ನೊವಾಕ್ ಜೊಕೋವಿಕ್ಗೆ ಅಡಿಲೇಡ್ ಕಿರೀಟ
16 ವರ್ಷಗಳ ಬಳಿಕ ಜೊಕೋವಿಕ್ಗೆ ಒಲಿದ ಅಡಿಲೇಡ್ ಪ್ರಶಸ್ತಿ
Team Udayavani, Jan 8, 2023, 10:57 PM IST
ಅಡಿಲೇಡ್: ಗಾಯದ ಸಮಸ್ಯೆಯಿಂದ ಬಳಲಿದರೂ ನೊವಾಕ್ ಜೊಕೋವಿಕ್ “ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್’ ಪ್ರಶಸ್ತಿಯನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ರವಿವಾರ ಫೈನಲ್ನಲ್ಲಿ ಅವರು ಅಮೆರಿಕದ ಸೆಬಾಸ್ಟಿಯನ್ ಕೋರ್ಡ ವಿರುದ್ಧ 6-7 (8-10), 7-6 (7-3), 6-4 ಅಂತರದ ಗೆಲುವು ಸಾಧಿಸಿದರು.
ಡ್ಯಾನಿಲ್ ಮೆಡ್ವೆಡೇವ್ ಎದುರಿನ ಸೆಮಿಫೈನಲ್ ಬಳಿಕ ಜೊಕೋವಿಕ್ ತೀವ್ರ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ರವಿವಾರ ಫೈನಲ್ ವೇಳೆಯೂ ಇದು ಸಣ್ಣ ಮಟ್ಟದಲ್ಲಿ ಕಾಡಿತು. ಆದರೆ 3 ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್ನಲ್ಲಿ ಜೊಕೋ ದಿಟ್ಟ ಹೋರಾಟ ನಡೆಸಿದರು. ತಮ್ಮ ಟೆನಿಸ್ ಬಾಳ್ವೆಯ 92ನೇ ಸಿಂಗಲ್ಸ್ ಪ್ರಶಸ್ತಿಯನ್ನೆತ್ತಿದರು.
ಇದು 16 ವರ್ಷಗಳ ಬಳಿಕ ಜೊಕೋವಿಕ್ಗೆ ಒಲಿದ ಅಡಿಲೇಡ್ ಪ್ರಶಸ್ತಿಯಾಗಿದೆ. 2007ರಲ್ಲಿ, 19ರ ಹರೆಯದ ಜೊಕೋ ಮೊದಲ ಸಲ ಇಲ್ಲಿ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.