Dubai Tennis Championship: ಬೋಪಣ್ಣ, ಭಾಂಬ್ರಿ ಮುನ್ನಡೆ
Team Udayavani, Feb 28, 2024, 11:55 PM IST
ದುಬಾೖ: ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜತೆಗಾರ ಮ್ಯಾಥ್ಯೂ ಎಬೆxನ್ “ದುಬಾೖ ಡ್ನೂಟಿ ಫ್ರೀ ಟೆನಿಸ್ ಚಾಂಪಿಯನ್ಶಿಪ್’ನ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ನೆದರ್ಲೆಂಡ್ಸ್ನ ರಾಬಿನ್ ಹಾಸೆ ಜತೆಗೂಡಿ ಆಡುತ್ತಿರುವ ಭಾರತದ ಮತ್ತೋರ್ವ ಆಟಗಾರ ಯುಕಿ ಭಾಂಬ್ರಿ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಸಿಂಗಲ್ಸ್ನಲ್ಲಿ ಸುಮಿತ್ ನಾಗಲ್ ಆಟ ಕೊನೆಗೊಂಡಿದೆ.
ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಡಬಲ್ಸ್ ಜಯಿಸಿದ್ದ ಬೋಪಣ್ಣ-ಎಬೆxನ್ ಸೇರಿಕೊಂಡು ಸ್ಕಂದರ್ ಮನ್ಸೂರಿ (ಟ್ಯುನೀಶಿಯಾ)- ಐಸಮ್ ಉಲ್ ಹಕ್ ಖುರೇಶಿ (ಪಾಕಿಸ್ಥಾನ) ವಿರುದ್ಧ ಭಾರೀ ಹೋರಾಟ ನಡೆಸಿ 7-6 (4), 7-6 (5) ಅಂತರದ ಜಯ ಗಳಿಸುವಲ್ಲಿ ಯಶಸ್ವಿಯಾದರು. ಇವರ ಹೋರಾಟ ಒಂದು ಗಂಟೆ, 41 ನಿಮಿಷಗಳ ಕಾಲ ಸಾಗಿತು. ಕ್ವಾರ್ಟರ್ ಫೈನಲ್ನಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ ಏರಿಯಲ್ ಬೆಹರ್ (ಉರುಗ್ವೆ)-ಆ್ಯಡಂ ಪಾವ್ಲಸೆಕ್ (ಜೆಕ್ ಗಣರಾಜ್ಯ) ವಿರುದ್ಧ ಸೆಣಸಲಿದೆ.
ಯುಕಿ ಭಾಂಬ್ರಿ-ರಾಬಿನ್ ಹಾಸೆ ಸೇರಿಕೊಂಡು ಅಲೆಕ್ಸಾಂಡರ್ ಬಬ್ಲಿಕ್ (ಕಜಕಸ್ಥಾನ)-ಆ್ಯಡ್ರಿಯನ್ ಮನ್ನಾರಿನೊ (ಫ್ರಾನ್ಸ್) ಜೋಡಿಗೆ 6-7 (5), 6-3, 10-8 ಅಂತರದ ಸೋಲುಣಿಸಿದರು.
ಸುಮಿತ್ಗೆ ಸೋಲು
ಪುರುಷರ ಸಿಂಗಲ್ಸ್ನಲ್ಲಿ ಭಾರತದ ಭರವಸೆಯ ಆಟಗಾರ ಸುಮಿತ್ ನಾಗಲ್ 32ರ ಸುತ್ತಿನ ಸ್ಪರ್ಧೆಯಲ್ಲಿ ಪರಾಭವಗೊಂಡರು. ಅವರನ್ನು ಇಟಲಿಯ ಲೊರೆಂಜೊ ಸೊನೆಗೊ 6-4, 5-7, 6-1 ಅಂತರದಿಂದ ಸೋಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.