ಕ್ರೀಡಾ ಸಾಧಕರಿಗೆ ಏಕಲವ್ಯ,ಕ್ರೀಡಾ ರತ್ನ ಪ್ರಶಸ್ತಿ ವಿತರಣೆ
Team Udayavani, Mar 8, 2018, 6:15 AM IST
ಬೆಂಗಳೂರು: 2016ನೇ ಸಾಲಿನ ಕ್ರೀಡಾರತ್ನ, ಏಕಲವ್ಯ, ಕ್ರೀಡಾಪೋಷಕ ಪ್ರಶಸ್ತಿಗಳನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮದ್ವರಾಜ್ ವಿತರಿಸಿದರು. ಅಲ್ಲದೇ 93 ಮಂದಿಗೆ ಪ್ರತಿಭಾ ವೇತನ ನೀಡಿದರು. ಇದೇ ವೇಳೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದವರಿಗೂ ಪ್ರಶಸ್ತಿ ಫಲಕ ನೀಡಿದರು.
ಖ್ಯಾತ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಕುಸ್ತಿ ಪಟು ಸಂದೀಪ್ ಕಾಟೆ, ಪ್ಯಾರಾ ಈಜುಪಟು ಎಂ.ರೇವತಿ ನಾಯಕ ಅವರೂ ಸೇರಿ ಒಟ್ಟು 13 ಮಂದಿ ಏಕಲವ್ಯ ನೀಡಿ ಗೌರವಿಸಲಾಯಿತು. ಮೂಡಬಿದರೆಯ ಆಳ್ವಾಸ್ ಕುಸ್ತಿ ಪಟು ಎಚ್.ಎಸ್.ಆತ್ಮಶ್ರೀ, ಕಂಬಳ ಕ್ರೀಡೆಯ ಯುವರಾಜ್ ಜೈನ್, ಗುಂಡು ಎತ್ತುವ ಸ್ಪರ್ಧಿ ಶೇಖರ್ ವಾಲಿ ಒಟ್ಟು 9 ಮಂದಿಗೆ ಕ್ರೀಡಾರತ್ನ ಪ್ರಶಸ್ತಿ ನೀಡಲಾಯಿತು. ಈಜುಪಟು ಮನೋಹರ್ ಆರ್. ಮೋಹಿತೆ ಮತ್ತು ಅಥ್ಲೀಟ್ ವಿ.ಆರ್.ಬೀಡುಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಉಪಾಧ್ಯಕ್ಷ ಕೆ.ಗೋವಿಂದರಾಜ್, ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್ವಾಲ್ ಹಾಜರಿದ್ದರು.
ಮುಖ್ಯಮಂತ್ರಿ ಗೈರು: ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದರು. ಮಹತ್ವದ ಸಂಪುಟ ಸಭೆ ಇದ್ದಿದ್ದರಿಂದ ಗೈರಾಗಿದ್ದಾರೆಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
ಒಲಿಂಪಿಕ್ಸ್ ವಿಜೇತರಿಗೆ ಕೋಟಿ ಕೋಟಿ ನಗದು
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ ಸ್ಪರ್ಧಿಗಳಿಗೆ ಕೋಟಿ, ಕೋಟಿ ರೂ.ಗಳನ್ನು ನೀಡುವುದಾಗಿ ರಾಜ್ಯಸರ್ಕಾರ ಈ ಹಿಂದೆಯೇ ಘೋಷಿಸಿತ್ತು. ಅದನ್ನು ಕ್ರೀಡಾಸಚಿವ ಪ್ರಮೋದ್ ಮಧ್ವರಾಜ್ ಮತ್ತೂಮ್ಮೆ ಪುನರುಚ್ಛಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5, ಬೆಳ್ಳಿ ಗೆದ್ದವರಿಗೆ 3, ಕಂಚು ಗೆದ್ದವರಿಗೆ 2 ಕೋಟಿ ರೂ.ಗಳನ್ನು ನೀಡಲಾಗುವುದೆಂದು ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ.
ಒಲಿಂಪಿಕ್ಸ್ ವಿಜೇತರಿಗೆ ಎ ದರ್ಜೆ ಹುದ್ದೆ
ರಾಜ್ಯಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ ಯಾವುದೇ ಕ್ರೀಡಾಪಟುಗಳಿಗೆ ಎ ದರ್ಜೆ ಹುದ್ದೆಗಳನ್ನು ನೀಡಲಿದೆ. ಹಾಗೆಯೇ ಕಾಮನ್‌ವೆಲ್ತ್, ಏಷ್ಯಾಡ್‌ನಲ್ಲಿ ಪದಕ ಗೆದ್ದವರಿಗೆ ನೇರವಾಗಿ ಬಿ ದರ್ಜೆ ಹುದ್ದೆಗಳನ್ನು ರಾಜ್ಯ ಸರ್ಕಾರ ನೀಡಲಿದೆ.
93 ಮಂದಿಗೆ 2 ಕೋಟಿ ರೂ. ಪ್ರತಿಭಾವೇತನ
ಈ ಬಾರಿ ಬರೀ ಪ್ರತಿಭಾ ವೇತನವಾಗಿ 2 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡಿದೆ. ಕ್ರೀಡಾರತ್ನ, ಏಕಲವ್ಯ, ಕ್ರೀಡಾಪೋಷಕ ಪ್ರಶಸ್ತಿಗಳನ್ನಲ್ಲದೆ ಹೆಚ್ಚುವರಿ 93 ಮಂದಿಗೆ 2 ಕೋಟಿ ರೂ. ನೀಡಿದೆ. ಭರವಸೆಯ ಕ್ರೀಡಾಪಟುಗಳಿಗೆ ಈ ವೇತನ ನೀಡಿ ಪ್ರೋತ್ಸಾಹಿಸಲಾಗಿದೆ.
ಒಟ್ಟು 2.88 ಕೋಟಿ ರೂ. ನಗದು ವಿತರಣೆ
ಬುಧವಾರದ ಪ್ರಶಸ್ತಿ ವಿತರಣೆ ವೇಳೆ ರಾಜ್ಯಸರ್ಕಾರ ಒಟ್ಟು 2.88 ಕೋಟಿ ರೂ. ನಗದನ್ನು ವಿತರಿಸಿದೆ. ಈ ಬಾರಿ ಹೊಸತಾಗಿ ಕ್ರೀಡಾಪೋಷಕ ಪ್ರಶಸ್ತಿ ಮೊತ್ತ ಆರಂಭ ಮಾಡಿದ್ದರಿಂದ ನಗದು ನೀಡಿಕೆಯಲ್ಲಿ ಹಣ ಏರಿಕೆ ಕಾಣಲು ಸಾಧ್ಯವಾಯಿತು.
10 ಪೋಷಕ ಸಂಸ್ಥೆಗಳಿಗೆ ತಲಾ 5 ಲಕ್ಷ ರೂ. ನಗದು
ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ, ನಗದು ನೀಡುವುದು ಮಾಮೂಲಿ. ಆದರೆ ರಾಜ್ಯಸರ್ಕಾರ ಈ ಬಾರಿ ಇನ್ನೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಕ್ರೀಡೆಗೆ ಪೋಷಕ ಸ್ಥಾನದಲ್ಲಿ ನಿಂತು ಪ್ರತಿಭೆಗಳನ್ನು ಪೋಷಿಸುವ 10 ಸರ್ಕಾರೇತರ ಸಂಸ್ಥೆಗಳಿಗೆ ತಲಾ 5 ಲಕ್ಷ ರೂ. ನಗದಿನ ಜೊತೆಗೆ ಅತ್ಯುತ್ತಮ ಕ್ರೀಡಾಪೋಷಕ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪಟ್ಟಿ
2016ರ ಏಕಲವ್ಯ ಪ್ರಶಸ್ತಿ ಪುರಸ್ಕೃತರು
ಎಸ್.ಹರ್ಷಿತ್ (ಅಥ್ಲೆಟಿಕ್ಸ್), ರಾಜೇಶ್ ಪ್ರಕಾಶ್ ಉಪ್ಪಾರ್ (ಬಾಸ್ಕೆಟ್‌ಬಾಲ್), ಪೂರ್ವಿಶಾ ಎಸ್.ರಾಮ್ (ಬ್ಯಾಡ್ಮಿಂಟನ್), ರೇಣುಕಾ ದಂಡಿನ್ (ಸೈಕ್ಲಿಂಗ್), ಮಯೂರ್ ಡಿ.ಭಾನು (ಶೂಟಿಂಗ್), ಎ.ಕಾರ್ತಿಕ್ (ವಾಲಿಬಾಲ್), ಮಾಳವಿಕ ವಿಶ್ವನಾಥ್ (ಈಜು), ಟಿ.ಕೆ.ಕೀರ್ತನಾ (ರೋಯಿಂಗ್), ಎಂ.ಬಿ.ಅಯ್ಯಪ್ಪ (ಹಾಕಿ), ಸುಕೇಶ್ ಹೆಗ್ಡೆ (ಕಬಡ್ಡಿ), ಗುರುರಾಜ (ವೇಟ್‌ಲಿಫ್ಟರ್), ಸಂದೀಪ್ ಬಿ.ಕಾಟೆ (ಕುಸ್ತಿ), ಎಂ.ರೇವತಿ ನಾಯಕ (ಪ್ಯಾರಾ ಈಜು) ಆಯ್ಕೆಯಾಗಿದ್ದು, ತಲಾ 2 ಲಕ್ಷ ರೂ. ನಗದು ಬಹುಮಾನದೊಂದಿಗೆ ಸ್ಮರಣಿಕೆ, ಏಕಲವ್ಯ ಕಂಚಿನ ಪ್ರತಿಮೆ ಸ್ವೀಕರಿಸಲಿದ್ದಾರೆ.
2016ರ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರು
ಮನೋಹರ್ ಆರ್.ಮೋಹಿತೆ (ಈಜು), ವಿ.ಆರ್.ಬೀಡು (ಅಥ್ಲೆಟಿಕ್ಸ್ ಕೋಚ್) ತಲಾ 1.50 ಲಕ್ಷ ರೂ. ನಗದಿನೊಂದಿಗೆ ಸ್ಮರಣಿಕೆ, ಪ್ರಶಸ್ತಿ ಫಲಕ ಪಡೆಯಲಿದ್ದಾರೆ.
ಪ್ರಶಸ್ತಿ ವಿಜೇತರ ಸಂಖ್ಯೆ ತಲಾ ಮೊತ್ತ
ಏಕಲವ್ಯ 13 2 ಲಕ್ಷ ರೂ.
ಜೀವಮಾನ ಸಾಧನೆ 2 1.50 ಲಕ್ಷ ರೂ.
ಕ್ರೀಡಾರತ್ನ 9 1 ಲಕ್ಷ ರೂ.
ಪೋಷಕರತ್ನ 10 5 ಲಕ್ಷ ರೂ.
2016ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತರು
ಸೈಯದ್‌ಫತೇಶಾವಲಿ ಎಚ್.ಬೇಪರಿ (ಅಟ್ಯಾ ಪಟ್ಯಾ), ಕೆ.ಜಿ.ಯಶಸ್ವಿನಿ (ಬಾಲ್ ಬ್ಯಾಡ್ಮಿಂಟನ್), ಎಸ್.ಸಬಿಯಾ (ಥ್ರೋಬಾಲ್), ಸುಗುಣ ಸಾಗರ್ ಎಚ್.ವಡ್ತಾಳೆ (ಮಲ್ಲಕಂಬ), ಧನುಷ್ ಬಾಬು (ರೋಲರ್ ಸ್ಕೇಟಿಂಗ್), ಮುನೀರ್ ಬಾಷಾ ಎ(ಖೋ ಖೋ), ಎಚ್.ಎಸ್. ಆತ್ಮಶ್ರೀ (ಕುಸ್ತಿ), ಯುವರಾಜ್ ಜೈನ್ (ಕಂಬಳ), ಶೇಖರ್ ವಾಲಿ (ಗುಂಡು ಎತ್ತುವುದು). ಸಾಧಕರಿಗೆ ತಲಾ 1ಲಕ್ಷ ರೂ. ನಗದು ಬಹುಮಾನದೊಂದಿಗೆ ಸ್ಮರಣಿಕೆ, ಪ್ರಶಸ್ತಿ ಫಲಕ ಪಡೆಯಲಿದ್ದಾರೆ.
ಪೋಷಕ ರತ್ನ ಪ್ರಶಸ್ತಿ
ಬ್ರಹ್ಮಾವರ ನ್ಪೋರ್ಟ್ಸ್ ಕ್ಲಬ್ (ಉಡುಪಿ), ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ) ಮಿಯ್ನಾರ್ (ಉಡುಪಿ), ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ (ದಕ್ಷಿಣ ಕನ್ನಡ), ಜೈನ್ ವಿಶ್ವವಿದ್ಯಾನಿಲಯ (ಬೆಂಗಳೂರು), ಜೆಎಸ್‌ಡಬ್ಲೂé (ಬಳ್ಳಾರಿ), ಕ್ಯಾತನ ಹಳ್ಳಿ ಕ್ರೀಡಾ ಒಕ್ಕೂಟ (ರಿ) ಕ್ಯಾತನಹಳ್ಳಿ, ಪಾಂಡವಪುರ ತಾಲೂಕು (ಮಂಡ್ಯ), ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ದಿ ಸಹಕಾರ ನಿ.ಚಂದರಗಿ (ಬೆಳಗಾವಿ), ಕಂಠೀರವ ಕೇಸರಿ ರತನ್ ಮಠಪತಿ ನ್ಪೋರ್ಟ್ಸ್ ಅಂಡ್ ಎಜುಕೇಷನ್ ಸೊಸೈಟಿ, ಹುನ್ನೂರ, ಜಮಖಂಡಿ (ಬಾಗಲಕೋಟೆ), ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ಮಂಡ್ಯ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.