Duleep Trophy:ಇಂಡಿಯಾ ‘ಎ’ಗೆ ಮುನ್ನಡೆ
Team Udayavani, Sep 13, 2024, 11:05 PM IST
ಅನಂತಪುರ: ಇಂಡಿಯಾ ಡಿ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದೆ. 2ನೇ ದಿನದಾಟದ ಅಂತ್ಯಕ್ಕೆ 222 ರನ್ ಲೀಡ್ ಗಳಿಸಿದ್ದು, 9 ವಿಕೆಟ್‌ಗಳನ್ನು ಕೈಲಿರಿಸಿಕೊಂಡಿದೆ.
ಮಾಯಾಂಕ್ ಅಗರ್ವಾಲ್ ನಾಯಕತ್ವದ ಇಂಡಿಯಾ ಎ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಮಾಡಿತ್ತು. ಜವಾಬಿತ್ತ ಇಂಡಿಯಾ ಡಿ 183ಕ್ಕೆ ಕುಸಿಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಎ ಒಂದು ವಿಕೆಟಿಗೆ 115 ರನ್ ಗಳಿಸಿದೆ.
ಇಂಡಿಯಾ ಡಿ ಪರ ದೇವದತ್ ಪಡಿಕ್ಕಲ್ ಏಕಾಂಗಿಯಾಗಿ ಹೋರಾಡಿ 92 ರನ್ ಬಾರಿಸಿದರು. 31 ರನ್ ಮಾಡಿದ ಹರ್ಷಿತ್ ರಾಣಾ ಅವರದು ಅನಂತರದ ಹೆಚ್ಚಿನ ಗಳಿಕೆ. “ಎ’ ಪರ ಖಲೀದ್ ಅಹ್ಮದ್ ಮತ್ತು ಆಖೀಬ್ ಖಾನ್ ತಲಾ 3 ವಿಕೆಟ್ ಉರುಳಿಸಿದರು.
ದ್ವಿತೀಯ ಸರದಿಯಲ್ಲಿ 56 ರನ್ ಮಾಡಿದ ಮಾಯಾಂಕ್ ಅಗರ್ವಾಲ್ ಪೆವಿಲಿಯನ್ ಸೇರಿಕೊಂಡಿದ್ದು, 59 ರನ್ ಗಳಿಸಿರುವ ಪ್ರಥಮ್ ಸಿಂಗ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಡಿಯಾ ಸಿ ಬೃಹತ್ ಸ್ಕೋರ್
ಇಂಡಿಯಾ ಬಿ ಎದುರಿನ ಇನ್ನೊಂದು ಪಂದ್ಯದಲ್ಲಿ ಇಂಡಿಯಾ ಸಿ 525 ರನ್ ಪೇರಿಸಿದೆ. ದಿಟ್ಟ ಜವಾಬು ನೀಡಲಾರಂಭಿಸಿದ ಇಂಡಿಯಾ ಬಿ ವಿಕೆಟ್ ನಷ್ಟವಿಲ್ಲದೆ 124 ರನ್ ಗಳಿಸಿದೆ. ನಾಯಕ ಅಭಿಮನ್ಯು ಈಶ್ವರನ್ 51 ಮತ್ತು ಎನ್. ಜಗದೀಶನ್ 67 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಇಂಡಿಯಾ ಸಿ ತಂಡದ ಇಶಾನ್ ಕಿಶನ್ 111 ರನ್ ಬಾರಿಸಿದ್ದರು. ನಾಯಕ ಋತುರಾಜ್ ಗಾಯಕ್ವಾಡ್ 58, ಮಾನವ್ ಸುಥಾರ್ 82 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.