ಹೆಬ್ಬೆರಳ ಮೂಳೆ ಮುರಿತ : 2019ರ ವಿಶ್ವಕಪ್ ಕ್ರಿಕೆಟ್ ನಿಂದ ಶಿಖರ್ ಧವನ್ ಹೊರಕ್ಕೆ
Team Udayavani, Jun 19, 2019, 7:31 PM IST
ಬರ್ಮಿಂಗಂ : ಟೀಮ್ ಇಂಡಿಯಾಕ್ಕೆ ಒದಗಿರುವ ಭಾರೀ ದೊಡ್ಡ ಹೊಡೆತದಲ್ಲಿ ಎಡಗೈ ಆರಂಭಕಾರ ಶಿಖರ್ ಧವನ್ ಅವರು ಹೆಬ್ಬೆರಳ ಮೂಳೆ ಮುರಿತದಿಂದಾಗಿ 2019ರ ವಿಶ್ವ ಕಪ್ ಕ್ರಿಕೆಟ್ ನಿಂದ ಹೊರಬಿದ್ದಿದ್ದಾರೆ.
ಧವನ್ ಅವರ ಸ್ಥಾನವನ್ನು ಭರವಸೆಯ ಮತ್ತು ಪ್ರತಿಭಾವಂತ ಯುವ ಕ್ರಿಕೆಟಿಗ ರಿಷಬ್ ಪಂತ್ ತುಂಬಲಿದ್ದಾರೆ.
33ರ ಹರೆಯದ ಧವನ್ ಅವರು ಐದು ಬಾರಿಯ ವಿಶ್ವ ಕಪ್ ವಿಜೇತ ಆಸೀಸ್ ತಂಡದ ವಿರುದ್ಧ ಈ ಕೂಟದಲ್ಲಿ ಭಾರತ ವಿಜಯ ಸಾಧಿಸುವಲ್ಲಿ 109 ಎಸೆತಗಳಲ್ಲಿ 117 ರನ್ ಬಾರಿಸಿ ಮುಖ್ಯ ಪಾತ್ರವಹಿಸಿದ್ದರು.
ಕಳೆದ ಜೂನ್ 9ರಂದು ಓವಲ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪ್ಯಾಟ್ ಕ್ಯುಮಿನ್ಸ್ ಅವರ ಶತಕದ ಬೀಸುಗೆಯ ವೇಳೆ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿ ಕನಿಷ್ಠ ಮೂರು ವಾರಗಳ ಮಟ್ಟಿಗೆ ಅನರ್ಹರೆಂದು ಘೋಷಿಸಲ್ಪಟ್ಟಿದ್ದರು.
ಇದೀಗ ಎಡಗೈ ಹೆಬ್ಬೆರಳ ಮೂಳೆ ಮುರಿತ ಖಚಿತವಾಗಿದ್ದು ಶಿಖರ್ ಧವನ್ ಸಹಜವಾಗಿಯೇ ಹಾಲಿ ವಿಶ್ವಕಪ್ ಕ್ರಿಕೆಟ್ ಕೂಟದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.