Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ?
Team Udayavani, Sep 22, 2024, 9:06 AM IST
ಅನಂತಪುರ: ದುಲೀಪ್ ಟ್ರೊಫಿ (Duleep Trophy) ಅಂತಿಮ ಸುತ್ತಿನ ಪಂದ್ಯಗಳು ಅಂತಿಮ ಘಟ್ಟಕ್ಕೆ ತಲುಪಿದ್ದು ಭಾನುವಾರ ಟ್ರೋಫಿ ಗೆಲ್ಲುವ ತಂಡ ನಿರ್ಧಾರವಾಗಲಿದೆ. ಸದ್ಯದ ಅಂಕಪಟ್ಟಿಯ ಆಧಾರದಲ್ಲಿ ಭಾರತ ಸಿ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ. ಆದರೆ, ಭಾರತ ಬಿ ಕೂಡ ಟ್ರೋಫಿಯ ರೇಸ್ ನಲ್ಲಿದೆ.
ದುಲೀಪ್ ಟ್ರೋಫಿ ಅಂಕಪಟ್ಟಿಯಲ್ಲಿ 1 ಪಂದ್ಯ ಗೆದ್ದು 1 ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ಸಿ, 9 (6+3) ಅಂಕದೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು 1 ಪಂದ್ಯ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ಬಿ, 7 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಕಾರಣ, ಬಿ ತಂಡ ಮೊದಲ ಇನ್ನಿಂಗ್ಸ್ ಹಿನ್ನಡೆಯಲ್ಲಿದ್ದು, ಬಳಿಕ ಪಂದ್ಯ ಡ್ರಾ ಮಾಡಿಕೊಂಡಿದೆ. ಹೀಗಾಗಿ ಅದರ ಡ್ರಾ ಪಂದ್ಯಕ್ಕೆ 1 ಅಂಕ ನೀಡಲಾಗಿದೆ.
ಇನ್ನು ಭಾರತ ಎ ಮತ್ತು ಸಿ ನಡುವಿನ ಪಂದ್ಯ ಡ್ರಾಗೊಂಡರೂ ಕೂಡ ಭಾರತ ಸಿ ಆರಂಭಿಕ ಇನಿಂಗ್ಸ್ ಮುನ್ನಡೆಯಲ್ಲಿರುವುದರಿಂದ ಎಗೆ 1 ಅಂಕ ಮಾತ್ರ ಲಭಿಸಲಿದೆ. ಇಲ್ಲಿ ಸಿ ಗೆದ್ದರೆ ಪ್ರಶಸ್ತಿ ಅದರ ಪಾಲಾಗಲಿದೆ. ಡಿ ಮತ್ತು ಬಿ ನಡುವಿನ ಪಂದ್ಯದಲ್ಲಿ ಡಿ ಈಗಾಗಲೇ ಹೊರಬಿದ್ದಿದ್ದು, ಬಿ ಪಂದ್ಯ ಗೆದ್ದು, ಸಿ ಪಂದ್ಯ ಡ್ರಾ ಮಾಡಿಕೊಂಡರೆ ಮಾತ್ರ ಪ್ರಶಸ್ತಿ ಬಿ ಪಾಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.