ಭರ್ಜರಿ ಗೆಲುವು ದಾಖಲಿಸಿದ ಡೆಲ್ಲಿ
Team Udayavani, Sep 9, 2019, 1:23 AM IST
ಕೋಲ್ಕತಾ: ಪ್ರೊ ಕಬಡ್ಡಿ ಲೀಗ್‌ನ ಕೋಲ್ಕತಾ ಆವೃತ್ತಿಯ ರವಿವಾರದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 50-34 ಅಂಕಗಳಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿದೆ. ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ (59 ಅಂಕ). ಇನ್ನೊಂದೆಡೆ ತಮಿಳ್ ತಲೈವಾಸ್ ಪ್ಲೇ-ಆಫ್ಗೇರುವ ಆಸೆಯನ್ನು ಬಹುತೇಕ ತ್ಯಜಿಸಿದೆ.
ದಿನದ ಇನ್ನೊಂದು ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ 42-39 ಅಂತರದಿಂದ ಪುನೇರಿ ಪಲ್ಟಾನ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್ ಮೂರಕ್ಕೆ ಇಳಿಯಿತು. ಎರಡೂ ತಂಡಗಳು ತಲಾ 48 ಅಂಕ ಗಳಿಸಿವೆ.
ಆರಂಭದಿಂದಲೇ ಸವಾರಿ
ಆರಂಭದಿಂದಲೂ ಡೆಲ್ಲಿ ಪಡೆ ತಮಿಳ್ ಮೇಲೆ ಸವಾರಿ ಮಾಡುತ್ತಲೇ ಹೋಯಿತು. ಅದನ್ನು ಅಂತ್ಯದ ವರೆಗೂ ಕಾಯ್ದುಕೊಂಡು ಭರ್ಜರಿ ಜಯ ಸಾಧಿಸಿತು.
ಡೆಲ್ಲಿ ತಂಡದ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದ್ದು ನವೀನ್ ಕುಮಾರ್ ಹಾಗೂ ಮೆರಾಜ್ ಶೇಖ್. ನವೀನ್ ಕುಮಾರ್ ಎದುರಾಳಿ ಕೋಟೆ ಮೇಲೆ 23 ಬಾರಿ ಎರಗಿ ಹೋಗಿ 17 ಅಂಕ ಗಳಿಸಿದರು. 13 ಅಂಕಗಳು ಟಚ್ ಮೂಲಕ ಬಂದರೆ, ಇನ್ನು 4 ಅಂಕಗಳು ಬೋನಸ್ ರೂಪದಲ್ಲಿ ಲಭಿಸಿದವು. ಇವರಿಗೆ ಪೂರ್ಣ ಬೆಂಬಲ ನೀಡಿದ್ದು ಮೆರಾಜ್ ಅವರು 15 ಬಾರಿ ಎದು ರಾಳಿ ಕೋಟೆಯೊಳಗೆ ನುಗ್ಗಿ 12 ಅಂಕ ಪಡೆಯಲು ಸಫಲರಾದರು. ಇವರಿಬ್ಬರ ಭರ್ಜರಿ ದಾಳಿಗೆ ತಮಿಳ್ ತತ್ತರಿಸಿತು.
ತಮಿಳ್ ತಂಡದ ಸೋಲಿಗೆ ಅಜಯ್ ಠಾಕೂರ್ ತೀವ್ರ ವೈಫಲ್ಯ ಕಾರಣವಾಯಿತು. ಅವರು ದಾಳಿಗೆ ಹೋದದ್ದೇ 4 ಬಾರಿ, ಇದರಲ್ಲಿ ಒಮ್ಮೆಯೂ ಯಶಸ್ಸು ಸಾಧಿಸಲಿಲ್ಲ. ಮತ್ತೂಂದು ಕಡೆ ರಾಹುಲ್ ಚೌಧರಿ 18 ಬಾರಿ ಎದುರಾಳಿ ಕೋಟೆಯನ್ನು ಪ್ರವೇಶಿಸಿ 14 ಅಂಕ ಪಡೆದರು. ಇವರಿಗೆ ಉಳಿದ ಆಟಗಾರ ಬೆಂಬಲ ಲಭಿಸಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.