ಡೆಲ್ಲಿ- ಕೊಲ್ಕತ್ತಾ ಕಾಳಗ: 18 ರನ್ ಗಳಿಂದ ಸೋತ KKR
Team Udayavani, Oct 3, 2020, 11:38 PM IST
ಅಬುಧಾಬಿ: ಕೆಕೆಆರ್ ವಿರುದ್ಧದ ಶನಿವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 18 ರನ್ನುಗಳಿಂದ ಗೆಲುವು ಸಾಧಿಸಿತು. 229 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್‌ಗಳಲ್ಲಿ 8 ವಿಕೆಟಿಗೆ 210 ರನ್ ಗಳಿಸಲಷ್ಟೆ ಶಕ್ತವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಯಿತು.
ಗುರಿ ಬೆನ್ನೆತ್ತಿದ ಕೆಕೆಆರ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ (3) ಬೇಗನೆ ತಮ್ಮ ವಿಕೆಟ್ ನೀಡಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ಶುಭ್ ಮನ್ ಗಿಲ್ (28) ತಕ್ಕ ಮಟ್ಟಿನ ಹೋರಾಟವನ್ನು ನೀಡಿದರು. ನಿತೀಶ್ ರಾಣಾ 58 ರನ್ ಗಳಿಂದ ತಂಡಕ್ಕೆ ಆಸರೆ ಆದರು. ಮತ್ತೆ ಕ್ರಿಸ್ ಬಂದ ಯಾವೊಬ್ಬ ದಾಂಡಿಗರು ಹೆಚ್ಚೋತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಆಂಡ್ರೆ ರಸ್ಸೆಲ್(13) , ನಾಯಕ ದಿನೇಶ್ ಕಾರ್ತಿಕ್ (6), ಇಯೊನ್ ಮೋರ್ಗಾನ್ (44), ಆಂಡ್ರೆ ರಸ್ಸೆಲ್(13), ಪ್ಯಾಟ್ ಕಮ್ಮಿನ್ಸ್ (5), ರಾಹುಲ್ ತ್ರಿಪಾಠಿ (36) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಡೆಲ್ಲಿ, ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿತು. 20 ಓವರ್ ಮುಗಿದಾಗ 4 ವಿಕೆಟ್ ನಷ್ಟಕ್ಕೆ 228 ರನ್ ಚಚ್ಚಿತು. ಆರಂಭಿಕನಾಗಿ ಬಂದ ಪೃಥ್ವಿ ಶಾ 41 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ನೆರವಿನಿಂದ 66 ರನ್ ಚಚ್ಚಿದರು. ಇನ್ನೊಬ್ಬ ಆರಂಭಿಕ ಶಿಖರ್ ಧವನ್ ತಮ್ಮ ನಿರಾಶಾದಾಯಕ ಆಟ ಮುಂದುವರಿಸಿ 26 ರನ್‌ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಶ್ರೇಯಸ್ ಐಯ್ಯರ್, ಬರೀ 38 ಎಸೆತಗಳಲ್ಲಿ ಭರ್ಜರಿ 7 ಬೌಂಡರಿ, 6 ಸಿಕ್ಸರ್‌ಗಳ ಮೂಲಕ 88 ರನ್ ಬಾರಿಸಿದರು. ಇದರಲ್ಲಿ 64 ರನ್ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಬಂದಿದೆ. ಓಡಿ ಗಳಿಸಿದ್ದು ಕೇವಲ 24 ರನ್. ಕೋಲ್ಕತದ ಅತಿರಥ, ಮಹಾರಥ ಬೌಲರ್‌ಗಳೆಲ್ಲ ಹೆದರಿ ಕಂಗಾಲಾದರು. ಇಲ್ಲಿ ತುಸು ಯಶಸ್ಸು ಸಾಧಿಸಿದ ಬೌಲರ್ ಎಂದರೆ ವೇಗಿ ಆಂಡ್ರೆ ರಸೆಲ್. ಅವರು 29 ರನ್ ನೀಡಿ 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.