Boxing: ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಿಖತ್ ಜರೀನ್
Team Udayavani, Sep 30, 2023, 6:20 AM IST
ಹ್ಯಾಂಗ್‌ಝೂ: ಭಾರತದ ಬಾಕ್ಸಿಂಗ್ ತಾರೆ ನಿಖತ್ ಜರೀನ್ ಅವರಿಗೆ ಶುಕ್ರವಾರ ಅವಳಿ ಖುಷಿ. ಒಂದು, ಏಷ್ಯಾಡ್ ಬಾಕ್ಸಿಂಗ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದು, ಮತ್ತೂಂದು, ಈ ಸಾಧನೆ ಯಿಂದ ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದು. 27 ವರ್ಷದ ನಿಖತ್ ಜರೀನ್ 50 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜೋರ್ಡನ್‌ನ ನಾಸರ್ ಹನಾನ್ ಅವರೆದುರು ಆರ್‌ಎಸ್‌ಸಿ (ರೆಫ್ರಿ ಸ್ಟಪ್ಸ್ ಕಾಂಟೆಸ್ಟ್) ಗೆಲುವು ದಾಖಲಿಸಿದರು. ಈ ಕ್ವಾರ್ಟರ್ ಫೈನಲ್ ಸಾಧನೆಯಿಂದ ನಿಖತ್‌ಗೆ ಒಲಿಂಪಿಕ್ಸ್ ಟಿಕೆಟ್ ಕೂಡ ಲಭಿಸಿತು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರಿಗೆ ಪ್ರವೇಶ ಲಭಿಸಿರಲಿಲ್ಲ.
ಏಷ್ಯಾಡ್‌ನಲ್ಲಿ ವನಿತೆಯರ 50 ಕೆಜಿ, 54 ಕೆಜಿ, 57 ಕೆಜಿ, 60 ಕೆಜಿ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದವರಿಗೆ; 66 ಕೆಜಿ ಹಾಗೂ 75 ಕೆಜಿ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದವರಿಗೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಲಭಿಸುತ್ತದೆ. ಹಾಗೆಯೇ ಏಷ್ಯಾಡ್‌ನ ಏಳೂ ತೂಕ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಪುರುಷರಿಗೂ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ.
ಟಿಟಿ: ಕ್ವಾರ್ಟರ್ ಫೈನಲ್‌ಗೆ ಮಣಿಕಾ
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಮಣಿಕಾ ಬಾತ್ರಾ ಏಷ್ಯಾಡ್ ಪದಕ ರೇಸ್‌ನಲ್ಲಿ ಮುಂದುವರಿದಿದ್ದಾರೆ. ಅವರು ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ತೀರಾ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಮಣಿಕಾ ಬಾತ್ರಾ ಥಾಯ್ಲೆಂಡ್‌ನ ಸುರಾಸಿನಿ ಸವೆತ್ತಬುತ್ ಅವರನ್ನು 4-2ರಿಂದ ಮಣಿಸುವಲ್ಲಿ ಯಶಸ್ವಿಯಾದರು (11-7, 6-11, 12-10, 11-13, 12-10, 11-6). ಶನಿವಾರದ ಮುಖಾಮುಖಿಯಲ್ಲಿ ಮಣಿಕಾ ಎದುರಾಳಿಯಾಗಿರುವವರು ವಿಶ್ವದ ನಂ.3 ಆಟಗಾರ್ತಿ, ಚೀನದ ಯಿದಿ ವಾಂಗ್. ಈ ಕೂಟದಲ್ಲಿ ಮಣಿಕಾಗೆ ಪದಕ ಗೆಲ್ಲಲು ಇರುವ ಕೊನೆಯ ಅವಕಾಶ ಇದಾಗಿದೆ. ಅವರು ಈಗಾಗಲೇ ಮಿಶ್ರ ಡಬಲ್ಸ್ ಹಾಗೂ ವನಿತಾ ತಂಡ ಸ್ಪರ್ಧೆಯಲ್ಲಿ ಪರಾಭವಗೊಂಡಿದ್ದಾರೆ.
ಮಿಶ್ರ ಫಲಿತಾಂಶ
ಪುರುಷರ ಡಬಲ್ಸ್‌ನಲ್ಲಿ ಮಾನವ್ ವಿಕಾಸ್ ಠಕ್ಕರ್-ಮಾನುಷ್ ಉತ್ಪಲ್‌ಭಾಯ್ ಶಾ 3-2ರಿಂದ ಸಿಂಗಾಪುರದ ಐಜಾಕ್ ಕ್ವೆಕ್ ಯಾಂಗ್-ವ್ಯೂ ಎನ್ ಕೋನ್ ಪಾಂಗ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಅಚಂತ ಶರತ್ ಕಮಲ್-ಜಿ. ಸಥಿಯನ್ ಚೀನದ ಚುಕ್ವಿನ್ ವಾಂಗ್-ಫಾನ್ ಜೆಂದಾಂಗ್ ವಿರುದ್ಧ 3-0 ಅಂತರದ ಸೋಲುಂಡರು.
ಸ್ಕ್ವಾಷ್: ವನಿತೆಯರು ಬೆಳ್ಳಿಯಿಂದ ಕಂಚಿಗೆ
ವನಿತೆ ಯರ ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತ ದೊಡ್ಡ ಪದದಿಂದ ವಂಚಿತವಾಗಿ ಕಂಚಿಗೆ ಸಮಾ ಧಾನಪಟ್ಟಿತು. ಅನುಭವಿ ಗಳಾದ ಜೋಶ್ನಾ ಚಿನ್ನಪ್ಪ, ಅನಾಹತ್ ಸಿಂಗ್, ತನ್ವಿ ಖನ್ನಾ ಅವರನ್ನೊಳಗೊಂಡ ಭಾರತ ತಂಡ ಶುಕ್ರವಾರದ ಸೆಮಿ ಫೈನಲ್‌ನಲ್ಲಿ ಹಾಂಕಾಂಗ್‌ಗೆ
1-2ರಿಂದ ಶರಣಾಗಿ ಪ್ರಶಸ್ತಿ ಸುತ್ತಿನ ಅವಕಾಶವನ್ನು ಕಳೆದು ಕೊಂಡಿತು. ಕಳೆದ ಜಕಾರ್ತಾ ಏಷ್ಯಾಡ್‌ನಲ್ಲಿ ನಮ್ಮ ವನಿತಾ ತಂಡ ಬೆಳ್ಳಿ ಪದಕ ಗೆದ್ದಿತ್ತು.
ಸೆಮಿಫೈನಲ್‌ನ 3 ಗೇಮ್‌ಗಳಲ್ಲಿ ಜಯಿಸಿದ್ದು ಜೋಶ್ನಾ ಚಿನ್ನಪ್ಪ ಮಾತ್ರ. ದ್ವಿತೀಯ ಪಂದ್ಯದಲ್ಲಿ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಟೆ ಲಾಕ್ ಹೊ ಅವರನ್ನು 3-2ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಮೊದಲ ಪಂದ್ಯದಲ್ಲಿ ತನ್ವಿ ಖನ್ನಾ ಅವರು ಸಿನ್ ಯುಕ್ ಚಾನ್ ಕೈಯಲ್ಲಿ 3-0 ಅಂತರದ ಸೋಲುಂಡಿದ್ದರು.
ನಿರ್ಣಾಯಕ ಪಂದ್ಯದಲ್ಲಿ ಉನ್ನತ ರ್‍ಯಾಂಕಿಂಗ್‌ನ ಅನುಭವಿ ಆಟಗಾರ್ತಿ ಲೀ ಕಾ ಯಿ ವಿರುದ್ಧ 15 ವರ್ಷದ ಅನಾಹತ್ ದಿಟ್ಟ ಹೋರಾಟ ನೀಡಿಯೂ 3-0 ಅಂತರದಿಂದ ಸೋಲು ಕಾಣಬೇಕಾಯಿತು.
ಬ್ಯಾಡ್ಮಿಂಟನ್ ಪುರುಷರಿಗೆ ಪದಕ ಖಚಿತ
ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಪುರುಷರು ಪದಕವನ್ನು ಖಾತ್ರಿಗೊಳಿಸಿದರೆ, ವನಿತೆಯರ ಆಟ ಕೊನೆಗೊಂಡಿದೆ. ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಲವನ್ನು 3-0 ಅಂತರದಿಂದ ಮಣಿಸಿದರೆ, ವನಿತೆಯರು ಇದೇ ಹಂತದಲ್ಲಿ ಥಾಯ್ಲೆಂಡ್ ವಿರುದ್ಧ ಇಷ್ಟೇ ಅಂತರದಿಂದ ಎಡವಿದರು.
ಪುರುಷರಿಗೆ ನೇಪಾಲ ಯಾವುದೇ ರೀತಿಯಲ್ಲಿ ಸವಾಲಾಗಲಿಲ್ಲ. ಲಕ್ಷ್ಯ ಸೇನ್ 21-5, 21-8ರಿಂದ ಪ್ರಿನ್ಸ್ ದಹಾಲ್ ಅವರನ್ನು ಮಣಿಸಿದರು. ಕೆ. ಶ್ರೀಕಾಂತ್ 21-14, 21-13ರಿಂದ ಸುನೀಲ್ ಜೋಶಿ ಆಟವನ್ನು ಕೊನೆಗೊಳಿಸಿದರು. 3ನೇ ಪಂದ್ಯದಲ್ಲಿ ಮಿಥುನ್ ಮಂಜುನಾಥ್ 21-2, 21-17ರಿಂದ ಬಿಷ್ಣು ಕತುವಾಲ್‌ಗೆ ಸೋಲುಣಿಸಿದರು. ಈ ಜಯದಿಂದ ಭಾರತಕ್ಕೆ ಕಂಚಿನ ಪದಕ ಖಚಿತವಾಗಿದೆ.
ಸಿಂಧು ಪರಾಭವ
ಥಾಯ್ಲೆಂಡ್ ವಿರುದ್ಧ ನಡೆದ ವನಿತಾ ತಂಡ ಸ್ಪರ್ಧೆಯಲ್ಲಿ ಭಾರತ 3-0 ಅಂತರದಿಂದ ಮುಗ್ಗರಿಸಿತು. ಸೋಲಿನ ಹಾದಿಯಲ್ಲಿ ಪಿ.ವಿ. ಸಿಂಧು ಒಂದು ಗೇಮ್ ಜಯಿಸಿದ್ದಷ್ಟೇ ಭಾರತದ ಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.