ತವರಿನಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆ ಅಗ್ನಿಪರೀಕ್ಷೆ

Team Udayavani, Apr 4, 2023, 6:52 AM IST

ತವರಿನಂಗಳದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಗೆ ಅಗ್ನಿಪರೀಕ್ಷೆ

ಹೊಸದಿಲ್ಲಿ: ಭಾರತೀಯ ಪೇಸ್‌ ಬೌಲಿಂಗ್‌ ದಾಳಿಯನ್ನೇ ನಂಬಿ ಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮಂಗಳವಾರ ರಾತ್ರಿ ತವರಿನಂಗಳದಲ್ಲಿ ಅಗ್ನಿ ಪರೀಕ್ಷೆಗೆ ಒಳಗಾಗಲಿದೆ. ಹಾಲಿ ಚಾಂಪಿ ಯನ್‌ ಹಾಗೂ ಉದ್ಘಾಟನ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ ಗುಜರಾತ್‌ ಟೈಟಾನ್ಸ್‌ ತಂಡವನ್ನು ಡೇವಿಡ್‌ ವಾರ್ನರ್‌ ಪಡೆ ಎದುರಿಸಲಿದೆ.

ಅಹ್ಮದಾಬಾದ್‌ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಗುಜರಾತ್‌ 5 ವಿಕೆಟ್‌ಗಳಿಂದ ಚೆನ್ನೈಗೆ ಸೋಲುಣಿಸಿತ್ತು. ಇನ್ನೊಂದೆಡೆ ತವರಿನಂಗಳದಲ್ಲಿ ಮೊದಲ ಪಂದ್ಯವಾಡಿದ ಲಕ್ನೋ 50 ರನ್ನುಗಳಿಂದ ಡೆಲ್ಲಿಯನ್ನ ಬಗ್ಗುಬಡಿದಿತ್ತು. ಹೀಗಾಗಿ ತವರಿನ ಅಂಗಳದ ಲಾಭ ಎತ್ತಬೇಕಾದ ಒತ್ತಡ ಹಾಗೂ ಅನಿವಾರ್ಯತೆ ವಾರ್ನರ್‌ ಬಳಗದ ಮೇಲಿದೆ.

ಗುಜರಾತ್‌ಗೆ ಎದುರಾಗಿರುವ ಹಿನ್ನ ಡೆಯೆಂದರೆ ಅನುಭವಿ ಆಟಗಾರ ಕೇನ್‌ ವಿಲಿಯಮ್ಸನ್‌ ಗೈರು. ಗುಜರಾತ್‌ ಪರ ಮೊದಲ ಸಲ ಆಡಲಿಳಿದ ಕೇನ್‌, ಮೊದಲ ಪಂದ್ಯದಲ್ಲೇ ಕಾಲುನೋವಿಗೆ ಸಿಲುಕಿ ಕೂಟದಿಂದಲೇ ಬೇರ್ಪ ಡುವ ದುರಂತಕ್ಕೆ ಸಿಲುಕಿದರು. ಆದರೆ ದಕ್ಷಿಣ ಆಫ್ರಿಕಾದ ಹಾರ್ಡ್‌ ಹಿಟ್ಟರ್‌ ಡೇವಿಡ್‌ ಮಿಲ್ಲರ್‌ ತಂಡವನ್ನು ಕೂಡಿ ಕೊಂಡಿದ್ದಾರೆ.

ಭಾರತದ ಬ್ಯಾಟರ್
ಗುಜರಾತ್‌ ಭಾರತದ ಬ್ಯಾಟರ್‌ಗಳನ್ನೇ ನೆಚ್ಚಿಕೊಂಡಿರುವ ತಂಡ. ವೃದ್ಧಿಮಾನ್‌ ಸಾಹಾ, ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌, ನಾಯಕ ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌, ರಾಹುಲ್‌ ತೆವಾಟಿಯಾ, ಮೊಹಮ್ಮದ್‌ ಶಮಿ… ಹೀಗೆ ಪಟ್ಟಿ ಬೆಳೆಯುತ್ತದೆ. ಚೆನ್ನೈ ವಿರುದ್ಧ 179 ರನ್‌ ಚೇಸ್‌ ಮಾಡುವ ವೇಳೆ ಗಿಲ್‌, ಸಾಹಾ, ವಿಜಯ್‌ ಶಂಕರ್‌ ಅವರೆಲ್ಲ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಪಾಂಡ್ಯ ಮಾತ್ರ ಕ್ಲಿಕ್‌ ಆಗಿರಲಿಲ್ಲ. ಆದರೂ ತಂಡದ ಬ್ಯಾಟಿಂಗ್‌ ಶಕ್ತಿಯ ಬಗ್ಗೆ ಅನುಮಾನವಿಲ್ಲ. ಬೌಲಿಂಗ್‌ನಲ್ಲಿ ಶಮಿ, ರಶೀದ್‌ ಖಾನ್‌, ಅಲ್ಜಾರಿ ಜೋಸೆಫ್ ಹಾಗೂ ಸ್ವತಃ ಪಾಂಡ್ಯ ಘಾತಕ ದಾಳಿ ಸಂಘಟಿಸಬಲ್ಲರು.

ನೋರ್ಜೆ, ಎನ್‌ಗಿಡಿ ವಿಳಂಬ
ಲಕ್ನೋ ವಿರುದ್ಧ ಡೆಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆ ರಡರಲ್ಲೂ ವೈಫ‌ಲ್ಯ ಕಂಡಿತ್ತು. “ಆಲ್‌ ಇಂಡಿಯನ್‌ ಬೌಲಿಂಗ್‌’ನಲ್ಲಿ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ ಮಾತ್ರ ಕ್ಲಿಕ್‌ ಆಗಿದ್ದರು. ಮುಕೇಶ್‌ ಕುಮಾರ್‌ ವಿಕೆಟ್‌ಲೆಸ್‌ ಎನಿಸಿದ್ದರು. ಚೇತನ್‌ ಸಕಾರಿಯಾ 2 ವಿಕೆಟ್‌ ಉರುಳಿಸಿದರೂ 53 ರನ್‌ ಬಿಟ್ಟುಕೊಟ್ಟಿದ್ದರು. ಈ ಬಾರಿ ಬಾಂಗ್ಲಾದ ಅನುಭವಿ ವೇಗಿ ಮುಸ್ತಫಿಜುರ್‌ ರೆಹಮಾನ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಆ್ಯನ್ರಿಚ್‌ ನೋರ್ಜೆ, ಲುಂಗಿ ಎನ್‌ಗಿಡಿ ಆಗಮನ ವಿಳಂಬವಾಗಿರುವುದೂ ಡೆಲ್ಲಿಗೆ ಸಮಸ್ಯೆಯಾಗಿ ಕಾಡಿದೆ.

ಇಬ್ಬರು ಸಿಡಿದರೂ ಸಾಕು
ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌ ಅವರ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ಅನುಮಾನವಿತ್ತು. ಆದರೆ ಲಕ್ನೋ ವಿರುದ್ಧ ವಾರ್ನರ್‌ ಹೊರತುಪಡಿಸಿ ಉಳಿದವರೆಲ್ಲ ವಿಫ‌ಲರಾದದ್ದೊಂದು ವಿಪರ್ಯಾಸ. ವಾರ್ನರ್‌ ಏಕಾಂಗಿ ಹೋರಾಟ ನಡೆಸಿ 56 ರನ್‌ ಹೊಡೆದಿದ್ದರು. ಉಳಿದಂತೆ ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ಸಫ‌ìರಾಜ್‌ ಖಾನ್‌, ರೋವ¾ನ್‌ ಪೊವೆಲ್‌ ಅವರ ಘೋರ ವೈಫ‌ಲ್ಯ ಡೆಲ್ಲಿಯನ್ನು ಸೋಲಿನ ಸುಳಿಗೆ ತಳ್ಳಿತ್ತು. ಬಹುತೇಕ ಮಂದಿ ಮಾರ್ಕ್‌ ವುಡ್‌ ಎಸೆತಗಳಿಗೆ ಮಂಕಾಗಿದ್ದರು. ಆದರೆ ಇವರಲ್ಲಿ ಇಬ್ಬರು ತಮ್ಮ ನೈಜ ಪರಾಕ್ರಮ ತೋರಿದರೂ ಡೆಲ್ಲಿಯನ್ನು ತಡೆಯುವುದು ಕಷ್ಟವಾಗಲಿದೆ ಎಂಬುದು ಮಾತ್ರ ವಾಸ್ತವ.

ಡೇವಿಡ್‌ ಮಿಲ್ಲರ್‌ ಆಗಮನ
ಮೊದಲ ಪಂದ್ಯದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ಕೇನ್‌ ವಿಲಿಯಮ್ಸನ್‌ ಜಾಗಕ್ಕೆ ಸಮರ್ಥ ಬದಲಿ ಆಟಗಾರನೋರ್ವ ಲಭಿಸಿದಂತಾಗಿದೆ.

ಮಿಲ್ಲರ್‌ ಕಳೆದ ಋತುವಿನಲ್ಲಿ 449 ರನ್‌ ಪೇರಿಸಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ಟೈಟಾನ್ಸ್‌ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಮಿಲ್ಲರ್‌ ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ.

“ಅಹ್ಮದಾಬಾದ್‌ನಲ್ಲಿ ಆಡುವುದು ಒಂದು ವಿಶೇಷ ಅನುಭವ. ಅದರಲ್ಲೂ ಚೆನ್ನೈ ವಿರುದ್ಧದ ಆರಂಭಿಕ ಪಂದ್ಯವಾಡುವುದು ಇದಕ್ಕೂ ಮಿಗಿಲಾದ ಅನುಭವ ನೀಡುತ್ತಿತ್ತು. ಆದರೆ ನನಗೆ ಈ ಅವಕಾಶ ಲಭಿಸದಿರುವುದರಿಂದ ತುಸು ನಿರಾಸೆಯಾದದ್ದು ಸಹಜ. ನಾವೆಲ್ಲ ನೆದರ್ಲೆಂಡ್ಸ್‌ ವಿರುದ್ಧದ ಸರಣಿಯಲ್ಲಿ ಪಾಲ್ಗೊಂಡಿದ್ದೆವು’ ಎಂಬುದಾಗಿ ಮಿಲ್ಲರ್‌ ಹೇಳಿದರು.

ಈ ಐಪಿಎಲ್‌ ದಕ್ಷಿಣ ಆಫ್ರಿಕಾದ ಬಹಳಷ್ಟು ಆಟಗಾರರಿಂದ ತುಂಬಿದೆ. ಸನ್‌ರೈಸರ್ ಹೈದರಾಬಾದ್‌ ತಂಡದ ನಾಯಕ ಐಡನ್‌ ಮಾರ್ಕ್‌ರಮ್‌, ಹೆನ್ರಿಚ್‌ ಕ್ಲಾಸೆನ್‌, ಮಾರ್ಕೊ ಜಾನ್ಸೆನ್‌; ಡೆಲ್ಲಿ ತಂಡದ ಲುಂಗಿ ಎನ್‌ಗಿಡಿ, ಆ್ಯನ್ರಿಚ್‌ ನೋರ್ಜೆ; ಮುಂಬೈ ತಂಡದ ಟ್ರಿಸ್ಟನ್‌ ಸ್ಟಬ್ಸ್, ಡಿವಾಲ್ಡ್‌ ಬ್ರೇವಿಸ್‌; ಲಕ್ನೋ ತಂಡದ ಕ್ವಿಂಟನ್‌ ಡಿ ಕಾಕ್‌, ಪಂಜಾಬ್‌ನ ಕಾಗಿಸೊ ರಬಾಡ ಇವರಲ್ಲಿ ಪ್ರಮುಖರು. ಇವರೆಲ್ಲ ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.