ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ; ಪಾಕಿಸ್ಥಾನದ ಎದುರು ಭಾರತಕ್ಕೆ ಸೋಲು
Team Udayavani, Jul 23, 2023, 9:32 PM IST
ಕೊಲಂಬೊ: ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್ ಕೂಟದ ರವಿವಾರ ನಡೆದ ಫೈನಲ್ ಹೋರಾಟದಲ್ಲಿ ಭಾರತ “ಎ’ ತಂಡ ಪಾಕಿಸ್ಥಾನ “ಎ’ ತಂಡದ ಎದುರು ಸೋಲು ಅನುಭವಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಬ್ಬರಿಸಿದ ಪಾಕಿಸ್ತಾನ ‘ಎ’ ತಂಡ 128 ರನ್ಗಳ ಅಮೋಘ ಜಯ ಸಾಧಿಸಿತು
ಭಾರತ ಎ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿಯಾಗಿ ಆಟ ಆರಂಭಿಸಿದ ಪಾಕಿಸ್ಥಾನ 50 ಓವರ್ ಗಳಲ್ಲಿ 8 ವಿಕೆಟ್ 352 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ಸ್ಪೋಟಕ ಶತಕ ಸಿಡಿಸಿದ ತಯ್ಯಬ್ ತಾಹಿರ್ 108 ರನ್ ಗಳಿಸಿ ಔಟಾದರು. ಆರಂಭಿಕರಾದ ಸೈಮ್ ಅಯೂಬ್ 59, ಸಾಹಿಬ್ಜಾದಾ ಫರ್ಹಾನ್ 65 ರನ್ ಗಳಿಸಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ಒಮೈರ್ ಯೂಸುಫ್ 35, ಮುಬಾಸಿರ್ ಖಾನ್ 35 ರನ್ ಗಳಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ಭಾರತ 40 ಓವರ್ ಗಳಲ್ಲಿ 224 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಯಿ ಸುದರ್ಶನ್ 29, ಅಭಿಷೇಕ್ ಶರ್ಮಾ 61, ನಾಯಕ ಯಶ್ ಧುಲ್ 39, ಹೊರತು ಪಡಿಸಿ ನೆಲಕಚ್ಚಿ ಆಡುವಲ್ಲಿ ಯಾರೂ ಸಫಲವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.