ಮೂಲೆಗುಂಪು ಮಾಡಿದ್ದರಿಂದಲೇನಿವೃತ್ತಿ: ಎಬಿಡಿ ಸ್ಫೋಟಕ ಹೇಳಿಕೆ
Team Udayavani, May 21, 2019, 6:00 AM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ, ಒಂದು ಕಾಲದಲ್ಲಿ ಕ್ರಿಕೆಟ್‌ನ ಮೂರೂ ಮಾದರಿಯ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಆಗಿದ್ದ ಎಬಿ ಡಿ ವಿಲಿಯರ್ ಕಳೆದ ವರ್ಷ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಇದಕ್ಕೆ ಕಾರಣವೇನೆಂದು ಅವರು ಬಾಯ್ಬಿಟ್ಟಿದ್ದಾರೆ.
‘ನಾನು 2019ರ ವಿಶ್ವಕಪ್ ಆಡಲು ಬಯಸಿದ್ದೆ. ಆದರೆ ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ಬಂತು. ಆದ್ದರಿಂದ ನಿವೃತ್ತಿ ಘೋಷಿಸಿದೆ.ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ, ಐಪಿಎಲ್ ಸೇರಿದಂತೆ ವಿವಿಧ ಟಿ20 ಲೀಗ್‌ಗಳಲ್ಲಿ ಎಬಿಡಿ ಭರ್ಜರಿಯಾಗಿಯೇ ಆಡುತ್ತಿದ್ದಾರೆ. ಅವರ ಈ ಅದ್ಭುತ ಲಯ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಹಾಗಿದ್ದರೂ ನಿವೃತ್ತಿಯಾಗಿದ್ದೇಕೆ ಎಂಬ ಪ್ರಶ್ನೆ ಹುಟ್ಟಿ ಕೊಂಡಾಗ, ಎಬಿ ಮುಕ್ತ ಉತ್ತರ ನೀಡಿದ್ದಾರೆ.
ಆಯ್ದ ಪಂದ್ಯಗಳಲ್ಲಷ್ಟೇ ಆಟ
‘ನಾನು ಕಳೆದ ವರ್ಷ, ಅದರ ಹಿಂದಿನ ವರ್ಷ ಆಯ್ದ ಪಂದ್ಯಗಳಲ್ಲಿ ಮಾತ್ರ ಆಡುವ ನಿರ್ಧಾರ ಮಾಡಿ, ಆ ಪ್ರಕಾರ ಆಡಲು ಶುರು ಮಾಡಿದೆ. ಇದಕ್ಕೆ ಭಾರೀ ಟೀಕೆ ಕೇಳಿಬಂತು. ಇದರಿಂದ ನೊಂದ ನಾನು ಈ ನಿರ್ಧಾರ ಮಾಡಬೇಕಾಯಿತು’ ಎಂದು ಹೇಳಿಕೊಂಡಿದ್ದಾರೆ. ಎಬಿಡಿಗೆ ವಿಶ್ವಾದ್ಯಂತ ಬೇಡಿಕೆಯಿದ್ದಿದ್ದರಿಂದ ಸತತವಾಗಿ ಕ್ರಿಕೆಟ್ ಆಡುವುದು ಅವರಿಗೆ ಬಹಳ ಹೊರೆಯಾಗುತ್ತಿತ್ತು. ಆದ್ದರಿಂದ ಐಪಿಎಲ್ ತ್ಯಜಿಸುವ ನಿರ್ಧಾರವನ್ನೂ ಒಮ್ಮೆ ಮಾಡಿದ್ದರು. ಕೊನೆಗೆ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಿದರು.
ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ಬಂತು. ಆದ್ದರಿಂದ ನಿವೃತ್ತಿ ಘೋಷಿಸಿದೆ.
-ಎಬಿ ಡಿ ವಿಲಿಯರ್ ದಕ್ಷಿಣ ಆಪ್ರಿಕಾದ ಮಾಜಿ ಆಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.