ಅರ್ಜುನ, ಖೇಲ್‌ರತ್ನ ಪ್ರಶಸ್ತಿ; ದ್ಯುತಿ ಚಂದ್, ಹರ್ಭಜನ್ ಹೆಸರು ತಿರಸ್ಕೃತ
Team Udayavani, Jul 29, 2019, 11:24 AM IST
ಹೊಸದಿಲ್ಲಿ: ಅರ್ಜುನ ಪ್ರಶಸ್ತಿಗೆ ಭಾರತೀಯ ಸ್ಪ್ರಿಂಟರ್ ದ್ಯುತಿ ಚಂದ್ ಮತ್ತು ಖೇಲ್ ರತ್ನ ಪ್ರಶಸ್ತಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ನಾಮನಿರ್ದೇಶವನ್ನು ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.
ರಾಜ್ಯ ಸರಕಾರವು ಗಡುವಿನ ಬಳಿಕ ನಾಮನಿರ್ದೇಶ ಪತ್ರ ಸಲ್ಲಿಸಿದೆ, ಹಾಗಾಗಿ ಅವರಿಬ್ಬರ ಹೆಸರನ್ನು ತಿರಸ್ಕರಿಸಲಾಯಿತು. ಚಂದ್ ಅವರ ವಿಷಯದಲ್ಲಿ ಗಡುವು ಮಾತ್ರವಲ್ಲದೇ ಅವರು ಪಡೆದ ಪದಕಗಳು ರ್‍ಯಾಂಕಿಂಗಿಗೆ ಅನುಗುಣವಾಗಿ ಇರಲಿಲ್ಲ. ರ್‍ಯಾಂಕಿಂಗ್ ಆರ್ಡರ್ ನೀಡುವಂತೆ ಭಾರತೀಯ ಆ್ಯತ್ಲೆಟಿಕ್ ಫೆಡರೇಶನ್ ಬಳಿ ಕೇಳಿದ ಬಳಿಕ ಅವರು ಐದನೇ ಸ್ಥಾನದಲ್ಲಿದ್ದರು. ಹೀಗಾಗಿ ಆಕೆಯ ನಾಮನಿರ್ದೇಶವನ್ನು ತಿರಸ್ಕರಿಸಲಾಯಿತು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗೆ ಮನವಿ
ಅರ್ಜುನ ಪ್ರಶಸ್ತಿಗೆ ಪರಿಗಣಿಸುವಂತಾಗಲು ತನ್ನ ನಾಮನಿರ್ದೇಶ ಪತ್ರವನ್ನು ಕ್ರೀಡಾ ಸಚಿವಾಲಯಕ್ಕೆ ಮರಳಿ ಸಲ್ಲಿಸುವಂತೆ ದ್ಯುತಿ ಚಂದ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದ ವೇಳೆ ಕೇಳಿಕೊಂಡಿದ್ದಾರೆ.
ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ನಪೋಲಿಯಲ್ಲಿ ನಡೆದ ವಿ.ವಿ. ಗೇಮ್ಸ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ಅವರಿಗೆ ತೋರಿಸಿದ್ದೇನೆ ಮತ್ತು ಈ ಹಿನ್ನೆಲೆಯಲ್ಲಿ ನನ್ನ ನಾಮನಿರ್ದೇಶ ಪತ್ರವನ್ನು ಮರಳಿ ಸಲ್ಲಿಸುವಂತೆ ಮನವಿ ಮಾಡಿದ್ದೇನೆ. ಪತ್ರವನ್ನು ಮರಳಿ ಸಲ್ಲಿಸುವ ಭರವಸೆಯಿತ್ತ ಪಟ್ನಾಯಕ್, ನೀವು ಯಾವುದೇ ಚಿಂತೆ ಮಾಡದೆ ಮುಂಬರುವ ಸ್ಪರ್ಧೆಗಳಿಗಾಗಿ ಸಿದ್ಧತೆ ಮಾಡಿ ಎಂದು ಹೇಳಿದ್ದಾರೆಂದು ದ್ಯುತಿ ಚಂದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.