ಅಭಿಮಾನಿ ಕುಟುಂಬದಿಂದ ಧವನ್ ಭೇಟಿ
Team Udayavani, May 7, 2018, 7:45 AM IST
ಹೈದರಾಬಾದ್: ಸನ್‌ರೈಸರ್ ಹೈದರಾಬಾದ್ ತಂಡದ ತಾರಾ ಆಟಗಾರ ಶಿಖರ್ ಧವನ್ ಅವರು ಬೆಂಗಳೂರಿನ ಕಟ್ಟಾಭಿಮಾನಿ ಶಂಕರ್ ಮತ್ತು ಅವರ ಕುಟುಂಬವನ್ನು ಭೇಟಿಯಾಗಿದ್ದಾರೆ. ಸ್ವತಃ ಧವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿ ಜತಗೆ ತೆಗೆಸಿಕೊಂಡಿರುವ ಫೋಟೊವೊಂದನ್ನು ಪ್ರಕಟಿಸಿದ್ದಾರೆ.
ಧವನ್ ಭೇಟಿಯಾಗಲೆಂದೇ ಬೆಂಗಳೂರಿನಿಂದ ಹೈದರಾಬಾದ್‌ಗೆ ಶಂಕರ್ ತೆರಳಿದ್ದರು. ಬಹಳ ದಿನಗಳಿಂದ ಧವನ್ ಭೇಟಿಯಾಗಬೇಕೆನ್ನುವ ಕನಸು ಅವರದಾಗಿತ್ತು. ಆದರೆ ಅದು ಈಡೇರಿರಲಿಲ್ಲ. ತನ್ನನ್ನು ಭೇಟಿಯಾಗಲು ಬಂದ ಶಂಕರ್ ಅವರನ್ನು ನಿರಾಸೆ ಮಾಡಲು ಧವನ್‌ಗೂ ಮನಸ್ಸು ಒಪ್ಪಲಿಲ್ಲ. ಬಳಿಕ ಇವರಿಬ್ಬರ ಭೇಟಿ ನಡೆದಿದೆ. ಈ ವೇಳೆ ಧವನ್ ಪತ್ನಿ ಕೂಡ ಇದ್ದರು ಎನ್ನುವುದು ವಿಶೇಷ.
“ಶಂಕರ್ ಭೇಟಿಯಾಗಿರುವುದು ಸಂತಸದ ಕ್ಷಣ. ಅವರು ನನ್ನ ದೊಡ್ಡ ಅಭಿಮಾನಿ. ದೂರದ ಊರಿನಿಂದ ಇಲ್ಲಿ ತನಕ ಬಂದಿದ್ದಾರೆ. ಅಭಿಮಾನಿಗಳು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ. ಥ್ಯಾಂಕ್ಯೂ ಶಂಕರ್ ಮತ್ತು ಎಲ್ಲ ನನ್ನ ಅಭಿಮಾನಿಗಳಿಗೆ’ ಎಂದು ಧವನ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.