ಫೆಡರರ್ 100ನೇ ಪ್ರಶಸ್ತಿ ವಿಳಂಬ ಸೆಮಿಫೈನಲ್ ಗೆದ್ದ ಜೊಕೋವಿಕ್
Team Udayavani, Nov 5, 2018, 6:05 AM IST
ಪ್ಯಾರಿಸ್: ಸ್ವಿಸ್ ತಾರೆ ರೋಜರ್ ಫೆಡರರ್ ಅವರ 100ನೇ ಟೆನಿಸ್ ಪ್ರಶಸ್ತಿ ಸಂಭ್ರಮ ಮುಂದೂಡಲ್ಪಟ್ಟಿದೆ. ಶನಿವಾರ ರಾತ್ರಿ ನಡೆದ “ಪ್ಯಾರಿಸ್ ಮಾಸ್ಟರ್’ ಟೆನಿಸ್‌ನಲ್ಲಿ ನೊವಾಕ್ ಜೊಕೋವಿಕ್ ವಿರುದ್ಧದ ಸೆಮಿಫೈನಲ್‌ನಲ್ಲಿ ಫೆಡರರ್ ಸೋಲುವುದರೊಂದಿಗೆ ನಿರಾಸೆ ಅನುಭವಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ ಸೆಮಿ ಸಮರದಲ್ಲಿ ನೊವಾಕ್ ಜೊಕೋವಿಕ್ 7-6 (6), 5-7, 7-6 (3) ಅಂತರದಿಂದ ಗೆದ್ದು ನಿಟ್ಟಿಸಿರೆಳೆದರು. ಇದರೊಂದಿಗೆ ಜೊಕೋವಿಕ್ ಸತತ 22 ಪಂದ್ಯಗಳನ್ನು ಗೆದ್ದಂತಾಯಿತು. ಹಾಗೆಯೇ 5ನೇ ಪ್ಯಾರಿಸ್ ಮಾಸ್ಟರ್ ಟೆನಿಸ್ ಪ್ರಶಸ್ತಿಗೆ ಇನ್ನಷ್ಟು ಹತ್ತಿರವಾದರು. ಫೈನಲ್ ಕಾಳಗದಲ್ಲಿ ಅವರು ರಶ್ಯದ ಕರೆನ್ ಕಶನೋವ್ ಸವಾಲನ್ನು ಎದುರಿಸಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ಕಶನೋವ್ 6-4, 6-1 ಅಂತರದಿಂದ ಡೊಮಿನಿಕ್ ಥೀಮ್ ಅವರನ್ನು ಹಿಮ್ಮೆಟ್ಟಿಸಿದರು.
“ಇದು ಈ ವರ್ಷ ನಾನು ಆಡಿದ ಅತ್ಯಂತ ರೋಮಾಂಚಕಾರಿ ಹಾಗೂ ತೀವ್ರ ಪೈಪೋಟಿಯ ಪಂದ್ಯಗಳಲ್ಲೊಂದು. ಈ ವರ್ಷದ ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ರಫೆಲ್ ನಡಾಲ್ ವಿರುದ್ಧದ ಮುಖಾಮುಖೀ ಕೂಡ ಇಷ್ಟೇ ಪೈಪೋಟಿಯಿಂದ ಕೂಡಿತ್ತು’ ಎಂಬುದಾಗಿ ಜೊಕೋವಿಕ್ ಹೇಳಿದರು.ಇದರೊಂದಿಗೆ 12 ವರ್ಷಗಳ ಟೆನಿಸ್ ಬಾಳ್ವೆಯಲ್ಲಿ ಫೆಡರರ್ ವಿರುದ್ಧ ಜೊಕೋವಿಕ್ ಮೊದಲ ಸಲ ಸತತ 4 ಪಂದ್ಯಗಳನ್ನು ಗೆದ್ದಂತಾಯಿತು. ಹಾಗೆಯೇ ಫೆಡರರ್ ಎದುರಿನ ಗೆಲುವಿನ ಸಂಖ್ಯೆಯನ್ನು 25ಕ್ಕೆ ಏರಿಸಿಕೊಂಡರು.
ಕಶನೋವ್‌ಗೆ ಸುಲಭ ಜಯ
ಮೊದಲ ಸೆಮಿಫೈನಲ್‌ನಲ್ಲಿ ರಶ್ಯದ 6 ಅಡಿ, 6 ಇಂಚೆತ್ತರದ, 22ರ ಹರೆಯದ ಲಂಬೂ ಟೆನಿಸಿಗ ಎದುರಾಳಿ ಡೊಮಿನಿಕ್ ಥೀಮ್‌ಗೆ “ಡಾಮಿನೇಟ್’ ನಡೆಸಲು ಎಲ್ಲೂ ಅವಕಾಶ ಕೊಡಲಿಲ್ಲ. ಈ ಪಂದ್ಯ ಏಕಪಕ್ಷೀಯವಾಗಿಯೇ ಸಾಗಿತು.
“ಇದು ನಾನಾಡಿದ ಅತ್ಯುತ್ತಮ ಪಂದ್ಯಗಳಲ್ಲೊಂದು. ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ನಾನೀಗ ಯಶಸ್ವಿಯಾಗುತ್ತಿರುವುದು ಸಂತೋಷದ ಸಂಗತಿ’ ಎಂಬುದಾಗಿ ಮೊದಲ ಬಾರಿಗೆ “ಮಾಸ್ಟರ್ 1000′ ಕೂಟದ ಫೈನಲ್ ಪ್ರವೇಶಿಸಿದ ಕಶನೋವ್ ಹೇಳಿದರು. ಕಶನೋವ್ ಈಗಾಗಲೇ ಈ ವರ್ಷ 2 ಇಂಡೋರ್ ಟೆನಿಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.