ದ.ಆಫ್ರಿಕಾ ಏಕದಿನ ತಂಡಕ್ಕೂ ಫಾ ಡು ಪ್ಲೆಸಿಸ್ ನಾಯಕ
Team Udayavani, Sep 13, 2017, 6:05 AM IST
ಜೊಹಾನ್ಸ್‌ಬರ್ಗ್: ಫಾ ಡು ಪ್ಲೆಸಿಸ್ ಅವರನ್ನು ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಅವರು ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲೂ ತಂಡದ ಸಾರಥಿಯಾದಂತಾಯಿತು.
ಕಳೆದ ತಿಂಗಳು ಎಬಿ ಡಿ ವಿಲಿಯರ್ ಏಕದಿನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಡು ಪ್ಲೆಸಿಸ್ ಅವರೀಗ ಎಬಿಡಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದು, ಮುಂದಿನ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ಸಜ್ಜುಗೊಳಿಸುವ ಮಹತ್ವದ ಜವಾಬ್ದಾರಿ ಇವರ ಮೇಲಿದೆ. ಸದ್ಯ ಅವರು ಪಾಕಿಸ್ಥಾನದಲ್ಲಿ ಆರಂಭಗೊಂಡಿರುವ ಟಿ-20 ಸರಣಿಯಲ್ಲಿ ವಿಶ್ವ ಇಲೆವೆನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಸರಣಿ ಮೂಲಕ ಏಕದಿನದಲ್ಲಿ ಮೊದಲ ಬಾರಿಗೆ “ಪೂರ್ಣ ಪ್ರಮಾಣ’ದಲ್ಲಿ ರಾಷ್ಟ್ರೀಯ ತಂಡದ ಸಾರಥ್ಯ ವಹಿಸಲಿದ್ದಾರೆ.
ಡು ಪ್ಲೆಸಿಸ್ ಈಗಾಗಲೇ 9 ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದರೂ ಇದೆಲ್ಲವೂ ಉಸ್ತುವಾರಿ ವ್ಯವಸ್ಥೆ ಆಗಿತ್ತು. ಡಿ ವಿಲಿಯರ್ ಗಾಯಾಳಾಗಿ ಹೊರಗುಳಿದ ಸಂದರ್ಭದಲ್ಲಿ ಈ ಅವಕಾಶ ಲಭಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧದ ತವರಿನ ಸರಣಿಯಲ್ಲಿ ಆಫ್ರಿಕಾದ 5-0 ಜಯಭೇರಿ ವೇಳೆ ಡು ಪ್ಲೆಸಿಸ್ ಅವರೇ ತಂಡದ ನಾಯಕರಾಗಿದ್ದರು. ಆಗಲೇ ಆಯ್ಕೆಗಾರರು ಇವರ ಮೇಲೆ ಕಣ್ಣಿಟ್ಟಿದ್ದರು.
ಎಬಿ ಡಿ ವಿಲಿಯರ್ ಕಳೆದ 6 ವರ್ಷಗಳಿಂದ ಏಕದಿನದಲ್ಲಿ ದಕ್ಷಿಣ ಆಫ್ರಿಕಾ ತಂಡದ ನೇತೃತ್ವ ವಹಿಸಿದ್ದರು. ಆದರೆ 103 ಪಂದ್ಯಗಳಲ್ಲಿ ಕೇವಲ 59ರಲ್ಲಷ್ಟೇ ಜಯ ಒಲಿದಿತ್ತು. ಹೀಗಾಗಿ ಎಬಿಡಿ ಅವರನ್ನು ದಕ್ಷಿಣ ಆಫ್ರಿಕಾದ ವಿಫಲ ನಾಯಕರಲ್ಲೊಬ್ಬರೆಂದೇ ಗುರುತಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.