ಕ್ವಾರ್ಟರ್ ಫೈನಲ್ಗೆ ಚಿರಾಗ್-ಸಾತ್ವಿಕ್
Team Udayavani, Oct 21, 2022, 6:48 AM IST
ಒಡೆನ್ಸ್ (ಡೆನ್ಮಾರ್ಕ್): ಡೆನ್ಮಾರ್ಕ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ನಲ್ಲಿ ಭಾರತದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಎಡವಿದ್ದಾರೆ.
ಭಾರತದ ಜೋಡಿ ಇಂಡೋನೇಷ್ಯಾದ ಮುಹಮ್ಮದ್ ಫಿಕ್ರಿ-ಮೌಲಾನಾ ಬಗಾಸ್ ವಿರುದ್ಧ 21-14, 21-16 ಅಂತರದ ಗೆಲುವು ಒಲಿಸಿಕೊಂಡಿತು. ಕೇವಲ 36 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.
ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಎಚ್.ಎಸ್. ಪ್ರಣಯ್-ಲಕ್ಷ್ಯ ಸೇನ್ ಮುಖಾಮುಖೀ ಆಗಲಿದ್ದಾರೆ. ಪ್ರಣಯ್ 21-13, 22-20 ಅಂತರದಿಂದ ಚೀನದ ಜಾವೊ ಜುನ್ ಪೆಂಗ್ ಅವರನ್ನು ಮಣಿಸಿದರು.
ಸೈನಾಗೆ ಆಘಾತ:
ಭಾರತದ ನೆಚ್ಚಿನ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಬುಧವಾರ ರಾತ್ರಿಯ ಪಂದ್ಯದಲ್ಲಿ ಚೀನದ ಚಾಂಗ್ ಯೀ ಮನ್ ವಿರುದ್ಧ 17-21, 21-19, 11-21 ಅಂತರದಿಂದ ಪರಾಭವಗೊಂಡರು.
ವನಿತಾ ಡಬಲ್ಸ್ನಲ್ಲಿ 16ರ ಸುತ್ತಿನ ಪಂದ್ಯದಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಸೋಲನುಭವಿಸಿದರು. ಥಾಯ್ಲೆಂಡ್ನ ಜೊಂಗೊಲ್ಪಾನ್ ಕಿಟಿತಾರಕ್-ರವಿಂದಾ ಪ್ರಜೊಂಗ್ಜಾಯ್ 23-21, 21-13ರಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.