ಸೋಲಿನಿಂದ ನಿರಾಶೆಯಾಗಿದೆ: ಲಿಯಮ್ ಪ್ಲಂಕೆಟ್
Team Udayavani, Apr 25, 2018, 6:00 AM IST
ಹೊಸದಿಲ್ಲಿ: ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ವೈಫಲ್ಯ ಮುಂದುವರಿದಿದೆ. ಹೊಸ ನಾಯಕ ಬಂದರೂ ತಂಡದಲ್ಲಿ ಹಲವು ಬದಲಾವಣೆ ಮಾಡಿದರೂ ಡೆಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಿಲ್ಲ. ಸೋಮವಾರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಉತ್ತಮ ನಿರ್ವಹಣೆ ನೀಡಿದ್ದರೂ ಡೆಲ್ಲಿ ನಾಲ್ಕು ರನ್ನಿನಿಂದ ಸೋತು ಆಘಾತ ಅನುಭವಿಸಿದೆ.
ಲಿಯಮ್ ಪ್ಲಂಕೆಟ್ ಸಹಿತ ಬೌಲರ್‌ಗಳ ಬಿಗು ದಾಳಿಯಿಂದಾಗಿ ಡೆಲ್ಲಿ ತಂಡ ಪಂಜಾಬ್ ಮೊತ್ತವನ್ನು 143 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾಗಿತ್ತು. ಆ ಬಳಿಕ ಶ್ರೇಯಸ್ ಅಯ್ಯರ್ ಗೆಲುವಿಗಾಗಿ ಕೊನೆ ಎಸೆತದವರೆಗೂ ಹೋರಾಡಿದರೂ ತಂಡ 4 ರನ್ನಿನಿಂದ ಸೋಲು ಕಾಣುವಂತಾಯಿತು. .
ಪಂದ್ಯ ನಮ್ಮ ಕೈಯಲ್ಲಿತ್ತು
ನಿಕಟ ಪಂದ್ಯದಲ್ಲಿ ಸೋಲು ಕಾಣುವುದು ನಿಜಕ್ಕೂ ನಿರಾಶೆಯ ನ್ನುಂಟು ಮಾಡಿದೆ. ಈ ಪಂದ್ಯವನ್ನು ನಾವು ಗೆಲ್ಲಬೇಕಿತ್ತು. ಆದರೆ ಕ್ರಿಕೆಟ್ ಆಟವೇ ಹೀಗೆ. 39 ಓವರ್ ತನಕ ನಾವು ಚೆನ್ನಾಗಿ ಆಡಿದ್ದೇವೆ ಮತ್ತು ಪಂದ್ಯ ನಮ್ಮ ಕೈಯಲ್ಲಿತ್ತು. ಆದರೆ ಪಂದ್ಯವನ್ನು ನಾವು ಹೇಗೆ ಕೊನೆಗೊಳಿಸುತ್ತೀರಿ ಎಂಬುದೇ ಮುಖ್ಯ. ನಮಗೆ ಈ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಲಿಯಮ್ ಪ್ಲಂಕೆಟ್ ಹೇಳಿದ್ದಾರೆ. ಅವರು ಪದಾರ್ಪಣೆಗೈದ ಪಂದ್ಯದಲ್ಲಿಯೇ 3 ವಿಕೆಟ್ ಪಡೆದಿದ್ದರು.
ಪಂದ್ಯದ ಆರಂಭದಿಂದಲೇ ಇಲ್ಲಿನ ಪಿಚ್ ಬೌಲರ್‌ಗಳಿಗೆ ನೆರವಾಗುತ್ತದೆ ಎಂಬುದು ತಿಳಿದಿದ್ದೆವು. ಹಾಗಾಗಿ ಉತ್ತಮ ದಾಳಿ ಸಂಘಟಿಸಿದ್ದೆವು. ಇದೇ ಪಿಚ್ ನಲ್ಲಿ ನಾನು 2016ರ ಟ್ವೆಂಟಿ20 ವಿಶ್ವಕಪ್‌ನ ಪಂದ್ಯವೊಂದನ್ನು ಆಡಿದ್ದೆ. ಈ ತಾಣದಲ್ಲಿ ಇಂಗ್ಲೆಂಡ್ ಪರ ಮೂರು ಪಂದ್ಯವನ್ನಾಡಿದ್ದೇನೆ. ಈ ಪಂದ್ಯಗಳ ಅನುಭವ ನನಗೆ ನೆರವಾಗಿದೆ. ಈ ಕೂಟದಲ್ಲಿ ಇನ್ನೂ ಹಲವು ಪಂದ್ಯಗಳನ್ನು ಆಡಲಿಕ್ಕಿದೆ. ಒಳ್ಳೆಯ ಒಂದು ಗೆಲುವು ನಮಗೆ ಅಗತ್ಯವಿದೆ. ಆ ಗೆಲುವಿನ ಆತ್ಮವಿಶ್ವಾಸದೊಂದಿಗೆ ಒಳ್ಳೆಯ ಫಲಿತಾಂಶವನ್ನು ಮುಂದುವರಿಸಲು ನೆರವಾಗುತ್ತದೆ.
ಲಿಯಮ್ ಪ್ಲಂಕೆಟ್
ಎಕ್ಸ್‌ಟ್ರಾ ಇನ್ನಿಂಗ್ಸ್ : ಡೆಲ್ಲಿ ಡೇರ್‌ಡೆವಿಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್
ಐಪಿಎಲ್‌ನಲ್ಲಿ ಇದು ಅವೇಶ್ ಖಾನ್ ಅವರ ಎರಡನೇ ಪಂದ್ಯವಾಗಿದ್ದು ಡೆಲ್ಲಿ ಪರ ಮೊದಲನೆಯದು. ಕಳೆದ ಋತುವಿನಲ್ಲಿ ಅವರು ಆರ್‌ಸಿಬಿ ಪರ ಐಪಿಎಲ್‌ಗೆ ಪಾದಾರ್ಪಣೆಗೈದಿದ್ದರು.
ಡೆಲ್ಲಿ ಪರ ಆಡಿದ ಮೊದಲ ಪಂದ್ಯದಲ್ಲಿಯೇ ಲಿಯಮ್ ಪ್ಲಂಕೆಟ್ 17 ರನ್ನಿಗೆ 3 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಈ ಹಿಂದೆ 2012ರಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿಯ ಬ್ರೇಸ್‌ವೆಲ್ 32 ರನ್ನಿಗೆ 3 ವಿಕೆಟ್ ಕಿತ್ತಿದ್ದರು. ಬ್ರೇಸ್‌ವೆಲ್ ಮತ್ತು ಪ್ಲಂಕೆಟ್ ಮಾತ್ರ ಡೆಲ್ಲಿ ಪರ ಪದಾರ್ಪಣೆಗೈದ ಪಂದ್ಯದಲ್ಲಿಯೇ ಮೂರು ವಿಕೆಟ್ ಕಿತ್ತ ಸಾಧಕರಾಗಿದ್ದಾರೆ.
ಈ ಗೆಲುವಿನ ಮೂಲಕ ಪಂಜಾಬ್ ತಂಡ ಸತತ ಗೆಲುವಿನ ದಾಖಲೆಯನ್ನು ನಾಲ್ಕು ಪಂದ್ಯಕ್ಕೆ ವಿಸ್ತರಿಸಿದೆ. ಕಳೆದ ನಾಲ್ಕು ಐಪಿಎಲ್‌ನಲ್ಲಿ ಇದು ಪಂಜಾಬ್ ತಂಡದ ಶ್ರೇಷ್ಠ ನಿರ್ವಹಣೆಯಾಗಿದೆ. 2014ರ ಋತುವಿನಲ್ಲಿ ಸತತ ಐದು ಪಂದ್ಯ ಗೆದ್ದ ಬಳಿಕ ಪಂಜಾಬ್ ಇಷ್ಟರವರೆಗಿನ ಐಪಿಎಲ್‌ನಲ್ಲಿ ಸತತ 3 ಪಂದ್ಯಗಳಲ್ಲಿ ಗೆದ್ದ ಸಾಧನೆ ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.