![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Copa America ಫುಟ್ಬಾಲ್ ಕ್ವಾರ್ಟರ್ ಫೈನಲ್ಗೆ ಈಕ್ವಡಾರ್
Team Udayavani, Jul 2, 2024, 12:32 AM IST
![1-eque](https://www.udayavani.com/wp-content/uploads/2024/07/1-eque-620x413.jpg)
ಗ್ಲೆಂಡೇಲ್ (ಅರಿಜೋನಾ): ಮೆಕ್ಸಿಕೊ ವಿರುದ್ಧ ಗೋಲಿಲ್ಲದ ಡ್ರಾ ಸಾಧಿಸುವ ಮೂಲಕ ಈಕ್ವಡಾರ್ ಕೊಪಾ ಅಮೆರಿಕ ಫುಟ್ಬಾಲ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇಲ್ಲಿ ಹಾಲಿ ಚಾಂಪಿಯನ್ ಆರ್ಜೆಂಟೀನಾದ ಸವಾಲು ಎದುರಾಗಿದೆ.
“ಬಿ’ ವಿಭಾಗದಲ್ಲಿದ್ದ ಈಕ್ವಡಾರ್ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. 3 ಪಂದ್ಯಗಳಲ್ಲಿ ಒಂದನ್ನು ಗೆದ್ದು, ಒಂದನ್ನು ಸೋತು, ಇನ್ನೊಂದನ್ನು ಡ್ರಾ ಮಾಡಿಕೊಂಡಿತು. ಮೆಕ್ಸಿಕೊ ಕೂಡ 4 ಅಂಕ ಸಂಪಾದಿಸಿತಾದರೂ ಗೋಲು ಗಳಿಕೆಯಲ್ಲಿ ಅದು ಈಕ್ವಡಾರ್ಗಿಂತ ಹಿಂದುಳಿಯಿತು.
ಎಲ್ಲ 3 ಪಂದ್ಯಗಳನ್ನು ಗೆದ್ದು 9 ಅಂಕ ಸಂಪಾದಿಸಿದ ವೆನಿಜುವೆಲಾ “ಬಿ’ ವಿಭಾಗದ ಅಗ್ರಸ್ಥಾನಿಯಾಯಿತು. ಟೆಕ್ಸಾಸ್ನಲ್ಲಿ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವೆನಿಜುವೆಲಾ 3-0 ಅಂತರದಿಂದ ಜಮೈಕಾವನ್ನು ಕೆಡವಿತು. ವೆನಿಜುವೆಲಾದ ಕ್ವಾರ್ಟರ್ ಫೈನಲ್ ಎದುರಾಳಿ ಕೆನಡಾ.
ವೆನಿಜುವೆಲಾ ಪರ ಎಡ್ವರ್ಡ್ ಬೆಲ್ಲೊ, ಸಾಲೋಮನ್ ರಾಂಡನ್ ಮತ್ತು ಎರಿಕ್ ರಮಿರೆಝ್ ಗೋಲು ಹೊಡೆದರು. ಈಕ್ವಡಾರ್ ಮತ್ತು ಮೆಕ್ಸಿಕೊ ವಿರುದ್ಧ ಗೆದ್ದಾಗಲೇ ವೆನಿಜುವೆಲಾ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿತ್ತು.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ICC-Champions-Trophy](https://www.udayavani.com/wp-content/uploads/2024/07/ICC-Champions-Trophy-150x90.jpg)
ICC Champions Trophy: ಮಾ.1ಕ್ಕೆ ಲಾಹೋರ್ನಲ್ಲಿ ಭಾರತ-ಪಾಕಿಸ್ಥಾನ ಪಂದ್ಯ
![Team-india](https://www.udayavani.com/wp-content/uploads/2024/07/Team-india-2-150x90.jpg)
T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?
![ICC T20I Rankings: ವಿಶ್ವಕಪ್ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ](https://www.udayavani.com/wp-content/uploads/2024/07/13-1-150x90.jpg)
ICC T20I Rankings: ವಿಶ್ವಕಪ್ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.