Duleep Trophy: ಪ್ರಥಮ್ ಸಿಂಗ್, ತಿಲಕ್ ವರ್ಮ ಶತಕ
Team Udayavani, Sep 14, 2024, 9:13 PM IST
ಅನಂತಪುರ: ಆರಂಭಕಾರ ಪ್ರಥಮ್ ಸಿಂಗ್ ಹಾಗೂ ವನ್‌ಡೌನ್ ಬ್ಯಾಟರ್ ತಿಲಕ್ ವರ್ಮ ಬಾರಿಸಿದ ಅಮೋಘ ಶತಕದ ನೆರವಿನಿಂದ ಇಂಡಿಯಾ ಡಿ ಎದುರಿನ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ ಮೇಲುಗೈ ಸಾಧಿಸಿದೆ. ಇಂಡಿಯಾ ಡಿ ತಂಡಕ್ಕೆ 488 ರನ್ ಗೆಲುವಿನ ಗುರಿ ನೀಡಲಾಗಿದ್ದು, ಒಂದು ವಿಕೆಟಿಗೆ 62 ರನ್ ಮಾಡಿ ಶನಿವಾರದ ಆಟ ಮುಗಿಸಿದೆ.
ಇಂಡಿಯಾ ಎ 3 ವಿಕೆಟಿಗೆ 380 ರನ್ ಪೇರಿಸಿ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಪ್ರಥಮ್ ಸಿಂಗ್ 122 ರನ್ ಹೊಡೆದರೆ (189 ಎಸೆತ, 12 ಬೌಂಡರಿ, 1 ಸಿಕ್ಸರ್), ತಿಲಕ್ ವರ್ಮ 111 ರನ್ ಗಳಿಸಿ ಅಜೇಯರಾಗಿ ಉಳಿದರು (193 ಎಸೆತ, 9 ಬೌಂಡರಿ). ಇಬವರಿಬ್ಬರ 2ನೇ ವಿಕೆಟ್ ಜತೆಯಾಟದಲ್ಲಿ 104 ರನ್ ಒಟ್ಟುಗೂಡಿತು. ಪ್ರಥಮ್ ಸಿಂಗ್ ಮತ್ತು ನಾಯಕ ಮಾಯಾಂಕ್ ಅಗರ್ವಾಲ್ (56) ಮೊದಲ ವಿಕೆಟ್ ಜತೆಯಾಟದಲ್ಲಿ 115 ರನ್ ಪೇರಿಸಿದ್ದರು. ಶಾಶ್ವತ್ ರಾವತ್ ಮತ್ತೋರ್ವ ಪ್ರಮುಖ ಸ್ಕೋರರ್ (ಔಟಾಗದೆ 64).
ಅಗರ್ವಾಲ್ ಬಳಗಕ್ಕೆ 107 ರನ್ನುಗಳ ಮೊದಲ ಇನ್ನಿಂಗ್ಸ್ ಲೀಡ್ ಲಭಿಸಿತ್ತು. ಇಂಡಿಯಾ ಎ ತಂಡದ 290 ರನ್ನುಗಳಿಗೆ ಉತ್ತರವಾಗಿ ಇಂಡಿಯಾ ಡಿ 183ಕ್ಕೆ ಆಲೌಟ್ ಆಗಿತ್ತು. ಡಿ ತಂಡದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಯಶ್ ದುಬೆ 15 ಮತ್ತು ರಿಕಿ ಭುಯಿ 44 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ ಎ 290, 380/3 ಡಿಕ್ಲೇರ್ (ಪ್ರಥಮ್ 122, ತಿಲಕ್ 111, ಸೌರಭ್ 110ಕ್ಕೆ 2), ಭಾರತ ಡಿ 183, 19 ಓವರ್‌ನಲ್ಲಿ 62/1 (ಯಶ್ 15, ರಿಕಿ 44, ಖಲೀಲ್ 17ಕ್ಕೆ 1).
ಬಿ ಪರ ಈಶ್ವರನ್ ಹೋರಾಟ:
ಇನ್ನೊಂದು ಪಂದ್ಯದಲ್ಲಿ, ಇಂಡಿಯಾ ಸಿ ತಂಡದ 525 ರನ್ನುಗಳ ಬೃಹತ್ ಮೊತ್ತಕ್ಕೆ ಜವಾಬು ನೀಡುತ್ತಿರುವ ಇಂಡಿಯಾ ಬಿ 7 ವಿಕೆಟಿಗೆ 309 ರನ್ ಗಳಿಸಿ 3ನೇ ದಿನದಾಟ ಮುಗಿಸಿದೆ. ನಾಯಕ, ಆರಂಭಕಾರ ಅಭಿಮನ್ಯು ಈಶ್ವರನ್ 143 ರನ್ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದ್ದಾರೆ.
ಅಭಿಮನ್ಯು ಈಶ್ವರನ್ ಮತ್ತು ಎನ್. ಜಗದೀಶನ್ ಮೊದಲ ವಿಕೆಟಿಗೆ 129 ರನ್ ಪೇರಿಸಿ ಉತ್ತಮ ಬುನಾದಿಯನ್ನೇನೋ ನಿರ್ಮಿಸಿದರು. ಆದರೆ 70 ರನ್ ಮಾಡಿದ ಜಗದೀಶನ್ ಔಟಾದ ಬಳಿಕ ತಂಡ ಕುಸಿತಕ್ಕೆ ಸಿಲುಕಿತು. ಮಧ್ಯಮ ವೇಗಿ ಅಂಶುಲ್ ಕಾಂಬೋಜ್ 66 ರನ್ನಿಗೆ 5 ವಿಕೆಟ್ ಉರುಳಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಭಾರತ ಸಿ 124.1 ಓವರ್‌ನಲ್ಲಿ 525/10 (ಕಿಶನ್ 111, ಮನವ್ 82, ರಾಹುಲ್ 73ಕ್ಕೆ 4), ಭಾರತ ಬಿ 101 ಓವರ್‌ನಲ್ಲಿ 309/7 (ಅಭಿಮನ್ಯು 143, ಜಗದೀಶನ್ 70, ಅಂಶುಲ್ 66ಕ್ಕೆ 5)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.