ವಿಶ್ವ ಕುಸ್ತಿ: ಫೈನಲ್ ಪಂದ್ಯವಾಡಲಾಗದೆ ರಜತಕ್ಕೆ ತೃಪ್ತಿ ಪಟ್ಟ ದೀಪಕ್ ಪೂನಿಯಾ
Team Udayavani, Sep 22, 2019, 1:28 PM IST
ನೂರ್ ಸುಲ್ತಾನ್: ಜ್ಯೂನಿಯರ್ ವಿಶ್ವ ಚಾಂಪಿಯನ್ ಖ್ಯಾತಿಯ ದೀಪಕ್ ಪೂನಿಯಾ ಸೀನಿಯರ್ ಕುಸ್ತಿ ವಿಶ್ವ ಚಾಂಪಿಯನ್ ಶಿಪ್ ನ ಫೈನಲ್ ನಿಂದ ಹೊರಗುಳಿದು ನಿರಾಸೆ ಅನುಭವಿಸಿದ್ದಾರೆ. ಮಣಿಗಂಟು ಗಾಯಗೊಂಡಿರುವ ಕಾರಣ ದೀಪಕ್ ಚಿನ್ನ ಗೆಲ್ಲುವ ಅಮೂಲ್ಯ ಅವಕಾಶವನ್ನು ಕಳೆದುಕೊಂಡರು.
ನೋವಿನಿಂದ ನನ್ನ ಎಡ ಕಾಲು ಭಾರ ತಾಳುತ್ತಿಲ್ಲ.ಈ ಪರಿಸ್ಥಿತಿಯಲ್ಲಿ ಆಡುವುದು ಕಷ್ಟ. ನನಗೆ ಗೊತ್ತು ಇದು ಈ ಫೈನಲ್ ನನ್ನ ಜೀವನದ ತುಂಬಾ ಮಹತ್ವದ್ದು. ಆದರೆ ಏನೂ ಮಾಡದ ಪರಿಸ್ಥಿತಿಯಲ್ಲಿದ್ದೇನೆ ಎಂದು ದೀಪಕ್ ಪೂನಿಯಾ ಸುದ್ದಿ ಸಂಸ್ಥೆಗೆ ಹೇಳಿದರು.
ಫೈನಲ್ ನಲ್ಲಿ ದೀಪಕ್ ಹಿಂದೆ ಸರಿದ ಕಾರಣ ಇರಾನಿನ ಹಸನ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಕಳೆದ ವರ್ಷ ಜೂನಿಯರ್ ಕುಸ್ತಿ ಚಾಂಪಿಯನ್ ಶಿಪ್ ಗೆದ್ದಿದ್ದ 20ರ ಹರೆಯದ ದೀಪಕ್ ಈ ವರ್ಷ 86 ಕೆಜಿ ಹಿರಿಯರ ವಿಭಾಗದಲ್ಲಿ ಫೈನಲ್ ಗೇರಿದ್ದರು. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.