ಟ್ವೆಂಟಿ20ಯಲ್ಲಿ 6,000 ರನ್: ಧೋನಿ ಭಾರತದ ಐದನೇ ಆಟಗಾರ
Team Udayavani, May 20, 2018, 11:49 AM IST
ಮುಂಬಯಿ: ಯಶಸ್ವಿ ನಾಯಕ ಎಂಎಸ್ ಧೋನಿ ತನ್ನ ಮಹೋನ್ನತ ಕ್ರಿಕೆಟ್ ಬಾಳ್ವೆಯಲ್ಲಿ ಇನ್ನೊಂದು ಗರಿ ಸೇರಿಸಿಕೊಂಡಿದ್ದಾರೆ. ಟ್ವೆಂಟಿ20 ಕ್ರಿಕೆಟ್‌ನಲ್ಲಿ 6,000 ರನ್ ಪೂರ್ತಿಗೊಳಿಸುವ ಮೂಲಕ ಧೋನಿ ಈ ಸಾಧನೆ ಮಾಡಿದರು. ದಿಲ್ಲಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಈ ಸಾಧನೆ ಬರೆದರು.
ಧೋನಿ ಟ್ವೆಂಟಿ20ರಲ್ಲಿ 6,000 ರನ್ ಪೂರ್ತಿಗೊಳಿಸಿದ ಭಾರತದ ಐದನೇ ಆಟಗಾರರಾಗಿದ್ದಾರೆ. ಈ ಮೊದಲು ಸುರೇಶ್ ರೈನಾ (7,708), ವಿರಾಟ್ ಕೊಹ್ಲಿ (7,621), ರೋಹಿತ್ ಶರ್ಮ (7,303) ಮತ್ತು ಗೌತಮ್ ಗಂಭೀರ್ (6,402) ಈ ಸಾಧನೆ ಮಾಡಿದ್ದರು.ಡೆಲ್ಲಿ ವಿರುದ್ಧದ ಪಂದ್ಯ ಮೊದಲು ಧೋನಿಗೆ 6,000 ಕ್ಲಬ್‌ಗ
ಸೇರಲು 10 ರನ್ ಬೇಕಿತ್ತು. ಟ್ರೆಂಟ್ ಬೌಲ್ಟ್ ದಾಳಿಗೆ ಔಟಾಗುವ ಮೊದಲು ಅವರು 17 ರನ್ ಗಳಿಸಿದ್ದರು. 36ರ ಹರೆಯದ ಧೋನಿ 290 ಟ್ವೆಂಟಿ20 ಪಂದ್ಯಗಳನ್ನಾಡಿದ್ದು 6,007 ರನ್ ಗಳಿಸಿದ್ದಾರೆ.
ಗೇಲ್ ನಂಬರ್ ವನ್
ವೆಸ್ಟ್‌ಇಂಡೀಸ್‌ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಟ್ವೆಂಟಿ20ಯಲ್ಲಿ ಗರಿಷ್ಠ ರನ್ ಗಳಿಸಿದವರಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಟ್ವೆಂಟಿ20ಯಲ್ಲಿ ಜಮೈಕಾದ ಗೇಲ್ 21 ಶತಕ ಮತ್ತು 50 ಅರ್ಧಶತಕ ಸಹಿತ 11,436 ರನ್ ಗಳಿಸಿದ್ದಾರೆ. ನ್ಯೂಜಿಲ್ಯಾಂಡಿನ ಬ್ರೆಂಡನ್ ಮೆಕಲಮ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು 335 ಪಂದ್ಯಗಳನ್ನಾಡಿದ್ದು 30.70 ಸರಾಸರಿಯೊಂದಿಗೆ 9,119 ರನ್ ಪೇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.