ಧೋನಿ ವಿಂಡೀಸ್ ಪ್ರವಾಸಕ್ಕಿಲ್ಲ 2 ತಿಂಗಳು ಬ್ರೇಕ್
ಸದ್ಯ ನಿವೃತ್ತಿಯಾಗುವ ಯಾವುದೇ ಯೋಜನೆ ಇಲ್ಲ ; ಪ್ಯಾರಾ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವ ಬಯಕೆ
Team Udayavani, Jul 21, 2019, 5:20 AM IST
ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಸಂಬಂಧಿಸಿದಂತೆ ಒಂದು ಹಂತದ ಕುತೂಹಲಕ್ಕೆ ಶನಿವಾರ ತೆರೆ ಬಿದ್ದಿದೆ. ಅವರು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿಯಲು ನಿರ್ಧರಿಸಿದ್ದು, ಎರಡು ತಿಂಗಳ ಕಾಲ ‘ಕ್ರಿಕೆಟ್ ಬ್ರೇಕ್’ ಪಡೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ರವಿವಾರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತ ತಂಡದ ಆಯ್ಕೆ ನಡೆಯಲಿದ್ದು, ಧೋನಿ ನಿರ್ಧಾರದಿಂದ ಆಯ್ಕೆ ಸಮಿತಿ ಮೇಲಿನ ಒತ್ತಡ ಬಹಳಷ್ಟು ಕಡಿಮೆ ಆಗಲಿದೆ.
ಕಳೆದ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದ ಬಳಿಕ ಧೋನಿ ನಿವೃತ್ತಿ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿತ್ತು. ಮಾಜಿಗಳೆಲ್ಲ ನಾನಾ ರೀತಿಯ ಹೇಳಿಕೆ ನೀಡುತ್ತಿದ್ದರು. ಆದರೆ ಧೋನಿ ಮಾತ್ರ ಮೌನ ಮುರಿಯಲಿಲ್ಲ. ತಮ್ಮ ‘ಬ್ರೇಕ್ ನಿರ್ಧಾರ’ವನ್ನು ಕೂಡ ಸ್ವತಃ ಧೋನಿ ಪ್ರಕಟಿಸಲಿಲ್ಲ ಎಂಬುದು ಗಮನಾರ್ಹ.
ಬಿಸಿಸಿಐ ಅಧಿಕಾರಿಯ ಹೇಳಿಕೆ
‘ನಾವಿಲ್ಲಿ ಮೂರು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಲಿಕ್ಕಿದೆ. ಸದ್ಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ನಿವೃತ್ತಿ ಆಗುತ್ತಿಲ್ಲ. ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಬರುವುದಿಲ್ಲ. ಪೂರ್ವ ನಿರ್ಧಾರಿತ ಯೋಜನೆಯಂತೆ ಎರಡು ತಿಂಗಳ ಕಾಲ ಪ್ಯಾರಾ ಮಿಲಿಟರಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲಿದ್ದಾರೆ. ನಾವು ಧೋನಿ ನಿರ್ಧಾರವನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಸೂಚಿಸಲಿದ್ದೇವೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಧೋನಿ ಪ್ರಾದೇಶಿಕ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‌ನ ಗೌರವ ಲೆಫ್ಟಿನಂಟ್ ಕರ್ನಲ್ ಆಗಿದ್ದಾರೆ.
ಟಿ20 ವಿಶ್ವಕಪ್ ಆಡುವರೇ?
ಹಾಗಾದರೆ ಧೋನಿ ಮುಂದಿನ ವರ್ಷದ ಟಿ20 ವಿಶ್ವಕಪ್ ತನಕ ಆಡುವರೇ, ಹೌದಾದರೆ ಈ ಅವಧಿಯಲ್ಲಿ ನಡೆಯುವ 15-18ರಷ್ಟು ಟಿ20 ಪಂದ್ಯಗಳಲ್ಲಿ ಧೋನಿಗೆ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಅವಕಾಶ ಲಭಿಸುವುದೇ ಎಂಬುದೆಲ್ಲ ಮುಂದಿನ ಕುತೂಹಲ. ಈ ಆಯ್ಕೆ ಸಮಿತಿಯ ಅವಧಿ ಅಕ್ಟೋಬರ್‌ಗೆ ಕೊನೆಗೊಳ್ಳಲಿದೆ. ಧೋನಿ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಎಲ್ಲ 3 ಮಾದರಿಗಳಿಗೂ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವುದು ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?