9 ವರ್ಷಗಳ ನಂತರ ಮೊದಲ ಬಾಲ್ ಗೆ ಔಟ್ ಆದ ಧೋನಿ
Team Udayavani, Mar 5, 2019, 10:57 AM IST
ನಾಗ್ಪುರ: ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಮೊದಲ ಬಾಲ್ ಗೆ ಔಟ್ ಆಗಿದ್ದಾರೆ. ಧೋನಿ ಈ ಹಿಂದೆ ಮೊದಲ ಎಸೆತಕ್ಕೆ ಔಟ್ ಆಗಿರುವುದು 2010ರಲ್ಲಿ. ಅಂದರೆ ಬರೋಬ್ಬರಿ 9 ವರ್ಷಗಳ ಹಿಂದೆ.
ಇಂದಿನ ಪಂದ್ಯದ 32 ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಆಸೀಸ್ ಸ್ಪಿನ್ನರ್ ಆಡಂ ಜಾಂಪಾ, ಓವರ್ ನ ಎರಡನೇ ಎಸೆತಕ್ಕೆ ಕೇದಾರ್ ಜಾಧವ್ ಔಟ್ ಆದರು. ನಂತರ ಬ್ಯಾಟ್ ಹಿಡಿದು ಬಂದ ಮಹೇಂದ್ರ ಸಿಂಗ್ ಧೋನಿ ತಾನೆದುರಿಸಿದ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಸ್ಲಿಪ್ ನಲ್ಲಿದ್ದ ಖ್ವಾಜಾಗೆ ಕ್ಯಾಚ್ ನೀಡಿದ ಗೋಲ್ಡನ್ ಡಕ್ ಗೆ ಬಲಿಯಾದರು.
2010ರ ವಿಶಾಖಪಟ್ಟಣ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಧೋನಿ ಈ ಹಿಂದೆ ಡಕ್ ಔಟ್ ಆಗಿದ್ದರು. ಮತ್ತೊಂದು ವಿಶೇಷವೇನೆಂದರೆ, ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಗೋಲ್ಡನ್ ಡಕ್ ಗೆ ಬಲಿಯಾಗಿದ್ದರು. ಆ ಪಂದ್ಯ 2004ರಲ್ಲಿ ಬಾಂಗ್ಲಾದೇಶ ತಂಡದ ಎದುರು ಚಿತ್ತಗಾಂಗ್ ನಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಸಜ್ಜಾಗುತ್ತಿದೆ ಆನೆಮಜಲು ಕೋರ್ಟ್ ಸಂಕೀರ್ಣ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.