ಅಂಡರ್ 19 ವಿಶ್ವಕಪ್ ಪಂದ್ಯದ ವೇಳೆ ಕಂಪಿಸಿದ ಭೂಮಿ: ವಿಡಿಯೋ ನೋಡಿ
Team Udayavani, Jan 30, 2022, 10:48 AM IST
ಪೋರ್ಟ್ ಆಫ್ ಸ್ಪೈನ್: ಕೆರಿಬಿಯನ್ ದ್ವೀಪ ಸಮೂಹದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ವೇಳೆ ಭೂಕಂಪನದ ಅನುಭವವಾಗಿದೆ. ಪ್ಲೇಟ್ ಸೆಮಿ ಫೈನಲ್ ಪಂದ್ಯದ ವೇಳೆ ಈ ಅನುಭವವಾಗಿದ್ದು, ವಿಡಿಯೋದಲ್ಲಿ ದಾಖಲಾಗಿದೆ.
ಟ್ರನಿಡಾಡ್ ನ ಪೋರ್ಟ್ ಆಫ್ ಸ್ಪೇನ್ ನಲ್ಲಿ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಭೂಕಂಪನದ ಅನುಭವವಾಗಿದೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಗಳು ನಡುಗಿದ್ದು, ಮೈದಾನದಲ್ಲಿ ಆಡುತ್ತಿದ್ದ ಆಟಗಾರರಿಗೆ ಯಾವುದೇ ಅನುಭವವಾಗಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಿದೆ.
ಪೋರ್ಟ್ ಆಫ್ ಸ್ಪೇನ್‌ನ ಕರಾವಳಿಯಲ್ಲಿ 5.2 ತೀವ್ರತೆಯ ಭೂಕಂಪವಾಗಿದೆ. ಕಾಮೆಂಟರಿ ಬಾಕ್ಸ್ ನಡುಗಲು ಪ್ರಾರಂಭಿಸಿದಾಗ ಐಸಿಸಿ ನಿರೂಪಕ ಆಂಡ್ರ್ಯೂ ಲಿಯೊನಾರ್ಡ್ ನಡುಕದ ಅನುಭವನ್ನು ವಿವರಿಸಿದರು. “ನಾವು… ನಾವು ಇದೀಗ ಬಾಕ್ಸ್‌ನಲ್ಲಿ ಭೂಕಂಪದ ಅನುಭವ ಎದುರಿಸುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ನಿಜವಾಗಿಯೂ ಭೂಕಂಪವಾಗುತ್ತಿದೆ. 15-20 ಸೆಕೆಂಡುಗಳ ಕಾಲ ಕಂಪನದ ಅನುಭವವಾಯಿತು” ಎಂದು ಅವರು ಹೇಳಿದರು.
ಇದನ್ನೂ ಓದಿ:ಕೋರಿ ಆ್ಯಂಡರ್ಸನ್ ಬ್ಯಾಟಿಂಗ್ ಸಾಹಸ: ಲೆಜೆಂಡ್ಸ್ ಕ್ರಿಕೆಟ್ ಕಪ್ ಗೆದ್ದ ವರ್ಲ್ಡ್ ಜೈಂಟ್ಸ್
ಜಿಂಬಾಬ್ವೆ ಇನ್ನಿಂಗ್ಸ್‌ನ 6 ನೇ ಓವರ್‌ನಲ್ಲಿ ನಡುಕ ದೂರದರ್ಶನ ಕ್ಯಾಮೆರಾಗಳನ್ನು ಅಲುಗಾಡಿಸಿತು. ಭೂಕಂಪದಿಂದ ಆಟಕ್ಕೆ ತೊಂದರೆಯಾಗದ ಕಾರಣ ಐರ್ಲೆಂಡ್‌ನ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೀಸ್ ಬೌಲಿಂಗ್ ಮುಂದುವರಿಸಿದರು.
ಅಂಡರ್ 19 ವಿಶ್ವಕಪ್ ಭೂಕಂಪನದ ಅನುಭವದ ವಿಡಿಯೋವನ್ನು ಪತ್ರಕರ್ತ ಪೀಟರ್ ಡೆಲ್ಲಾ ಪೆನ್ನಾ ಹಂಚಿಕೊಂಡಿದ್ದಾರೆ.
Earthquake at Queen’s Park Oval during U19 World Cup match between @cricketireland and @ZimCricketv! Ground shook for approximately 20 seconds during sixth over of play. @CricketBadge and @NikUttam just roll with it like a duck to water! pic.twitter.com/kiWCzhewro
— Peter Della Penna (@PeterDellaPenna) January 29, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.