2019ರ ವಿಶ್ವಕಪ್‌ವರೆಗೆ ಧೋನಿಯೇ ಭಾರತದ ವಿಕೆಟ್‌ಕೀಪರ್
Team Udayavani, Dec 24, 2017, 6:10 AM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಿಟ್ಟುಸಿರುಬಿಡುವ ಸ್ಪಷ್ಟ ಮಾಹಿತಿಯನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ನೀಡಿದ್ದಾರೆ.
ಇದುವರೆಗೆ ಧೋನಿ ಭಾರತ ತಂಡದಲ್ಲಿ ಎಲ್ಲಿಯವರೆಗೆ ಉಳಿದುಕೊಳ್ಳುತ್ತಾರೆ ಎಂಬ ಕುರಿತೇ ಗೊಂದಲವಿತ್ತು. ಅವರನ್ನು ತಂಡದಿಂದ ಕಿತ್ತುಹಾಕಿ ಯುವಕರಿಗೆ ಅವಕಾಶ ನೀಡಿ ಎಂಬ ಕೂಗು ಕೂಡ ಇತ್ತು. ಈ ಎಲ್ಲ ಗೊಂದಲಗಳ ಮಧ್ಯೆ ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಪ್ರಸಾದ್, 2019ರ ಏಕದಿನ ವಿಶ್ವಕಪ್‌ವರೆಗೆ ಧೋನಿಯೇ ಭಾರತ ತಂಡದ ವಿಕೆಟ್‌ಕೀಪರ್ ಆಗಿರುತ್ತಾರೆಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಇನ್ನೂ ಎರಡು ವರ್ಷ ಕಾಯುವುದು ಅನಿವಾರ್ಯವಾಗಿದೆ.
ಧೋನಿ ಬದಲಾಗಿ ಕೆಲ ಯುವ ವಿಕೆಟ್ ಕೀಪರ್‌ಗಳನ್ನು ಪರಿಶೀಲಿಸಿ ನೋಡಿದೆವು. ಆದರೆ ಅವರ ಸನಿಹವೂ ಉಳಿದವರು ಬರಲಿಲ್ಲ. ಧೋನಿ ಕೇಒವ ಭಾರತ ಮಾತ್ರವಲ್ಲ ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್. ಇತ್ತೀಚೆಗೆ ಅವರು ಮಾಡಿದ ಸ್ಟಂಪ್‌ಗ್ಳು, ರನೌಟ್‌ಗಳು ಅದನ್ನು ಸಾಬೀತು ಮಾಡಿವೆ ಎಂದು ಧೋನಿಯನ್ನು ಪ್ರಸಾದ್ ಕೊಂಡಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.