ದುಬೈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಧಾರವಾಡದ 76 ವರ್ಷದ ಶಿವಪ್ಪ !
Team Udayavani, Aug 4, 2023, 5:26 PM IST
ಧಾರವಾಡ : ದುಬೈನಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಚಿನ್ನದ ಪದಕವು ಭಾರತ ದೇಶಕ್ಕೆ ಲಭಿಸಿದ್ದು, ಈ ಮೂಲಕ ತ್ರಿವರ್ಣ ಧ್ವಜವು ಹಾರಾಡುವಂತೆ ಮಾಡಿದ್ದಾರೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದ 76 ವರ್ಷದ ಹಿರಿಯ ಜೀವ ಶಿವಪ್ಪ ಸಲಕಿ..!
ಕೆಲ ದಿನಗಳ ಹಿಂದೆಯಷ್ಟೇ ದುಬೈ ಹಾರಿದ್ದ ಶಿವಪ್ಪ, ಜು.31 ರಿಂದ ಆ.6 ರವರೆಗೆ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಈ ಪೈಕಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಥಮ ಸ್ಥಾನ ಗಿಟ್ಟಿಸುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ. ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಇದರಿಂದ ಸಲಕಿ ಕುಟುಂಬವಲ್ಲದೇ ಮರೇವಾಡ ಗ್ರಾಮಸ್ಥರೆಲ್ಲರಲ್ಲೂ ಸಂತಸ ಮೂಡಿದೆ.
ಈಗಾಗಲೇ ರಾಜ್ಯಮಟ್ಟದ 26 ಕ್ಕೂ ಅಧಿಕ, ರಾಷ್ಟ್ರ ಮಟ್ಟದ ೨೦ ವಿವಿಧ ಕ್ರೀಟಾಕೂಟಗಳಲ್ಲಿ ಪಾಲ್ಗೊಂಡಿರುವ ಶಿವಪ್ಪ ಮಲೇಶಿಯಾ, ನೇಪಾಳಗಳಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಹಿರಿಮೆ. ಈ ಹಿಂದೆ ನೇಪಾಳದಲ್ಲಿ ಎಸ್‌ಬಿಕೆಎಫ್ (ಸಂಯುಕ್ತ ಭಾರತೀಯ ಖೇಲ್ ಫೆಡರೇಷನ್) ಆಯೋಜಿಸಿದ್ದ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಂಡು, 100 ಮೀ, 800 ಮೀ ಹಾಗೂ 1500 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ಎಂದು ಸ್ಮರಿಸಬಹುದು. ಇನ್ನು ದುಬೈಗೆ ತೆರಳಲು ಆರ್ಥಿಕ ಸಂಕಷ್ಟ ಎದುರಿಸಿದ್ದ ಶಿವಪ್ಪ ಅವರಿಗೆ ಶಾಸಕ ವಿನಯ ಕುಲಕರ್ಣಿ, ಮೊಮ್ಮಗಳು ಅನಿತಾ ಮಟ್ಟಿ, ಈಶ್ವರ ಶಿವಳ್ಳಿ ಸೇರಿದಂತೆ ವಿವಿಧ ದಾನಿಗಳು ನೆರವಿನ ಹಸ್ತ ಚಾಚಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.