![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 10:46 PM IST
ಶಾರ್ಜಾ: “ದುಬಾೖ ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್-4′ ದಿವೇಶ್ ಆಳ್ವ ಸ್ಮರಣಾರ್ಥ ಶಾರ್ಜಾದ ಡಿ.ಸಿ.ಎಸ್. ಸೆಲೆಕ್ಟ್ ಅರೇನಾ ಮೈದಾನ ದಲ್ಲಿ ನಡೆದ “ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ’ಯಲ್ಲಿ ಕಾನ್ಸೆಪ್ಟ್ ವಾರಿಯರ್ ತಂಡ ಚಾಂಪಿಯನ್ ಆಗಿ ಮೂಡಿಬಂತು. ರೇಂಜರ್ ತಂಡ ದ್ವಿತೀಯ, ಫಾರ್ಚೂನ್ ಗ್ಲಾಡಿಯೇಟರ್ ತಂಡ ತೃತೀಯ ಸ್ಥಾನಿಯಾಯಿತು.
ಪಂದ್ಯಾವಳಿಯನ್ನು ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಿದರು. ಒಟ್ಟು 10 ತಂಡಗಳು ಭಾಗವಹಿಸಿದ್ದವು. ಯುಎಇ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಯುಎಇ ಬಂಟ್ಸ್‌ನ ಪೋಷಕರಾದ ಬಿ.ಆರ್. ಶೆಟ್ಟಿ, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.
ಪೂರ್ಣ ಉತ್ತಮ ಬ್ಯಾಟ್ಸ್‌ಮನ್, ಶಿವಪ್ರಸಾದ್ ಶೆಟ್ಟಿ ಉತ್ತಮ ಆಟಗಾರ, ಪ್ರಥಮ್ ರೈ ಉತ್ತಮ ಫೀಲ್ಡರ್, ಕೀರ್ತನ್ ಶಂಕರ್ ಶೆಟ್ಟಿ ಅತ್ಯುತ್ತಮ ಎಸೆತ ಗಾರ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
You seem to have an Ad Blocker on.
To continue reading, please turn it off or whitelist Udayavani.