ಧನಂಜಯ ಡಿ’ ಸಿಲ್ವ,ಟಾಮ್ ಲ್ಯಾಥಂ ಶತಕದಾಟ
Team Udayavani, Aug 25, 2019, 5:09 AM IST
ಕೊಲಂಬೊ: ತೀವ್ರ ಮಳೆಯಿಂದ ಅಡಚಣೆಗೊಳಗಾಗಿರುವ ಕೊಲಂಬೊ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಅವಳಿ ಶತಕ ದಾಖಲಾಗಿದೆ. ಲಂಕೆಯ ಧನಂಜಯ ಡಿ’ಸಿಲ್ವ ಮತ್ತು ನ್ಯೂಜಿಲ್ಯಾಂಡಿನ ಟಾಮ್ ಲ್ಯಾಥಂ ಸೆಂಚುರಿ ಬಾರಿಸಿ ಮೆರೆದರು.
ಶ್ರೀಲಂಕಾದ 244 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬು ನೀಡುತ್ತಿರುವ ನ್ಯೂಜಿಲ್ಯಾಂಡ್, ಶನಿವಾರದ ಆಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 196 ರನ್ ಪೇರಿಸಿದೆ. ಆರಂಭಕಾರ ಲ್ಯಾಥಂ 111 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಅವರ 10ನೇ ಟೆಸ್ಟ್ ಸೆಂಚುರಿ. 184 ಎಸೆತ ಎದುರಿಸಿರುವ ಲ್ಯಾಥಂ, 10 ಬೌಂಡರಿ ಹೊಡೆದಿದ್ದಾರೆ. ಇವರೊಂದಿಗೆ ಕ್ರೀಸಿನಲ್ಲಿರು ವವರು 25 ರನ್ ಮಾಡಿರುವ ಬ್ರಾಡ್ಲಿ ವಾಟಿÉಂಗ್.
ಶ್ರೀಲಂಕಾ 6ಕ್ಕೆ 144 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. 32 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಧನಂಜಯ ಡಿ’ಸಿಲ್ವ ಅತ್ಯಂತ ಜವಾಬ್ದಾರಿಯುತವಾಗಿ ಆಡಿ 5ನೇ ಶತಕ ಸಂಭ್ರಮವನ್ನಾಚರಿಸಿದರು. ಅವರ ಕೊಡುಗೆ 109 ರನ್. 148 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ, 2 ಸಿಕ್ಸರ್ ಸೇರಿತ್ತು. ಅವರು ಅಂತಿಮ ವಿಕೆಟ್ ರೂಪದಲ್ಲಿ ಬೌಲ್ಟ್ ಗೆ ಬೌಲ್ಡ್ ಆದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-244 (ಧನಂಜಯ 109, ಕರುಣರತ್ನೆ 65, ಮೆಂಡಿಸ್ 32, ಸೌಥಿ 63ಕ್ಕೆ 4, ಬೌಲ್ಟ್ 75ಕ್ಕೆ 3). ನ್ಯೂಜಿಲ್ಯಾಂಡ್-4 ವಿಕೆಟಿಗೆ 196 (ಲ್ಯಾಥಂ ಬ್ಯಾಟಿಂಗ್ 111, ವಾಟಿÉಂಗ್ ಬ್ಯಾಟಿಂಗ್ 25, ಟೇಲರ್ 23, ಡಿ. ಪೆರೆರ 76ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.