39th birthday; ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ದಿನೇಶ್ ಕಾರ್ತಿಕ್
Team Udayavani, Jun 1, 2024, 10:49 PM IST
ಚೆನ್ನೈ: ಐಪಿಎಲ್ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಸೋಲುತ್ತಲೇ, ತಂಡದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದರು. ಇದೀಗ ಎಲ್ಲ ಮಾದರಿಗಳ ಕ್ರಿಕೆಟಿಗೂ ಗುಡ್‌ಬೈ ಹೇಳಿದ್ದಾರೆ. ಇದರೊಂದಿಗೆ ಅವರ ಎರಡು ದಶಕಗಳ ಕ್ರಿಕೆಟ್ ಜೀವನಕ್ಕೆ ತೆರೆ ಬಿದ್ದಿದೆ. ತನ್ನ ಈ ನಿರ್ಧಾರಕ್ಕೆ ದೈಹಿಕ ಸಮಸ್ಯೆ ಕಾರಣವಲ್ಲ, ಮಾನಸಿಕ ವಿಚಾರ ಕಾರಣ ಎಂದು ಕಾರ್ತಿಕ್ ಹೇಳಿದರು.
“ನಾನು ಇನ್ನೊಂದು ಋತುವನ್ನು ತಳ್ಳಿಬಿಡಬಹುದಿತ್ತು. ನನ್ನ ಬದುಕಿನಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಇಲ್ಲ. ನನ್ನ ದೇಹ ಮತ್ತು ಫಿಟ್‌ನೆಸ್ ಬಗ್ಗೆ ನಾನೆಂದೂ ಚಿಂತೆ ಮಾಡಿಲ್ಲ. ಆದರೆ ಇವೆಲ್ಲ ಮಾನಸಿಕ ಸಂಗತಿಗೆ ಸಂಬಂಧಿಸಿದ ವಿಚಾರವಾಗಿದೆ’ ಎಂದಿದ್ದಾರೆ.
“ಇನ್ನೂ ದೀರ್ಘ ಕಾಲ ನಾನು ಆಡಲು ಯತ್ನಿಸಿಸಬಹುದಿತ್ತು. ಆದರೆ ಕೆಲವು ಪಂದ್ಯಗಳಲ್ಲಿ ನಾನು ಎಡವಿದರೂ ಸಾಕು ನನ್ನಿಂದ ಅದನ್ನು ಮಾನಸಿಕವಾಗಿ ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಆ ಬಳಿಕ ನಾನು ತಪ್ಪಿತಸ್ಥ ಭಾವನೆಯೊಂದಿಗೆ ಬದುಕ ಬೇಕಾಗುತ್ತದೆ. ಇದೇ ಕಾರಣಕ್ಕೆ ತಾನು ನಿವೃತ್ತಿ ನಿರ್ಧಾರ ತಾಳಿದ್ದೇನೆ’ ಎಂಬುದಾಗಿ ಕಾರ್ತಿಕ್ ಹೇಳಿದ್ದಾರೆ.
It’s official 💖
Thanks
DK 🙏🏽 pic.twitter.com/NGVnxAJMQ3— DK (@DineshKarthik) June 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.