ದಿಲ್ಲಿ ವಾಯುಮಾಲಿನ್ಯ:ಕ್ರೀಡಾಪಟುಗಳ ಸಂಕಟ
Team Udayavani, Nov 10, 2018, 6:30 AM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ತೀವ್ರವಾಗಿ ಏರಿರುವುದು ಈಗ ಹಳೆಸುದ್ದಿ. ಇದರಿಂದ ಕ್ರೀಡಾಪಟುಗಳು ತೀವ್ರವಾಗಿ ಒದ್ದಾಡುತ್ತಿದ್ದಾರೆ ಎಂಬ ಕಾರಣದಿಂದ ಪ್ರಕರಣ ಈಗ ಅಂತಾರಾಷ್ಟ್ರೀಯ ಮಹತ್ವ ಪಡೆದುಕೊಂಡಿದೆ.
ಸದ್ಯ ಹೊಸದಿಲ್ಲಿಯಲ್ಲಿ ವಿವಿಧ ಕ್ರೀಡಾಕೂಟಗಳಿಗಾಗಿ ತರಬೇತಿ ನಡೆಸುತ್ತಿರುವ ಆ್ಯತ್ಲೀಟ್‌ಗಳು ತಲೆನೋವು, ಎದೆ ನೋವು, ಗಂಟಲು ನೋವಿನಿಂದ ಒದ್ದಾಡುತ್ತಿದ್ದಾರೆ. ಗುರುವಾರವಂತೂ ದೀಪಾವಳಿ ಪರಿಣಾಮ ಆ್ಯತ್ಲೀಟ್‌ಗಳು ಅಭ್ಯಾಸವನ್ನೇ ರದ್ದು ಮಾಡಿದ್ದಾರೆ.
ದೀಪಾವಳಿ ಹಬ್ಬದ ಮರುದಿನ ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಆ್ಯತ್ಲೀಟ್‌ಗಳಿಗೆ “ವಾತಾವರಣ ಸರಿಯಿಲ್ಲ. ಗಾಳಿಯಲ್ಲಿ ಮಾಲಿನ್ಯ ತೀವ್ರಗೊಂಡಿದೆ. ನೀವು ಅಭ್ಯಾಸ ರದ್ದು ಮಾಡಿ’ ಎಂಬ ಸಂದೇಶ ಬಂದಿದೆ.
“ಸದ್ಯ ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲಾಗುತ್ತಿಲ್ಲ. ಕಷ್ಟಪಟ್ಟು ಅಭ್ಯಾಸ ನಡೆಸುವಂತಾಗಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಶುರುವಾಗಿದೆ’ ಎಂಬುದು ತರಬೇತುದಾರ ಸಂದೀಪ್ ಸರ್ಕಾರಿಯ ಅಳಲು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.