IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು
Team Udayavani, May 8, 2024, 8:47 AM IST
ಹೊಸದಿಲ್ಲಿ: ನಾಯಕ ಸಂಜು ಸ್ಯಾಮ್ಸನ್ ಅವರ ಜವಾಬ್ದಾರಿಯ ಅರ್ಧಶತಕದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡವು ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೆದುರು 20 ರನ್ನುಗಳಿಂದ ಸೋಲನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ ಜೇಕ್ ಫ್ರೆàಸರ್ ಮೆಕ್‌ಗರ್ಕ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 8 ವಿಕೆಟಿಗೆ 221 ರನ್ ಪೇರಿಸಿದ್ದರೆ ರಾಜಸ್ಥಾನ್ ರಾಯಲ್ಸ್ 8 ವಿಕೆಟಿಗೆ 201 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ರಾಜಸ್ಥಾನ್ ವಿರುದ್ಧ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿ ಜಯಭೇರಿ ಬಾರಿಸಿದ ಡೆಲ್ಲಿ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಹೆಚ್ಚಿಸಿಕೊಂಡಿತು.
ಐಪಿಎಲ್ ಅಂಕಪಟ್ಟಿ
ಗೆಲ್ಲಲು ಕಠಿನ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟನ್ನು ಬೇಗನೇ ಕಳೆದುಕೊಂಡರೂ ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಅವರ ಉತ್ತಮ ಆಟದಿಂದಾಗಿ ತಿರುಗೇಟು ನೀಡಲು ಪ್ರಯತ್ನಿಸಿತ್ತು. ಇತರ ಆಟಗಾರರು ದೊಡ್ಡ ಜತೆಯಾಟದ ಆಟಕ್ಕೆ ನೆರವು ನೀಡದಿದ್ದರೂ ಸ್ಯಾಮ್ಸನ್ ಏಕಾಂಗಿಯಾಗಿ ಹೋರಾಡಿ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಅವರು ಮೊತ್ತ 167 ತಲುಪಿದಾಗ ಔಟಾಗುತ್ತಲೇ ತಂಡ ಒತ್ತಡಕ್ಕೆ ಸಿಲುಕಿತು. ಆಬಳಿಕ ಕೆಲವು ವಿಕೆಟನ್ನು ಕಳೆದುಕೊಂಡ ತಂಡವು ಅಂತಿಮವಾಗಿ 201 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಸ್ಯಾಮ್ಸನ್ 46 ಎಸೆತ ಎದುರಿಸಿ 8 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 86 ರನ್ ಹೊಡೆದಿದ್ದರು.
ಬಿಗು ದಾಳಿ ಸಂಘಟಿಸಿದ ಕುಲದೀಪ್ ಯಾದವ್ 25 ರನ್ನಿಗೆ ಎರಡು ವಿಕೆಟ್ ಕಿತ್ತರಲ್ಲದೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಖಲೀಲ್ ಅಹ್ಮದ್ ಮತ್ತು ಮುಕೇಶ್ ಕುಮಾರ್ ಕೂಡ ಅವಳಿ ವಿಕೆಟ್ ಪಡೆದರು.
ಡೆಲ್ಲಿ ಬಿರುಸಿನ ಆರಂಭ
ಪ್ಲೇ ಆಫ್ಗೆ ತೇರ್ಗಡೆಯ ಅವಕಾಶವನ್ನು ಉಜ್ವಲಗೊಳಿಸುವ ಉದ್ದೇಶದಿಂದಲೇ ಆಡಿದ ಡೆಲ್ಲಿ ತಂಡವು ಆರಂಭದಿಂದಲೇ ಬಿರುಸಿನ ಆಟಕ್ಕೆ ಇಳಿದಿತ್ತು. ಮೆಕ್‌ಗರ್ಕ್ ಅವರ ಸ್ಫೋಟಕ ಆಟದಿಂದಾಗಿ ತಂಡ ಪವರ್ ಪ್ಲೆಯಲ್ಲಿ ದೊಡ್ಡ ಮೊತ್ತ ಪೇರಿಸತು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೆಕ್‌ಗರ್ಕ್ ಮುಂದಿನ ಎಸೆತದಲ್ಲಿ ಔಟಾದರು. ಒಟ್ಟಾರೆ 20 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಅವರು ಅಭಿಷೇಕ್ ಪೊರೆಲ್ ಜತೆ ಮೊದಲ ವಿಕೆಟಿಗೆ 60 ರನ್ನುಗಳ ಜತೆಯಾಟ ನಡೆಸಿದ್ದರು.
ಮೆಕ್‌ಗರ್ಕ್ ಅವರಿಗೆ ಉಪಯುಕ್ತ ನೆರವು ನೀಡಿದ ಅಭಿಷೇಕ್ ಪೊರೆಲ್ ಕೂಡ ಅರ್ಧಶತಕ ದಾಖಲಿಸಿ ತಂಡವನ್ನು ಆಧರಿಸಿದರು. ಅವರು 36 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 65 ರನ್ ಹೊಡೆದರು. ಕೊನೆ ಹಂತದಲ್ಲಿ ಟ್ರಿಸ್ಟನ್ ಸ್ಟಬ್ಸ್, ಗುಲಾºದಿನ್ ನೈಬ್ ಬಿರುಸಿನ ಆಟ ಆಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು.
ಬಿಗು ದಾಳಿ ಸಂಘಟಿಸಿದ ಆರ್. ಅಶ್ವಿನ್ 24 ರನ್ನಿಗೆ ಮೂರು ವಿಕೆಟ್ ಕಿತ್ತರೆ ಆವೇಶ್ ಖಾನ್ ದುಬಾರಿಯಾದರು. ಅವರು ತನ್ನೆರಡು ಓವರ್‌ಗಳಲ್ಲಿ 42 ರನ್ ಬಿಟ್ಟುಕೊಟ್ಟಿದ್ದರು. ಆವೇಶ್ ಮೊದಲ ಓವರಿನಲ್ಲಿ 28 ರನ್ ಬಿಟ್ಟುಕೊಟ್ಟಿದ್ದರು.
ಸ್ಕೋರ್ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಜೇಕ್ ಮೆಕ್‌ಗರ್ಕ್ ಸಿ ಫೆರೇರ ಬಿ ಅಶ್ವಿನ್ 50
ಅಭಿಷೇಕ್ ಪೊರೆಲ್ ಸಿ ಸಂದೀಪ್ ಬಿ ಅಶ್ವಿನ್ 65
ಶೈ ಹೋಪ್ ರನೌಟ್ 1
ಅಕ್ಷರ್ ಪಟೇಲ್ ಸಿ ಪರಾಗ್ ಬಿ ಅಶ್ವಿನ್ 15
ರಿಷಬ್ ಪಂತ್ ಸಿ ಬೌಲ್ಟ್ ಬಿ ಚಹಲ್ 15
ಟ್ರಿಸ್ಟನ್ ಸ್ಟಬ್ಸ್ ಸಿ ಎಲ್‌ಬಿಡಬ್ಲ್ಯು ಬಿ ಸಂದೀಪ್ 41
ಗುಲಾºದಿನ್ ನೈಬ್ ಸಿ ಅಶ್ವಿನ್ ಬಿ ಬೌಲ್ಟ್ 19
ರಸಿಖ್ ಸಲಂ ರನೌಟ್ 9
ಕುಲದೀಪ್ ಯಾದವ್ ಔಟಾಗದೆ 5
ಇತರ: 1
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 221
ವಿಕೆಟ್ ಪತನ: 1-60, 2-68, 3-110, 4-144, 5-150, 6-195, 7-215, 8-221
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-48-1
ಸಂದೀಪ್ ಶರ್ಮ 4-0-42-1
ಆವೇಶ್ ಖಾನ್ 2-0-42-0
ಆರ್. ಅಶ್ವಿನ್ 4-0-24-3
ರಿಯಾನ್ ಪರಾಗ್ 2-0-17-0
ಯಜುವೇಂದ್ರ ಚಹಲ್ 4-0-48-1
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸಿ ಪಟೇಲ್ ಬಿ ಅಹ್ಮದ್ 4
ಜಾಸ್ ಬಟ್ಲರ್ ಸಿ ಬಿ ಪಟೇಲ್ 19
ಸಂಜು ಸ್ಯಾಮ್ಸನ್ ಸಿ ಹೋಪ್ ಬಿ ಮುಕೇಶ್ 86
ರಿಯಾನ್ ಪರಾಗ್ ಬಿ ರಸಿಖ್ ಸಲಂ 27
ಶುಭಂ ದುಬೆ ಸಿ ಸ್ಟಬ್ಸ್ ಬಿ ಅಹ್ಮದ್ 25 ರೋವ¾ನ್ ಪೊವೆಲ್ ಬಿ ಮುಕೇಶ್ 13 ಡೊನೊವಾನ್ ಫೆರೇರ ಎಲ್‌ಬಿಡಬ್ಲ್ಯು ಬಿ ಕುಲದೀಪ್ 1
ಆರ್. ಅಶ್ವಿನ್ ಸಿ ಹೋಪ್ ಬಿ ಕುಲದೀಪ್ 2
ಟ್ರೆಂಟ್ ಬೌಲ್ಟ್ ಔಟಾಗದೆ 2
ಆವೇಶ್ ಖಾನ್ ಔಟಾಗದೆ 7
ಇತರ: 15
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 201
ವಿಕೆಟ್ ಪತನ: 1-4, 2-67, 3-103, 4-162, 5-180, 6-181, 7-185, 8-194
ಬೌಲಿಂಗ್: ಖಲೀಲ್ ಅಹ್ಮದ್ 4-0-47-2
ಇಶಾಂತ್ ಶರ್ಮ 3-0-34-0 ಮುಕೇಶ್ ಕುಮಾರ್ 3-0-30-2
ಅಕ್ಷರ್ ಪಟೇಲ್ 3-0-25-1
ಕುಲದೀಪ್ ಯಾದವ್ 4-0-25-2
ರಸಿಖ್ ಸಲಂ 3-0-36-1
ಪಂದ್ಯಶ್ರೇಷ್ಠ: ಕುಲದೀಪ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.