ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನಲ್ಲಿ ICA ಪ್ರತಿನಿಧಿಯಾಗಿ ವೆಂಗ್‌ಸರ್ಕರ್, ಶುಭಾಂಗಿ ಕುಲಕರ್ಣಿ
Team Udayavani, Oct 30, 2022, 11:10 AM IST
ಮುಂಬೈ: ಭಾರತದ ಮಾಜಿ ನಾಯಕರಾದ ದಿಲೀಪ್ ವೆಂಗ್‌ಸರ್ಕರ್ ಮತ್ತು ಶುಭಾಂಗಿ ಕುಲಕರ್ಣಿ ಅವರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನಲ್ಲಿ ಭಾರತೀಯ ಕ್ರಿಕೆಟಿಗರ ಸಂಘವನ್ನು (ಐಸಿಎ) ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಕುಲಕರ್ಣಿ ಅವರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನಲ್ಲಿ ಮಹಿಳಾ ಐಸಿಎ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಆದರೆ ವೆಂಗ್‌ಸರ್ಕರ್ ನಿರ್ಗಮಿಸುವ ಐಸಿಎ ಅಧ್ಯಕ್ಷ ಮತ್ತು ಮಾಜಿ ಭಾರತ ಕ್ರಿಕೆಟಿಗ ಅಶೋಕ್ ಮಲ್ಹೋತ್ರಾ ಅವರನ್ನು ಸೋಲಿಸಿದರು. ಮೂರು ದಿನಗಳ ಕಾಲ ನಡೆದ ಇ-ವೋಟಿಂಗ್‌ನಲ್ಲಿ ಮಲ್ಹೋತ್ರಾ ಅವರು 230 ಮತಗಳನ್ನು ಪಡೆದರೆ, ವೆಂಗ್‌ಸರ್ಕರ್ ಅವರು 402 ಮತಗಳನ್ನು ಪಡೆದರು.
ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಅಕ್ಟೋಬರ್ 2019 ರಿಂದ ಅಕ್ಟೋಬರ್ 2022 ರವರೆಗೆ ಬಿಸಿಸಿಐ ಯಲ್ಲಿ ಮೊದಲ ಐಸಿಎ ಪ್ರತಿನಿಧಿಗಳಾಗಿದ್ದರು.
ಇದನ್ನೂ ಓದಿ:ಯುಕೆ ಮಾಜಿ ಪ್ರಧಾನಿ ಲಿಜ್ ಟ್ರಸ್ ಫೋನ್ ಹ್ಯಾಕ್ ಮಾಡಿದ ವ್ಲಾಡಿಮಿರ್ ಪುಟಿನ್ ಏಜೆಂಟ್‌ಗಳು!
ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಐಪಿಎಲ್ ಆಡಳಿತ ಮಂಡಳಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ವಿಜಯ್ ಮೋಹನ್ ರಾಜ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು.
66 ವರ್ಷದ ವೆಂಗ್‌ಸರ್ಕರ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿ ಮತ್ತು ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.