Dharamshala; 4-1 ಮುನ್ನಡೆಯ ಹಾದಿ ವಿಶಾಲ : ಅಶ್ವಿನ್,ಬೇರ್‌ಸ್ಟೊ 100ನೇ ಟೆಸ್ಟ್ ಸಂಭ್ರಮ
Team Udayavani, Mar 7, 2024, 6:41 AM IST
ಧರ್ಮಶಾಲಾ: ಪ್ರಕೃತಿ ಯನ್ನೇ ಹೊದ್ದಂತಿರುವ ರಮಣೀಯ ತಾಣ, ಹಿಮಾಚಲದ ಗಿರಿಶಿಖರ ಧರ್ಮಶಾಲಾ 7 ವರ್ಷಗಳ ಬಳಿಕ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಗುರುವಾರ ಮೊದಲ್ಗೊಳ್ಳಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ಇಲ್ಲಿ ಮುಖಾಮುಖೀ ಆಗಲಿವೆ. ಈಗಾಗಲೇ ರಾಂಚಿಯಲ್ಲಿ ಸರಣಿ ಗೆಲುವಿನ ಸಂಭ್ರಮ ಆಚರಿಸಿರುವ ರೋಹಿತ್ ಪಡೆ, ಈ ಮುನ್ನಡೆಯನ್ನು 4-1ಕ್ಕೆ ಏರಿಸುವ ಯೋಜನೆಯಲ್ಲಿದೆ. ಇದರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ.
ಹಿಂದಿನ ನಾಲ್ಕೂ ತಾಣಗಳಿಗೆ ಹೋಲಿಸಿದರೆ ಧರ್ಮ ಶಾಲಾದ “ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿ ಯೇಶನ್ ಸ್ಟೇಡಿಯಂ’ ಭಿನ್ನ. ಇಲ್ಲಿನ ವಾತಾವರಣ ಮಂಜು ಹಾಗೂ ತೀವ್ರ ಥಂಡಿ ಹವೆಯಿಂದ ಕೂಡಿದೆ. ಗರಿಷ್ಠ ತಾಪ ಮಾನವೇ 10 ಡಿಗ್ರಿ ಸೆಲಿÏಯಸ್‌ನಷ್ಟು ಇರ ಲಿದೆ. ಒಂದು ರೀತಿಯಲ್ಲಿ ಇಂಗ್ಲೆಂಡಿಗ ರಿಗೆ ಇದು ಮನೆಯ ವಾತಾ ವರಣದಂತಿದೆ. ಆದರೆ ಈಗಾ ಗಲೇ ಸೋತು ಸುಣ್ಣವಾಗಿರುವ ಆಂಗ್ಲರು ಇದರ ಲಾಭ ವೆತ್ತುವ ಸ್ಥಿತಿಯಲ್ಲಿಲ್ಲ ಎಂದೇ ಹೇಳಬಹುದು.
ಬುಮ್ರಾ ಆಗಮನ
ಈ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಒಂದು ಬದಲಾವಣೆ ಸಂಭವಿಸಬೇಕಾದುದು ಅನಿವಾರ್ಯ. ರಾಂಚಿಯಲ್ಲಿ ವಿಶ್ರಾಂತಿ ಪಡೆದಿದ್ದ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಧರ್ಮಶಾಲಾದಲ್ಲಿ ಆಡಲಿಳಿಯಲಿದ್ದಾರೆ. ಮೊಹಮ್ಮದ್ ಸಿರಾಜ್ ದ್ವಿತೀಯ ಪೇಸ್ ಬೌಲರ್ ಆಗಿರುವುದಾದರೆ ಆಕಾಶ್ ದೀಪ್ ಹೊರಗುಳಿಯಬೇಕಾಗುತ್ತದೆ. ಆಕಾಶ್ ದೀಪ್ ರಾಂಚಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕೆಡವಿದ್ದರು. ಸ್ಪಿನ್ ವಿಭಾಗದಲ್ಲಿ ಎಂದಿನ ತ್ರಿವಳಿಗಳೇ ಇರುತ್ತಾರೆ.
ಪಾಟಿದಾರ್/ಪಡಿಕ್ಕಲ್?
ಬ್ಯಾಟಿಂಗ್ ಸರದಿಯಲ್ಲಿ ರಜತ್ ಪಾಟಿದಾರ್ ಮತ್ತು ದೇವದತ್ತ ಪಡಿಕ್ಕಲ್ ನಡುವೆ ಸ್ಪರ್ಧೆ ಇದೆ. ಪಾಟಿದಾರ್ ಈವರೆಗೆ ಅವಕಾಶವನ್ನು ಬಳಸಿಕೊಂಡಿಲ್ಲ. 4ನೇ ಕ್ರಮಾಂಕದಲ್ಲಿ ಆಡ ಲಿಳಿದು 6 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 63 ರನ್ ಮಾತ್ರ. ಹೀಗಾಗಿ ಇವರನ್ನು ಇನ್ನೂ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಎಡಗೈ ಬ್ಯಾಟರ್ ಪಡಿಕ್ಕಲ್‌ಗೆ
ಅವಕಾಶ ಕೊಟ್ಟು ನೋಡಬಹುದು.
ಜೈಸ್ವಾಲ್ ಜೈತ್ರಯಾತ್ರೆ
ಪ್ರಸಕ್ತ ಸರಣಿಯಲ್ಲಿ 2 ದ್ವಿಶತಕಗಳೊಂದಿಗೆ ರನ್ ಪ್ರವಾಹವನ್ನೇ ಹರಿಸಿರುವ ಯಶಸ್ವಿ ಜೈಸ್ವಾಲ್ ಈ ಪಂದ್ಯದ ಕೇಂದ್ರಬಿಂದು ಆಗಿದ್ದಾರೆ. 8 ಇನ್ನಿಂಗ್ಸ್‌ಗಳಿಂದ ಇವರ ರನ್ ಗಳಿಕೆ 655ಕ್ಕೆ ಏರಿದೆ. ಸರಣಿಯೊಂದರಲ್ಲಿ 700 ರನ್ ಬಾರಿಸಿದ ಭಾರತದ ದ್ವಿತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಸ್ಥಾಪಿಸುವ ಅವಕಾಶವೊಂದು ಜೈಸ್ವಾಲ್ ಮುಂದಿದೆ. ಮೊದಲಿಗ ಸುನೀಲ್ ಗಾವಸ್ಕರ್. 1971ರ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಸರಣಿಯಲ್ಲೇ ಗಾವಸ್ಕರ್ 774 ರನ್ ಪೇರಿಸಿದ್ದರು.
700ರತ್ತ ಆ್ಯಂಡರ್ಸನ್
ಇಂಗ್ಲೆಂಡ್‌ನ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಕೂಡ ನೂತನ ಇತಿಹಾಸದ ಹೊಸ್ತಿಲಲ್ಲಿದ್ದಾರೆ. ಇನ್ನಿಬ್ಬರನ್ನು ಔಟ್ ಮಾಡಿದರೆ ಅವರ ವಿಕೆಟ್ ಸಂಖ್ಯೆ 700ಕ್ಕೆ ಏರಲಿದೆ. ಆಗ ಈ ಸಾಧನೆಗೈದ ವಿಶ್ವದ ಕೇವಲ 3ನೇ ಬೌಲರ್ ಹಾಗೂ ಮೊದಲ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ವುಡ್
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ ಬಳಗವನ್ನು ಪ್ರಕಟಿ ಸಿದೆ. ಒಂದು ಬದಲಾವಣೆ ಮಾಡಿ ಕೊಂಡಿದ್ದು, ಓಲೀ ರಾಬಿನ್ಸನ್ ಬದಲು ಮಾರ್ಕ್ ವುಡ್ ಅವರನ್ನು ಸೇರಿಸಿಕೊಂಡಿದೆ.
ಇಂಗ್ಲೆಂಡ್ ಇಲೆವೆನ್: ಜಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ , ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್, ಶೋಯಿಬ್ ಬಶೀರ್.
ಆರ್. ಅಶ್ವಿನ್, ಬೇರ್‌ಸ್ಟೊ 100ನೇ ಟೆಸ್ಟ್ ಸಂಭ್ರಮ
ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಧರ್ಮಶಾಲಾದಲ್ಲಿ 100ನೇ ಟೆಸ್ಟ್ ಪಂದ್ಯ ಆಡಲಿಳಿಯಲಿದ್ದಾರೆ. ಅವರು “ಟೆಸ್ಟ್ ಶತಕ’ದ ದಾಖಲೆ ಬರೆದ ಭಾರತದ 14ನೇ ಕ್ರಿಕೆಟಿಗ ನೆನಿಸಿಕೊಳ್ಳಲಿದ್ದಾರೆ.
ಇದೇ ವೇಳೆ ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೊ ಕೂಡ 100ನೇ ಟೆಸ್ಟ್ ಆಡಲಿದ್ದಾರೆ. 147 ವರ್ಷಗಳ ಟೆಸ್ಟ್ ಚರಿತ್ರೆಯಲ್ಲಿ, ಒಂದೇ ಪಂದ್ಯದಲ್ಲಿ ಇತ್ತಂಡಗಳ ಇಬ್ಬರು ಆಟಗಾರರು 100ನೇ ಟೆಸ್ಟ್ ಆಡಲಿಳಿಯುವ ದ್ವಿತೀಯ ನಿದರ್ಶನ ಇದಾಗಿದೆ. 2013ರ ಪರ್ತ್ ಟೆಸ್ಟ್‌ನಲ್ಲಿ ಅಲಸ್ಟೇರ್ ಕುಕ್, ಮೈಕಲ್ ಕ್ಲಾರ್ಕ್ ಒಟ್ಟಿಗೇ 100ನೇ ಟೆಸ್ಟ್ ಆಡಿದ್ದರು.
ಇನ್ನೂ ಮುಂದುವರಿದು ಹೇಳುವು ದಾದರೆ, ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಕೂಡ ಒಟ್ಟಿಗೇ 100ನೇ ಟೆಸ್ಟ್ ಆಡಲಿದ್ದಾರೆ. ಒಂದೇ ತಂಡದ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ 100ನೇ ಟೆಸ್ಟ್ ಆಡುವ ಮೂರನೇ ಸಂದರ್ಭ ಇದಾಗಲಿದೆ. ಈ ಪಂದ್ಯ ಮಾ. 8ರಂದು ಆರಂಭವಾಗಲಿದೆ.
ಮುರಳಿ ಬಳಿಕ ಅಶ್ವಿನ್
507 ವಿಕೆಟ್‌ಗಳ ಸಾಧನೆ ಯೊಂದಿಗೆ ಅಶ್ವಿನ್ 100ನೇ ಟೆಸ್ಟ್ ಆಡ ಲಿಳಿಯುವರು. ಈ ಸಾಧನೆ ಯಲ್ಲಿ ಅವರಿಗೆ 2ನೇ ಸ್ಥಾನ. ಮುತ್ತಯ್ಯ ಮುರಳೀ ಧರನ್ 100ನೇ ಟೆಸ್ಟ್ ವೇಳೆ 584 ವಿಕೆಟ್ ಉರುಳಿ ಸಿರುವುದು ದಾಖಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.