ಧೋನಿ ಮೊದಲು ಪ್ರೀತಿಸಿದ್ದು ಸಾಕ್ಷಿಯನ್ನಲ್ಲ, ಸ್ವಾತಿಯನ್ನು!
Team Udayavani, May 10, 2018, 7:05 AM IST
ಚೆನ್ನೈ: ಟೀಮ್ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಪ್ತಾನ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಪ್ರೀತಿಸಿದ್ದು ಯಾರನ್ನು ಗೊತ್ತೇ? ಈ ರಹಸ್ಯ ಕಾರ್ಯಕ್ರಮವೊಂದರಲ್ಲಿ ಬಯಲಾಗಿದೆ. ಸ್ವಲ್ಪ ನಾಚಿಕೊಂಡೇ ಮಾತನಾಡಿದ ಧೋನಿ, ಅರೆಮನಸ್ಸಿನಿಂದ ತಾನು ಮೊದಲು ಪ್ರೀತಿಸಿದ ಹುಡುಗಿ ಹೆಸರನ್ನು ಬಾಯ್ಬಿಟ್ಟರು. ಆ ಹುಡುಗಿ ಹೆಸರು ಸ್ವಾತಿ. ಅವರು ಆಕೆಯನ್ನು ಕಡೆಯ ಬಾರಿಗೆ ನೋಡಿದ್ದು ದ್ವಿತೀಯ ಪಿಯುಸಿಯಲ್ಲಿದ್ದಾಗ!
“ಧೋನಿ: ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿ ಧೋನಿಯ ಮೊದಲ ಪ್ರೀತಿ ಶುರುವಾಗಿದ್ದು ವಿಮಾನದಲ್ಲಿ, ಆಗ ಪಕ್ಕದಲ್ಲಿ ಕೂತಿದ್ದ ಯುವತಿಯೇ ಅವರನ್ನು ಬಹುವಾಗಿ ಸೆಳೆದಿದ್ದರು ಎಂದು ವರ್ಣಿಸಲಾಗಿತ್ತು. ಆದರೆ ಈ ಪ್ರೀತಿ ಬೆಳೆಯಲಿಲ್ಲ. ಅನಂತರ ಧೋನಿ ತಮ್ಮ ಬಾಲ್ಯ ಗೆಳತಿ ಸಾಕ್ಷಿಯನ್ನು ವಿವಾಹವಾದರು. ಆದರೆ ಧೋನಿ ಹೊಸತಾಗಿ ಬಾಯ್ಬಿಟ್ಟಿರುವ ಸ್ವಾತಿ ಎಂಬ ಹುಡುಗಿ ಇವರಿಬ್ಬರಿಗೂ ಮುನ್ನವೇ ಪರಿಚಯವಿದ್ದಾಕೆ!
ಧೋನಿಯಿಂದ ಈ ಸತ್ಯವನ್ನು ಹೊರಡಿಸುತ್ತಿದ್ದ ಕಾರ್ಯಕ್ರಮ ನಿರೂಪಕ ಅದೇ ಕ್ಷಣದಲ್ಲಿ ಒಂದು ಬಾಂಬ್ ಸಿಡಿಸಿದರು. ಸ್ವಾತಿ ಹೆಸರಿನ ಆ ಹುಡುಗಿ, ಕಾರ್ಯಕ್ರಮದಲ್ಲಿ ಹಾಜರಿದ್ದಾರೆ ಈಗ ಆಕೆ ವೇದಿಕೆ ಬರುತ್ತಿದ್ದಾರೆ ಎಂದು ಸುಳ್ಳು ಸುಳ್ಳೇ ಪ್ರಕಟಿಸಿದರು.ಆದರೆ ಆಕೆ ವೇದಿಕೆಗೆ ಬರಲಿಲ್ಲ, ಧೋನಿ ನಿಟ್ಟುಸಿರುಬಿಟ್ಟರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.