ದೇವಧರ್ ಟ್ರೋಫಿ ಕ್ರಿಕೆಟ್: ಇಂಡಿಯಾ ಸಿ 232 ರನ್ ಜಯಭೇರಿ
Team Udayavani, Nov 2, 2019, 12:55 AM IST
ರಾಂಚಿ: ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಮತ್ತು ಶುಭಮನ್ ಗಿಲ್ ಅವರ ಶತಕದ ಅಬ್ಬರಕ್ಕೆ ತತ್ತರಿಸಿದ ಇಂಡಿಯಾ ಎ ತಂಡ ಸತತ 2 ಸೋಲುಂಡು “ದೇವಧರ್ ಟ್ರೋಫಿ’ ಏಕದಿನ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಶುಕ್ರವಾರ ರಾಂಚಿಯಲ್ಲಿ ನಡೆದ 2ನೇ ಮುಖಾಮುಖೀಯಲ್ಲಿ ಇಂಡಿಯಾ ಸಿ 232 ರನ್ನುಗಳ ಭಾರೀ ಅಂತರದಿಂದ ಇಂಡಿಯಾ ಎ ತಂಡಕ್ಕೆ ಸೋಲುಣಿಸಿತು. ಮೊದಲ ಪಂದ್ಯದಲ್ಲಿ ಹನುಮ ವಿಹಾರಿ ಸಾರಥ್ಯದ ಇಂಡಿಯಾ ಎ 108 ರನ್ನುಗಳಿಂದ ಇಂಡಿಯಾ ಬಿ ತಂಡಕ್ಕೆ ಶರಣಾಗಿತ್ತು.
ಶನಿವಾರದ ಅಂತಿಮ ಲೀಗ್ ಪಂದ್ಯದಲ್ಲಿ ಇಂಡಿಯಾ ಬಿ ಮತ್ತು ಇಂಡಿಯಾ ಸಿ ತಂಡಗಳು ಮುಖಾಮುಖೀಯಾಗಲಿವೆ. ಈ ತಂಡಗಳೇ ಸೋಮವಾರದ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿವೆ.
ಇಂಡಿಯಾ ಸಿ ಭರ್ಜರಿ ಆಟ
ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಸಿ 3 ವಿಕೆಟಿಗೆ 366 ರನ್ ಪೇರಿಸಿ ಸವಾಲೊಡ್ಡಿತು. ಬಳಿಕ ಜಲಜ್ ಸಕ್ಸೇನಾ ದಾಳಿಗೆ ತತ್ತರಿಸಿದ ಇಂಡಿಯಾ ಎ 29.5 ಓವರ್‌ಗಳಲ್ಲಿ 134ಕ್ಕೆ ಆಲೌಟ್ ಆಯಿತು. ಸಕ್ಸೇನಾ 41 ರನ್ನಿಗೆ 7 ವಿಕೆಟ್ ಉರುಳಿಸಿದರು. ಇದು ದೇವಧರ್ ಟ್ರೋಫಿ ಇತಿಹಾಸದ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಟೆಸ್ಟ್ ಆರಂಭಕಾರ ಮಾಯಾಂಕ್ ಅಗರ್ವಾಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕ ಇಂಡಿಯಾ ಸಿ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಗಿಲ್ 142 ಎಸೆತಗಳಿಂದ 143 ರನ್ ಬಾರಿಸಿದರು. ಈ ಬ್ಯಾಟಿಂಗ್ ಅಬ್ಬರದ ವೇಳೆ 10 ಬೌಂಡರಿ, 6 ಸಿಕ್ಸರ್ ಸಿಡಿಯಲ್ಪಟ್ಟಿತು.
ಅಗರ್ವಾಲ್ 111 ಎಸೆತ ಎದುರಿಸಿ 120 ರನ್ ಹೊಡೆದರು. ಇದರಲ್ಲಿ 15 ಫೋರ್, ಒಂದು ಸಿಕ್ಸರ್ ಸೇರಿತ್ತು. 38.3 ಓವರ್ ಜತೆಯಾಟ ನಡೆಸಿದ ಅಗರ್ವಾಲ್-ಗಿಲ್ ಮೊದಲ ವಿಕೆಟಿಗೆ 226 ರನ್ ರಾಶಿ ಹಾಕಿದರು.
ಯಾದವ್ ಸ್ಫೋಟಕ ಬ್ಯಾಟಿಂಗ್
ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟಕ್ಕೆ ಮುಂದಾದ್ದರಿಂದ ತಡದ ಮೊತ್ತ 350ರ ಗಡಿ ದಾಟಿತು. ಯಾದವ್ ಕೇವಲ 29 ಎಸೆತಗಳಿಂದ ಅಜೇಯ 72 ರನ್ ಬಾರಿಸಿದರು. ಇದರಲ್ಲಿ 9 ಬೌಂಡರಿ, 4 ಸಿಕ್ಸರ್ ಒಳಗೊಂಡಿತ್ತು.
ಇಂಡಿಯಾ ಎ ಬ್ಯಾಟಿಂಗ್ ಸರದಿಯಲ್ಲಿ 31 ರನ್ ಮಾಡಿದ ಆರಂಭಕಾರ ದೇವದತ್ತ ಪಡಿಕ್ಕಲ್ ಅವರದೇ ಹೆಚ್ಚಿನ ಗಳಿಕೆ.
ಸಂಕ್ಷಿಪ್ತ ಸ್ಕೋರ್: ಇಂಡಿಯಾ ಸಿ-3 ವಿಕೆಟಿಗೆ 366 (ಗಿಲ್ 143, ಅಗರ್ವಾಲ್ 120, ಯಾದವ್ ಅಜೇಯ 72, ವಿಹಾರಿ 48ಕ್ಕೆ 1). ಇಂಡಿಯಾ ಎ-29.5 ಓವರ್‌ಗಳಲ್ಲಿ 134 (ಪಡಿಕ್ಕಲ್ 31, ಭಾರ್ಗವ್ 30, ಇಶಾನ್ 25, ಸಕ್ಸೇನಾ 41ಕ್ಕೆ 7, ಪೊರೆಲ್ 12ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.