ಡಿಗೋ ಮ್ಯಾರಡೋನಾಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು
Team Udayavani, Jan 6, 2019, 12:50 AM IST
ಬ್ರುನೋಸ್ ಐರಿಸ್: ಫುಟ್ಬಾಲ್ ಲೋಕದ ದಂತಕತೆ ಡಿಗೋ ಮ್ಯಾರಡೋನಾ ಅವರು ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ.
ಪ್ರಾಥಮಿಕ ಪರೀಕ್ಷೆಗಳಿಂದ ಅವರ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಆಗಿರುವುದು ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹಲವಾರು ಬಾರಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮರಡೋನಾ ಅವರಿಗೆ ಇದು ಹೊಸ ಸಮಸ್ಯೆ ಎಂದು ಸ್ಥಳೀಯ ಕ್ರೀಡಾ ಪತ್ರಿಕೆ ಓಲೇ ತಿಳಿಸಿದೆ. ಆದರೆ, ಅನಾರೋಗ್ಯದ ಮಟ್ಟ ಎಷ್ಟಿದೆ ಎಂಬುದನ್ನು ವೈದ್ಯರು ಬಹಿರಂಗಗೊಳಿಸಿಲ್ಲ ಎಂದು ಪತ್ರಿಕೆ ಹೇಳಿದೆ.
ಮೆಕ್ಸಿಕೋದಲ್ಲಿ ಡಿವಿಷನ್ ಫುಟ್ಬಾಲ್ ತಂಡವಾದ ಡೊರಾಡೊಸ್ ಡಿ ಸಿನಲೊವಾಕ್ಕೆ ತರಬೇತುದಾರರಾಗಿರುವ ಅವರು, ಈ ಹುದ್ದೆಗಾಗಿ ಮೆಕ್ಸಿಕೋಕ್ಕೆ ಆಗಮಿಸುವ ಮೊದಲೇ ಅವರಿಗೆ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಂಡಿತ್ತು.
ಆದರೆ, ಚಿಕಿತ್ಸೆ ಪಡೆದು ತರಬೇತಿಗಾಗಿ ಆಗಮಿಸಿದ್ದ ಅವರು, ಇತ್ತೀಚೆಗೆ ಆಗಾಗ ಅದೇ ಸಮಸ್ಯೆಗೆ ತುತ್ತಾಗಿದ್ದರು ಎಂದು ಕೆಲ ಮಾಧ್ಯಮಗಳು ಹೇಳಿವೆ. ಆದರೆ, ಈ ಬಗ್ಗೆ ಮರಡೋನಾ ಅವರ ಕುಟುಂಬದ ಮೂಲಗಳಾಗಲೀ, ವೈದ್ಯರಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.