ಬಿಸಿಸಿಐಯನ್ನು ಹಗುರಾಗಿ ಕಾಣಬೇಡಿ:ರವಿ ಶಾಸ್ತ್ರಿ
Team Udayavani, Feb 18, 2017, 3:45 AM IST
ಮುಂಬಯಿ: ಆಂತರಿಕ ತಲ್ಲಣಗಳಿಂದ ಕಂಗೆಟ್ಟಿರುವ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಪರಿಸ್ಥಿತಿಯ ದುರ್ಲಾಭ ಪಡೆಯಲು ಜಗತ್ತಿನ ಇತರೆ ಕ್ರಿಕೆಟ್ ಸಂಸ್ಥೆಗಳು ಯತ್ನಿಸಬಾರದು ಎಂದು ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಎಚ್ಚರಿಸಿದ್ದಾರೆ.
ಸದ್ಯ ಬಿಸಿಸಿಐ ಸಮಸ್ಯೆಯಲ್ಲಿದ್ದರೂ ಅದು ಶಾಶ್ವತವಾಗಿರುವುದಿಲ್ಲ. ಬಿಸಿಸಿಐ ತನ್ನ ಹಳೇ ವೈಭವಕ್ಕೆ ಮರಳಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕರೂ ಆಗಿರುವ ರವಿ ಶಾಸ್ತ್ರಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಐಸಿಸಿಯಿಂದ ತನಗೆ ಬರಬೇಕಿರುವ ಒಂದು ಪೈಸೆಯನ್ನೂ ಬಿಸಿಸಿಐ ಬಿಡಬಾರದು. ಬಿಸಿಸಿಐನಿಂದ ಐಸಿಸಿ ಭಾರೀ ಲಾಭ ಪಡೆಯುತ್ತಿದೆ. ಆದ್ದರಿಂದ ಗರಿಷ್ಠ ಲಾಭವನ್ನು ಹಿಂಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಐಸಿಸಿ ಕೂಟಗಳಲ್ಲಿ ಬಿಸಿಸಿಐನಿಂದ ಲಭಿಸುವ ಲಾಭದ ಪ್ರಮಾಣ ಶೇ.80. ಬಿಸಿಸಿಐಯೇನೂ ಅಷ್ಟನ್ನೂ ಕೊಡಿ ಎನ್ನುತ್ತಿಲ್ಲ. ಗರಿಷ್ಠ ಪಾಲನ್ನು ಕೊಡಿ ಎಂದಷ್ಟೇ ಕೇಳುತ್ತಿದೆ. ಇದನ್ನು ಪಡೆಯಲು ಬಿಸಿಸಿಐ ಪ್ರತಿನಿಧಿಗಳಾದ ವಿಕ್ರಮ್ ಲಿಮಯೆ, ಅನಿರುದ್ಧ ಚೌಧರಿ, ಅಮಿತಾಭ್ ಚೌಧರಿ ಯತ್ನಿಸುತ್ತಿರುವುದು ಸರಿಯಾಗಿಯೇ ಇದೆ…’ ಎಂದು ರವಿ ಶಾಸ್ತ್ರಿ ಇದೇ ವೇಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.