ಜೊಕೋವಿಕ್, ನಿಶಿಕೊರಿ ಗೆಲುವಿನ ಆಟ
Team Udayavani, Jan 20, 2019, 12:30 AM IST
ಮೆಲ್ಬರ್ನ್: ಅಗ್ರ ಶ್ರೇಯಾಮಕದ ನೊವಾಕ್ ಜೊಕೋವಿಕ್, ಅಪಾಯಕಾರಿ ಕೀ ನಿಶಿಕೊರಿ, ಯುವ ಟೆನಿಸಿಗ ಅಲೆಕ್ಸಾಂಡರ್ ಜ್ವೆರೇವ್, ಮಿಲೋಸ್ ರಾನಿಕ್ ಮೊದಲಾದವರೆಲ್ಲ ಪುರುಷರ ಸಿಂಗಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿ 4ನೇ ಸುತ್ತು ಪ್ರವೇಶಿಸಿದ್ದಾರೆ.
14 ಗ್ರ್ಯಾನ್‌ಸ್ಲಾಮ್ ವಿಜೇತ ಜೊಕೋವಿಕ್ ಕೆನಡಾದ ಯುವ ಆಟಗಾರ ಡೆನ್ನಿಸ್ ಶಪೊವೊಲೋವ್ ಅವರನ್ನು 4 ಸೆಟ್‌ಗಳ ಕಾದಾಟದ ಬಳಿಕ 6-3, 6-4, 4-6, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ಜೊಕೋ ಅವರ ಮುಂದಿನ ಎದುರಾಳಿ ರಶ್ಯದ 15ನೇ ಶ್ರೇಯಾಂಕಿತ ಆಟಗಾರ ಡ್ಯಾನಿಲ್ ಮೆಡ್ವೆಡೇವ್. ಅವರು ಬೆಲ್ಜಿಯಂನ ಡೇವಿಡ್ ಗೊಫಿನ್ ವಿರುದ್ಧ 6-2, 7-6 (3), 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಮೆಡ್ವೆಡೇವ್ ಗ್ರ್ಯಾನ್‌ಸ್ಲಾಮ್ 4ನೇ ಸುತ್ತು ಪ್ರವೇಶಿಸುತ್ತಿರುವುದು ಇದೇ ಮೊದಲು.
ನಿಶಿಕೊರಿ-ಬುಸ್ಟ ಮುಖಾಮುಖೀ
ಜಪಾನಿನ ಇನ್‌ಫಾರ್ಮ್ ಆಟಗಾರ ಕೀ ನಿಶಿಕೊರಿ ಪೋರ್ಚುಗಲ್‌ನ ಜೋ ಸೂಸ ಅವರನ್ನು 7-6 (8-6), 6-1, 6-2 ಅಂತರದಿಂದ ಪರಾಭವಗೊಳಿಸಿದರು. ಇವರಿನ್ನು ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ ಆಡಲಿಳಿಯಲಿದ್ದಾರೆ. ಬುಸ್ಟ ಇಟಲಿಯ ಫ್ಯಾಬಿಯೊ ಫೊಗಿನಿ ಅವರನ್ನು 6-2, 6-4, 2-6, 6-4 ಅಂತರದಿಂದ ಹಿಮ್ಮೆಟ್ಟಿಸಿದರು.
21ರ ಹರೆಯದ ಅಲೆಕ್ಸಾಂಡರ್ ಜ್ವೆರೇವ್ ಆಸ್ಟ್ರೇಲಿಯದ ವೈಲ್ಡ್‌ಕಾರ್ಡ್ ಪ್ರವೇಶಿಗ ಅಲೆಕ್ಸ್ ಬೋಲ್ಟ್ ಅವರಿಗೆ 6-3, 6-3, 6-2ರಿಂದ ಬಿಸಿ ಮುಟ್ಟಿಸಿದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಜ್ವೆರೇವ್ 4ನೇ ಸುತ್ತಿಗೆ ಏರಿದ್ದು ಇದೇ ಮೊದಲು. ಜ್ವೆರೇವ್ ಇನ್ನು ಕೆನಡಾದ ಮಿಲೋಸ್ ರಾನಿಕ್ ಸವಾಲನ್ನು ಎದುರಿಸಲಿದ್ದಾರೆ. ರಾನಿಕ್ ಫ್ರಾನ್ಸ್‌ನ ಪಿಯರೆ ರಾಬರ್ಟ್ ಹ್ಯೂಸ್ ಅವರನ್ನು 6-4, 6-4, 7-6 (8-6) ಅಂತರದಿಂದ ಮಣಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.