ಸೀನಿಯರ್ ಮಟ್ಟದಲ್ಲೂ ಸ್ವರ್ಣ ಸಾಧನೆಗೈಯುವತ್ತ ಮುನ್ನಡೆ ದಿರುವುದು ದೀಪಕ್ ಅವರ ಪ್ರಚಂಡ ಪ್ರದರ್ಶನಕ್ಕೆ ಸಾಕ್ಷಿ.
ಆಲ್‌ರೌಂಡ್ ಪ್ರದರ್ಶನ
ಅಮೋಘ ಆಲ್‌ರೌಂಡ್ ಪ್ರದರ್ಶನದ ಮೂಲಕ ದೀಪಕ್ ವಿಶ್ವ ಕುಸ್ತಿಯಲ್ಲಿ ಪಾರಮ್ಯ ಸಾಧಿಸುತ್ತ ಬಂದಿದ್ದಾರೆ. ರಕ್ಷಣೆ, ದಾಳಿ, ಶಕ್ತಿ ಮತ್ತು ಧೈರ್ಯವೆಲ್ಲ ದೀಪಕ್ ಅವರ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿವೆ.
ದೀಪಕ್ ಪೂನಿಯಾ ಒಲಿಂಪಿಕ್ ಅರ್ಹತೆ ಪಡೆದ ಭಾರತದ 4ನೇ ಕುಸ್ತಿಪಟು. ಇದೇ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ವಿನೇಶ್ ಪೋಗಟ್, ಭಜರಂಗ್ ಪೂನಿಯಾ, ರವಿ ದಹಿಯಾ ಟೋಕಿಯೊ ಟಿಕೆಟ್ ಪಡೆದಿದ್ದರು.
ರಾಹುಲ್ ಅವಾರೆ ಸೆಮಿಗೆ
ಇದೇ ವೇಳೆ 61 ಕೆಜಿ ವಿಭಾಗದಲ್ಲಿ ರಾಹುಲ್ ಅವಾರೆ ಕೂಡ ಸೆಮಿಫೈನಲ್ ತಲುಪಿದ್ದಾರೆ. ಆದರೆ ಈ ತೂಕ ವಿಭಾಗ ಒಲಿಂಪಿಕ್ ಸ್ಪರ್ಧೆಯಲ್ಲಿಲ್ಲದ ಕಾರಣ ಅವಾರೆಗೆ ಕೇವಲ ಪದಕವೊಂದೇ ಗುರಿ ಆಗಿದೆ. ಭಾರತದ ಉಳಿದಿಬ್ಬರು ಸ್ಪರ್ಧಿಗಳಾದ ಜೀತೇಂದರ್ (79 ಕೆಜಿ) ಕ್ವಾರ್ಟರ್ ಫೈನಲ್‌ನಲ್ಲಿ, ಮೌಸಮ್ ಖತ್ರಿ (97 ಕೆಜಿ) ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ
Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್ ಶರ್ಮಾ ಅಭ್ಯಾಸ
India Open Badminton ಇಂದಿನಿಂದ:ಭಾರತದ ದೊಡ್ಡ ತಂಡದಿಂದ ದೊಡ್ಡ ನಿರೀಕ್ಷೆ
Australian Open-2025: ದ್ವಿತೀಯ ಸುತ್ತಿಗೆ ಜೊಕೋ, ಸಿನ್ನರ್
Under-19 Women’s; ವಿಶ್ವಕಪ್ ಅಭ್ಯಾಸ ಪಂದ್ಯ:ಭಾರತ 119 ರನ್ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.