ಫಿಕ್ಸಿಂಗ್: ಯುವ ಟೆನ್ನಿಸ್ ಆಟಗಾರನಿಗೆ ಅಜೀವ ನಿಷೇಧ
Team Udayavani, May 6, 2020, 11:07 AM IST
ಹೊಸದಿಲ್ಲಿ: ಮ್ಯಾಚ್ ಫಿಕ್ಸಿಂಗ್, ಜೂಜು ಸೇರಿದಂತೆ ಹತ್ತಾರು ಪ್ರಕರಣವನ್ನು ಎದುರಿಸುತ್ತಿದ್ದ ಈಜಿಫ್ಟ್ ನ 21 ವರ್ಷದ ಯುವ ಟೆನ್ನಿಸ್ ಆಟಗಾರ ಯೂಸೆಫ್ ಹೊಸಮ್ ಗೆ ಟೆನ್ನಿಸ್ ಐಕ್ಯತಾ ಘಟಕ ಅಜೀವ ನಿಷೇಧ ಹೇರಿದೆ.
ಯೂಸೆಫ್ ಹೊಸಮ್ ಸಹ ಆಟಗಾರರಿಗೆ ಮ್ಯಾಚ್ ಫಿಕ್ಸಿಂಗ್ ನಡೆಸಲು ಅಮಿಷ ಒಡ್ಡಿರುವುದು ಬೆಳಕಿಗೆ ಬಂದಿತ್ತು. ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದ ನಂತರ ತನಿಖೆಗೆ ಒಳಪಡಿಸಲಾಗಿತ್ತು. ಆದರೆ ಯೂಸೆಫ್ ಹೊಸಮ್ ತನ್ನ ತಪ್ಪನ್ನು ಒಪ್ಪಿರಲಿಲ್ಲ.
ಇದೀಗ ತನಿಖೆ ನಡೆದು ಯೂಸೆಫ್ ಹೊಸಮ್ ನ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದೆ. ಹೀಗಾಗಿ ಭವಿಷ್ಯದ ಟೆನ್ನಿಸ್ ಕೂಟಗಳಿಂದ ಆತನನ್ನು ಹೊರಗಿಡಲಾಗಿದೆ, ನಿಷೇಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯೂಸೆಫ್ ಹೊಸಮ್ ಒಂದು ಕಾಲದಲ್ಲಿ ಕಿರಿಯರ ವಿಭಾಗದಲ್ಲಿ ಎಟಿಪಿ ಕೂಟದಲ್ಲಿ ನಂಬರ್ 1 ಶ್ರೇಯಾಂಕದ ಆಟಗಾರನಾಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.